ಸಲ್ಮಾನ್ ಖಾನ್ - ಮಮ್ಮುಟ್ಟಿ : ಡ್ರಗ್ ಕೇಸ್ ಆರೋಪಿ ಫಾಜಿಲ್ ಜೊತೆ ಸ್ಟಾರ್ಸ್!
ಸ್ಯಾಂಡಲ್‌ವುಡ್ ಡ್ರಗ್ ಕೇಸ್ ಆರೋಪಿಗಳಲ್ಲಿ ಒಬ್ಬ ಶೇಕ್ ಫಾಜಿಲ್. ಸಿಸಿಬಿ ಡ್ರಗ್ ಕೇಸ್‌ನಲ್ಲಿ ಫಾಜಲ್‌ನನ್ನು ಅರೋಪಿಯಾಗಿ ಹೆಸರಿಸಿದ ನಂತರ, ಫಾಜಿಲ್ ಜೊತೆ ಇರುವ ಬಾಲಿವುಡ್‌ನ ಸೆಲೆಬ್ರೆಟಿಗಳು ಹಾಗೂ ಮಲೆಯಾಳಂ ಸಿನಿ ಇಂಡಸ್ಟ್ರಿಯ ಐಕಾನ್‌ಗಳ ಫೋಟೋಗಳು ಹೊರಬಂದಿದೆ. ಸಲ್ಮಾನ್ ಖಾನ್‌ನಿಂದ ಹಿಡಿದು ಮಮ್ಮುಟ್ಟಿವರೆಗೆ, ಫಾಜಿಲ್ ಜೊತೆಯಿರುವ ಫೋಟೋಗಳು ನೆಟ್ಟಿಗರಿಗೆ ಶಾಕ್ ನೀಡಿದೆ.
ಸಲ್ಮಾನ್ ಖಾನ್ ಜೊತೆ ಫಾಜಿಲ್. ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳ ಹೆಸರು ಹೊರಬಂದ ನಂತರ ಡ್ರಗ್ ಕೇಸ್ ಆರೋಪಿ ಶೇಕ್ ಫಾಜಿಲ್ ಫೋಟೋಗಳು ಸ್ಟಾರ್‌ಗಳ ಜೊತೆ ಹರಿದಾಡುತ್ತಿವೆ.
ಶಿಲ್ಪಾ ಶೆಟ್ಟಿ ಮತ್ತು ಫಾಜಿಲ್: ನಟಿ ಶಿಲ್ಪಾ ಶೆಟ್ಟಿ ಹಾಗೂ ಪತಿ ರಾಜ್ ಕುಂದ್ರಾರ ಈ ಫೋಟೋ ವೈರಲ್ ಆಗಿದೆ. ಆರೋಪಿ ಫಾಜಿಲ್ ಜೊತೆ ಶೆಟ್ಟಿ ಟ್ರೆಡಿಷನಲ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಹಬ್ಬದ ಸೀಸನ್‌ನಲ್ಲಿ ಈ ಕಪಲ್ ಅನ್ನು ಫಾಜಿಲ್ ಕ್ಯಾಸಿನೊಗೆ ಇನ್ವೈಟ್ ಮಾಡಿರಬಹುದು ಎಂದು ತೋರುತ್ತಿದೆ.
ಮಮ್ಮುಟ್ಟಿ: ಆರೋಪಿ ಫಾಜಿಲ್ ಬಾಲಿವುಡ್, ಟಾಲಿವುಡ್, ಸ್ಯಾಂಡಲ್‌ವುಡ್ ಮಾತ್ರವಲ್ಲದೆ ಮಾಲಿವುಡ್‌ನಲ್ಲೂ ನೆಟ್ವರ್ಕ್ ಹೊಂದಿದ್ದಾನೆ. ಡ್ರಗ್ ಕೇಸ್ ಅರೋಪಿ ಜೊತೆ ಮಲೆಯಾಳಂ ಸೂಪರ್‌ಸ್ಟಾರ್ ಮಮ್ಮುಟ್ಟಿ ಈ ಫೋಟೋ ನಟನ ಫ್ಯಾನ್ಸ್‌ಗೆ ಶಾಕ್ ನೀಡಿದೆ.
ಅರ್ಜುನ್ ರಾಂಪಾಲ್ : ಮಾಡೆಲ್ ಕಮ್ ನಟ ಅರ್ಜುನ್ ರಾಂಪಾಲ್‌ರ ಈ ಫೋಟೋ ಕ್ರಿಕೆಟ್ ಮ್ಯಾಚಿಗೆ ಸಂಬಂಧಿಸಿದಂತೆ ಕಂಡುಬರುತ್ತಿದೆ. ಆದರೂ, ಆರೋಪಿ ಫಾಜಿಲ್ ಜೊತೆ ಕಾಣಿಸಿಕೊಂಡಿರುವುದು ಅನುಮಾನಕ್ಕೆ ಕಾರಣವಾಗಿದೆ.
ಸೊಹೈಲ್ ಖಾನ್ : ಫಾಜಿಲ್ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಫ್ಯಾಮಿಲಿ ಜೊತೆ ನಿಕಟ ಸಂಬಂಧ ಹೊಂದಿದಂತೆ ತೋರುತ್ತದೆ. ಅರ್ಬಾಜ್ ಮತ್ತು ಸಲ್ಮಾನ್ ಜೊತೆ ಆರೋಪಿಯ ಫೋಟೋ ಸುದ್ದಿಯಾದ ನಂತರ ಫಾಜಿಲ್‌ನನ್ನು ಹಗ್ ಮಾಡಿರುವ ಸೊಹೈಲ್ ಖಾನ್ ಫೋಟೋ ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗಿದೆ.
ಕೇವಲ ಸ್ಟಾರ್ ನಟರೊಂದಿಗೆ ಮಾತ್ರವಲ್ಲ, ನಟಿಯರೊಂದಿಗೂ ಫಾಜಿಲ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಇಶಾ ಕೊಪ್ಪಿಕರ್ : ಆರೋಪಿ ಜೊತೆ ಬಾಲಿವುಡ್‌ನ ಇನ್ನೊಬ್ಬ ಸೆಲೆಬ್ರೆಟಿ ನಟಿ ಇಶಾ ಕೊಪ್ಪಿಕರ್ ಕಾಣಿಸಿಕೊಂಡಿದ್ದಾರೆ. ಫೋಟೋವನ್ನು ಬಾಲಿಯ ಕ್ಯಾಸಿನೊದ 24ನೇ ವಾರ್ಷಿಕೋತ್ಸವದಲ್ಲಿ ಕ್ಲಿಕ್ ಮಾಡಲಾಗಿದೆ.