- Home
- Entertainment
- Cine World
- ಲೇಡಿ ಸೂಪರ್‌ಸ್ಟಾರ್ ಪಟ್ಟಕ್ಕೆ ಈ ಇಬ್ಬರು ಸ್ಟಾರ್ ನಟಿಯರ ನಡುವೆ ಸ್ಫರ್ಧೆ: ಅಷ್ಟಕ್ಕೂ ಯಾರಾಗ್ತಾರೆ?
ಲೇಡಿ ಸೂಪರ್‌ಸ್ಟಾರ್ ಪಟ್ಟಕ್ಕೆ ಈ ಇಬ್ಬರು ಸ್ಟಾರ್ ನಟಿಯರ ನಡುವೆ ಸ್ಫರ್ಧೆ: ಅಷ್ಟಕ್ಕೂ ಯಾರಾಗ್ತಾರೆ?
ದಕ್ಷಿಣ ಭಾರತೀಯ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಎಂದರೆ ನೆನಪಾಗುವುದು ನಯನತಾರಾ ಅವರು. ವಿಜಯ್ ಶಾಂತಿ ನಂತರ ಈ ಪಟ್ಟಕ್ಕೇರಿದವರು ನಯನತಾರಾ.

ಸಾಯಿ ಪಲ್ಲವಿ ಹಾಗೂ ರಶ್ಮಿಕಾ ಮಂದಣ್ಣ ನಡುವೆ ಸ್ಪರ್ಧೆ ಶುರುವಾಗಿದೆ. ಈ ಜಿದ್ದಾಜಿದ್ದಿ ತೆರೆ ಮೇಲೆ ಅಲ್ಲ, ತೆರೆ ಹಿಂದೆ. ಅದು ಕೂಡ ಮುಂದಿನ ಲೇಡಿ ಸೂಪರ್‌ಸ್ಟಾರ್ ಯಾರೆಂಬ ವಿಚಾರಕ್ಕೆ.
ಸದ್ಯಕ್ಕೆ ದಕ್ಷಿಣ ಭಾರತೀಯ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಎಂದರೆ ನೆನಪಾಗುವುದು ನಯನತಾರಾ ಅವರು. ವಿಜಯ್ ಶಾಂತಿ ನಂತರ ಈ ಪಟ್ಟಕ್ಕೇರಿದವರು ನಯನತಾರಾ.
ನಯನತಾರಾ ನಂತರ ನಟಿ ಸಮಂತಾ ಅವರೇ ಲೇಡಿ ಸೂಪರ್ ಸ್ಟಾರ್ ಪಟ್ಟಕ್ಕೇರುತ್ತಾರೆ ಎಂದುಕೊಳ್ಳುತ್ತಿರುವಾಗಲೇ ಅವರ ಸಿನಿಮಾ ರೇಸು ಮಂದಗತಿಯ ನಡಿಗೆ ಆರಂಭಿಸಿರುವುದರಿಂದ ರಶ್ಮಿಕಾ ಮಂದಣ್ಣ ಹಾಗೂ ಸಾಯಿ ಪಲ್ಲವಿ ಹೆಸರುಗಳು ಕೇಳಿ ಬರುತ್ತಿವೆ.
ಈ ಇಬ್ಬರು ಬಹುತೇಕ ಸೌತ್ ಸ್ಟಾರ್‌ಗಳ ಜತೆಗೆ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ರಶ್ಮಿಕಾ ಮಂದಣ್ಣ ಬಾಲಿವುಡ್‌ಗೂ ಹೋಗಿ ಬಂದಿದ್ದಾರೆ.
ಸಕ್ಸಸ್ ರೇಟಿನಲ್ಲಿ ಹಾಗೂ ಅವಕಾಶಗಳ ವಿಚಾರದಲ್ಲಿ ಇಬ್ಬರೂ ಸರಿಸಮಾನವಾಗಿದ್ದಾರೆ. ಹೀಗಾಗಿ ಇಬ್ಬರಲ್ಲಿ ಯಾರಾದರೂ ಒಬ್ಬರು ಮುಂದಿನ ಸೌತ್ ಸಿನಿ ರಂಗದ ಲೇಡಿ ಸೂಪರ್ ಸ್ಟಾರ್ ಪಟ್ಟಕ್ಕೇರಲಿದ್ದಾರೆ ಎಂಬುದು ಸದ್ಯದ ಟಾಕ್.