ತಂಗಿ ನಿಶ್ಚಿತಾರ್ಥದಲ್ಲಿ ಕುಣಿದು ಕುಪ್ಪಳಿಸಿದ ಸಾಯಿ ಪಲ್ಲವಿ; ಏನ್ ಎನರ್ಜಿ ಗುರು!
ಅಕ್ಕ-ತಂಗಿಯಲ್ಲಿ ಏನ್ ಎನರ್ಜಿ ಗುರು? ಸೆಂತಾಮರೈ ಫ್ಯಾಮಿಲಿ ಡ್ಯಾನ್ಸ್ ನೋಡಿ ಥ್ರಿಲ್ ಆದ ನಟ್ಟಿಗರು.

ಮಾಲಿವುಡ್ ಮಲರ್, ಕಾಲಿವುಡ್ ಸುಂದರಿ ಸಾಯಿ ಪಲ್ಲವಿ ಸೆಂತಾಮರೈ ಸಹೋದರಿ ಪೂಜಾ ಮತ್ತು ಗೆಳೆಯ ವಿನೀತ್ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡರು.
ಎರಡು ಸಿಂಪಲ್ ಸೀರೆ ಲುಕ್‌ನಲ್ಲಿ ಕಾಣಿಸಿಕೊಂಡ ಸಾಯಿ ಪಲ್ಲವಿಯನ್ನು ಮೆಚ್ಚಿಕೊಂಡ ನೆಟ್ಟಿಗರು, ಸೆಂತಾಮರೈ ಫ್ಯಾಮಿಲಿ ಎನರ್ಜಿಗೆ ಬೋಲ್ಡ್ ಆಗಿಬಿಟ್ಟಿದ್ದಾರೆ.
ನಿಶ್ಚಿತಾರ್ಥ ಮುಗಿದ ನಂತರ ಸಾಯಿ ಪಲ್ಲವಿ ಕುಟುಂಬ ಮತ್ತು ವಿನೀತ್ ಕುಟುಂಬ ಸಣ್ಣ ಪುಟ್ಟ ಗೇಮ್‌ಗಳನ್ನು ಆಟವಾಡಿದ್ದಾರೆ. ವಿಡಿಯೋದಲ್ಲಿ ಟಗ್‌ಆಫ್ ವಾರ್ ಕಾಣಿಸುತ್ತದೆ.
ಅಲ್ಲದೆ ಈಗ ಟ್ರೆಂಡ್‌ನಲ್ಲಿರುವ ಹಾಡುಗಳಿಗೆ ನಿಶ್ಚಿತಾರ್ಥಕ್ಕೆ ಆಗಮಿಸಿದ ಪ್ರತಿಯೊಬ್ಬರು ಡ್ಯಾನ್ಸ್ ಮಾಡಿದ್ದಾರೆ ಎಂಜಾಯ್ ಮಾಡಿದ್ದಾರೆ. ಈ ವಿಡಿಯೋ ಪೂಜಾ ಅಪ್ಲೋಡ್ ಮಾಡಿದ್ದಾರೆ.
ಒಂದು ಕಡೆ ಪೂಜಾ ಎಲ್ಲರ ಗಮನ ಸೆಳೆಯುತ್ತಿದ್ದರೆ ಮತ್ತೊಂದು ಕಡೆ ಆಕೆಯ ಭಾವಿ ಪತಿ, ಅತ್ತೆ ಮತ್ತು ಮಾವ ಎನರ್ಜಿ ನೋಡಿ ಈ ಫ್ಯಾಮಿಲಿ ಸೂಟ್ ಆಗುತ್ತಾರೆ ಅಂತಾರೆ.
ವಿದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿರುವ ಪೂಜಾ ಹಲವು ವರ್ಷಗಳಿಂದ ವಿನೀತ್‌ರನ್ನು ಪ್ರೀತಿಸುತ್ತಿದ್ದರು. ಪಲ್ಲವಿ ಸಿನಿಮಾ ಕ್ಷೇತ್ರದಲ್ಲಿ ಬ್ಯುಸಿಯಾಗಿರುವ ಕಾರಣ ಸಹೋದರಿಯ ಮದುವೆ ಮಾಡಲು ಮುಂದಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.