ಓಣಂಗೂ ಮುನ್ನ ಪ್ರಿಯಾ ವಾರಿಯರ್ ಪೋಟೋ ವೈರಲ್.. ಅಂಥದ್ದೇನಿದೆ?
ಬೆಂಗಳೂರು(ಆ. 21) ಕಣ್ಣು ಸನ್ನೆಯ ಹುಡುಗಿ , ಮಾಲಿವುಡ್ ಸುಂದರಿ ಪ್ರಿಯಾ ಪ್ರಕಾಶ್ ವಾರಿಯರ್ ಸಾಂಪ್ರದಾಯಿಕ ಲುಕ್ ನಲ್ಲಿ ಹಾಜರಾಗಿದ್ದಾರೆ.
ಪ್ರಿಯಾ ಪ್ರಕಾಶ್ ವಾರಿಯರ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿರುವ ಪೋಟೋಗಳು ಸಖತ್ ವೈರಲ್ ಆಗುತ್ತಿದೆ. ಪೋಟೋ ಶೂಟ್ ಅಭಿಮಾನಿಗಳ ಹೃದಯ ಕದ್ದಿದೆ.
ತಮ್ಮ ಲೆಟೆಸ್ಟ್ ಫೋಟೋಶೂಟ್ನ ಸ್ಟಿಲ್ಗಳನ್ನು ಹಂಚಿಕೊಂಡಿದ್ದಾರೆ. ಅದು ಈಗ ವೈರಲ್ ಆಗುತ್ತಿದೆ. ಪ್ರಿಯಾ ಪ್ರಕಾಶ್ ವಾರಿಯರ್ ಸಿನಿಮಾಗಳ ಮೂಲಕ ಸದ್ದು ಮಾಡದೇ ಹೋದರು ಅವರ ಫೋಟೋಶೂಟ್ಗಳು ಹವಾ ಎಬ್ಬಿಸುತ್ತದೆ.
ಇನ್‌ಸ್ಟಾಗ್ರಾಂನಲ್ಲಿ 7 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಪ್ರಿಯಾ ವಾರಿಯರ್ ಅಂದರೆ ಕಣ್ಣು ಸನ್ನೆಯ ಹುಡುಗಿ ಎಂದೇ ಫೇಮಸ್
ಸ್ನೇಹಿತರ ಜೊತೆ ರಷ್ಯಾ ಪ್ರವಾಸದಲ್ಲಿರುವ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ. ತಮ್ಮ ವಿಡಿಯೋವನ್ನು ಕತ್ತರಿಸಿ ಬೇರೋಬ್ಬರ ವಿಡಿಯೋ ಜೊತೆ ಜೋಡಿಸಿ ತಪ್ಪಾಗಿ ಶೀರ್ಷಿಕೆ ಕೊಟ್ಟು ಪೋಸ್ಟ್ ಮಾಡಿದ್ದವರನ್ನು ತರಾಟೆಗೆ ತೆಗೆದುಕೊಂಡಿದ್ದರು.
ಪ್ರಿಯಾ ಸದ್ಯ ಎರಡು ತೆಲುಗು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ನಿತಿನ್ ಮತ್ತು ತೇಜಾ ತೇಜಾ ಜತೆ ಕಾಣಿಸಿಕೊಳ್ಳಲಿದ್ದಾರೆ. ಕೊರೋನಾ ಕಾರಣಕ್ಕೆ ಸಿನಿಮಾದ ಕೆಲಸಗಳು ಅರ್ಧಕ್ಕೆ ನಿಂತಿದ್ದವು.
ಹಿಂದೊಮ್ಮೆ ಪ್ರಿಯಾ ವಾರಿಯರ್ ಹಂಚಿಕೊಂಡಿದ್ದ ಬೋಲ್ಡ್ ಪೋಟೋಗಳು ಟ್ರೋಲ್ ಗಳಿಗೆ ಆಹಾರವಾಗಿತ್ತು. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಎದುರಿಗೆ ಬಂದಿದ್ದು ಸಾಕಷ್ಟು ಕಮೆಂಟ್ ಗಳು ಹರಿದು ಬರುತ್ತಿವೆ .
ಓಣಂ ಹಬ್ಬಕ್ಕೆ ಅಭಿಮಾನಿಗಳಿಗೆ ಪ್ರಿಯಾ ಗಿಫ್ಟ್ ಕೊಟ್ಟಿದ್ದಾರೆ ಎನ್ನಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಪೋಟೋಗಳು ವೈರಲ್ ಆಗಲು ಆರಂಭಿಸಿವೆ.