ಊದಿದ ಕಾಲು, ನಡೆಯಲು ಕಷ್ಟ ಪಡುತ್ತಿರುವ ಕರೀನಾ ಫೋಟೊ ವೈರಲ್!
ಬಾಲಿವುಡ್ ದಿವಾ ಕರೀನಾ ಕಪೂರ್‌ರ ಪ್ರೆಗ್ನೆಂಸಿಯ ಕೊನೆಯ ತಿಂಗಳು ನಡೆಯುತ್ತಿದೆ. ಯಾವುದೇ ಸಮಯದಲ್ಲಿ ಕರೀನಾ ತಮ್ಮ ಎರಡನೇ ಮಗುವಿಗೆ ಜನ್ಮ ನೀಡಲಿದ್ದಾರೆ. ಈ ಪರಿಸ್ಥಿತಿಯಲ್ಲಿ, ಕರೀನಾ ಕಾಲುಗಳು ಊದಿಕೊಂಡಿದ್ದು, ಆಕೆಗೆ ನಡೆಯುವುದು ಕಷ್ಟವಾಗುತ್ತಿದೆ. ಇದರ ಹೊರತಾಗಿಯೂ, ಮನೆಯಲ್ಲಿ ವಿಶ್ರಾಂತಿ ಪಡೆಯುವ ಬದಲು, ಕರೀನಾ ಜಾಹೀರಾತುಗಳನ್ನು ಚಿತ್ರೀಕರಿಸುತ್ತಿದ್ದಾರೆ. ಗುರುವಾರ ಶೂಟಿಂಗ್‌ಗಾಗಿ ಮುಂಬೈನ ಬಾಂದ್ರಾದಲ್ಲಿ ಕಾಣಸಿಕೊಂಡ ನಟಿ, ಪಿಂಕ್ ಬಣ್ಣದ ಉಡುಪಿನಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದಳು. ಕರೀನಾ ಅವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಪ್ರೆಗ್ನೆಂಸಿಯಲ್ಲಿ ನಟಿಯರ ಬೇಬಿ ಬಂಪ್ ಫೋಟೋ ತೆಗೆಯಲು ಹರಸಾಹಸ ಪಡಬೇಕಿತ್ತು. ಆದರೆ, ಫೋಟೋ ಪೋಸ್ ನೀಡುವ ಟ್ರೆಂಡ್ ಸೃಷ್ಟಿಸಿದ್ದಾರೆ ಕರೀನಾ ಕಪೂರ್.
ಯಾವಾಗ ಬೇಕಾದರೂ ಕರೀನಾ ತಮ್ಮ ಎರಡನೇ ಮಗುವಿಗೆ ಜನ್ಮ ನೀಡಬಹುದು. ತುಂಬು ಗರ್ಭಿಣಿಯಾದರೂ ಕರೀನಾ ಶೂಟಿಂಗ್ ಮಾಡುತ್ತಿದ್ದಾರೆ. ಮುಂಬೈನಲ್ಲಿ ಚಿತ್ರೀಕರಣಕ್ಕಾಗಿ ಕರೀನಾ ಮನೆಯಿಂದ ಹೊರಬಂದಾಗ, ಸುಂದರ ನಗುವಿನೊಂದಿಗೆ ಫೋಟೋಗ್ರಾಫರ್ಸ್‌ಗೆ ಪೋಸ್ ನೀಡಿದರು.
ಕರೀನಾ ಕೆಲವು ಸಮಯದಿಂದ ಸಖತ್ ಚರ್ಚೆಯಲ್ಲಿದ್ದಾರೆ ಮತ್ತು ಅವರ ಬೇಬಿ ಬಂಪ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ನಿರಂತರವಾಗಿ ವೈರಲ್ ಆಗುತ್ತಿವೆ. ಕೆಲವು ದಿನಗಳ ಹಿಂದೆ ಆಕೆ ಯೋಗ ಮಾಡುವ ಫೋಟೋಗಳನ್ನು ಪೋಸ್ಟ್ ಮಾಡಲಾಗಿತ್ತು. ಆಗಲೂ ಅವರು ಬ್ರ್ಯಾಂಡ್‌ವೊಂದನ್ನು ಪ್ರಮೋಟ್ ಮಾಡಿದ್ದರು.
ಈ ಬಾರಿ ಕರೀನಾ ಯಾವ ಹೆಣ್ಣು/ ಗಂಡು ಮಗುವಿಗೆ ತಾಯಿಯಾಗುತ್ತಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ನಡುವೆ ಚರ್ಚೆ ನೆಡೆಯುತ್ತಿದೆ. ನಟಿ ಈ ಬಾರಿ ಹೆಣ್ಣು ಮಗುವಿಗೆ ಜನ್ಮ ನೀಡಲಿದ್ದಾರೆ ಎಂದು ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದಾರೆ.
ಫೆಬ್ರವರಿ ಆರಂಭದಲ್ಲಿ ಕರೀನಾ ಹೆರಿಗೆ ದಿನಾಂಕ ಎಂದು ಸೈಫ್ ಸಂದರ್ಶನವೊಂದರಲ್ಲಿ ಹೇಳಿದರು.
ಕರೀನಾ ಮತ್ತು ಸೈಫ್ ಇನ್ನೂ ಮಗುವಿಗೆ (ಮಗ / ಮಗಳು) ಯಾವುದೇ ಹೆಸರನ್ನು ಯೋಚಿಸಿಲ್ಲ. 'ನನ್ನ ಮೊದಲ ಮಗ ತೈಮೂರ್ ಹೆಸರಿಗೆ ಸಾಕಷ್ಟು ವಿವಾದ ಸೃಷ್ಟಿಯಾಗಿತ್ತು. ಇಲ್ಲೀವರೆಗೆ ನಾವು ಯಾವುದೇ ಹೆಸರಿನ ಬಗ್ಗೆ ಯೋಚಿಸಿಲ್ಲ ಮತ್ತು ಯಾವ ಹೆಸರನ್ನು ನಿರ್ಧರಿಸಿದರೂ ಅದನ್ನು ತಕ್ಷಣವೇ ಫೈನಲೈಸ್ ಮಾಡುವುದಿಲ್ಲ,' ಎಂದು ಕರೀನಾ ಸ್ವತಃ ಈ ಬಗ್ಗೆ ಟಾಕ್ ಶೋವೊಂದರಲ್ಲಿ ಹೇಳಿದ್ದರು.
ಕರೀನಾ ಶೀಘ್ರದಲ್ಲೇ ಅಮೀರ್ ಖಾನ್ ಜೊತೆ ಲಾಲ್ ಸಿಂಗ್ ಚಾಡ್ಡಾದಲ್ಲಿ ನಟಿಸಿದ್ದು, ಶೀಘ್ರದಲ್ಲಿಯೇ ರಿಲೀಸ್ ಆಗಲಿದೆ.