ಹಸಿರು ಡೀಪ್ ನೆಕ್ ಡ್ರೆಸ್ನಲ್ಲಿ ಪೂಜಾ ಹೆಗ್ಡೆ, ಅಭಿಮಾನಿಗಳು ಫುಲ್ ಫಿದಾ!
ನಟಿ ಪೂಜಾ ಹೆಗ್ಡೆ (Pooja Hegde) ಅವರ ಮುಂಬರುವ ಚಿತ್ರ 'ರಾಧೆ ಶ್ಯಾಮ್' (Radhe Shyam) ಕಾರಣ ಇತ್ತೀಚಿನ ದಿನಗಳಲ್ಲಿ ಚರ್ಚೆಯಲ್ಲಿದ್ದಾರೆ. ಅವರು ಬಾಹುಬಲಿ ಸ್ಟಾರ್ ಪ್ರಭಾಸ್ (Prabhas) ಜೊತೆಗೆ ಚಿತ್ರದ ಪ್ರಚಾರದಲ್ಲಿ ನಿರತರಾಗಿದ್ದಾರೆ. ಚಿತ್ರದಲ್ಲಿ ಪ್ರಭಾಸ್ ಮತ್ತು ಪೂಜಾ ಹೆಗ್ಡೆ ರೊಮ್ಯಾನ್ಸ್ ಮಾಡಲಿದ್ದಾರೆ. ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಪ್ರಮೋಷನ್ ವೇಳೆಯಲ್ಲಿ ಪೂಜಾ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ ಮತ್ತು ಆ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ನಟಿ ಫೋಸ್ಟ್ ಮಾಡಿದ್ದಾರೆ ಕೂಡ.
ರಾಧಾ ಕೃಷ್ಣ ಕುಮಾರ್ ನಿರ್ದೇಶನದ ಈ ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡಲಿದೆ ಎಂದು ಹೇಳಲಾಗುತ್ತಿದೆ. ಚಿತ್ರದ ಪ್ರಚಾರದ ವೇಳೆ ಪೂಜಾ ಹೆಗ್ಡೆ ಸೆಕ್ಸಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಇತ್ತೀಚೆಗೆ, ನಟಿ ತಮ್ಮ ಇನ್ಸ್ಟಾಗ್ರಾಮ್ ಆಕೌಂಟ್ನಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಪೂಜಾ ಹೆಗ್ಡೆ ತಮ್ಮ ಬಾಡಿಕಾನ್ ಮಿಡಿ ಡ್ರೆಸ್ನಲ್ಲಿರುವ ಕೆಲವು ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ.
ನಟಿ ಹಸಿರು ಡೀಪ್ ನೆಕ್ ಡ್ರೆಸ್ನಲ್ಲಿ ಪೋಸ್ ನೀಡಿರುವುದು ಕಂಡುಬರುತ್ತದೆ. ಇದರೊಂದಿಗೆ, ಅವರು ಡಿಸೈನರ್ ಕಿವಿ ಓಲೆ ಮತ್ತು ಉಂಗುರಗಳನ್ನು ಧರಿಸುವ ಮೂಲಕ ತಮ್ಮ ಲುಕ್ ಅನ್ನು ಕಂಪ್ಲೀಟ್ ಮಾಡಿದ್ದಾರೆ.
ಹೆಗ್ದೆ ನ್ಯೂಡ್ ಪಿಂಕ್ ಲಿಪ್ ಶೇಡ್, ಮಿನಿಮಲ್ ಮೇಕ್ಅಪ್, ರೆಪ್ಪೆ ಮೇಲೆ ತಿಳಿ ಮಸ್ಕರಾ, ಕೆನ್ನೆಯ ಮೇಲೆ ಬ್ಲಶ್ ಮತ್ತು ಮುಖದ ಮೇಲೆ ಹೈಲೈಟರ್ನಿಂದ ತನ್ನನ್ನು ಅಲಂಕರಿಸಿಕೊಂಡಿದ್ದಾರೆ.
ಇದಲ್ಲದೆ, ಪೂಜಾ ಅವರು ವೈನ್ ಕಲರ್ ಡ್ರೆಸ್ನಲ್ಲಿರುವ ಕೆಲವು ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ. ಈ ಡ್ರೆಸ್ನಲ್ಲಿ ಅವರು ತುಂಬಾ ಮುದ್ದಾಗಿ ಕಾಣುತ್ತಿದ್ದಾರೆ. ಪೂಜಾ ಹೆಗ್ಡೆ ಹಾಲ್ಟರ್ ನೆಕ್ಲೈನ್ನೊಂದಿಗೆ ಬಾಡಿಕಾನ್ ಮಿಡಿ ಉಡುಪನ್ನು ಧರಿಸಿದ್ದರು.
ಜೊತೆಗೆ ಸ್ಟಿಲೆಟ್ಟೊ ಹೀಲ್ಸ್, ಸಿಲ್ವರ್ ರಿಂಗ್ಗಳು, ಬ್ರೇಸ್ಲೆಟ್ ಮತ್ತು ಹೂಪ್ ಕಿವಿಯೋಲೆಗಳನ್ನು ಧರಿಸಿದ್ದರು. ಈ ಎಲ್ಲಾ ಡಿಸೈನರ್ ಆಕ್ಸಸರಿಸ್ ಪೂಜಾ ಹೆಗ್ಡೆ ಅವರ ಲುಕ್ಅನ್ನು ಹೆಚ್ಚು ಆಕರ್ಷಕವಾಗಿಸಲು ಸಹಾಯ ಮಾಡಿದೆ.
ನಟಿಯ ಫೋಟೋಗಳನ್ನು ನೋಡಿದ ಅಭಿಮಾನಿಗಳು ನಿದ್ರೆ ಹಾಳಾಗಿದೆ. ಕೆಲವರು ಅವರನ್ನು ಬ್ಯೂಟಿ ಬ್ಯೂಟಿ ಎಂದು ಕರೆದರೆ, ಇನ್ನೂ ಕೆಲವರು ಸೆಕ್ಸಿ ಎಂದಿದ್ದಾರೆ. ಇದಲ್ಲದೆ, ಸಾಕಷ್ಟು ಹೃದಯ ಮತ್ತು ಬೆಂಕಿಯ ಎಮೋಜಿಯನ್ನು ಹಂಚಿಕೊಳ್ಳುತ್ತಿದ್ದಾರೆ.
ಪೂಜಾ ಹೆಗ್ಡೆ ಮತ್ತು ಪ್ರಭಾಸ್ ಅಭಿನಯದ ರಾಧೆ ಶ್ಯಾಮ್ ಚಿತ್ರ ಹಲವು ಭಾಷೆಗಳಲ್ಲಿ ಮಾರ್ಚ್ 11 ರಂದು ಭಾರತದಾದ್ಯಂತ ಬಿಡುಗಡೆಯಾಗಲಿದೆ. ಅದೇ ಸಮಯದಲ್ಲಿ, ಈ ಸಿನಿಮಾವು ಒಂದೇ ದಿನದಲ್ಲಿ ಪ್ರಪಂಚದಾದ್ಯಂತ ಬಿಡುಗಡೆಯಾಗಲಿದೆ. ಇದೊಂದು ರೋಮ್ಯಾಂಟಿಕ್ ಸಿನಿಮಾವಾಗಿದೆ.