Asianet Suvarna News Asianet Suvarna News

Radhe Shyam Trailer: ಪ್ರಭಾಸ್-ಪೂಜಾ ಹೆಗ್ಡೆ ಚಿತ್ರಕ್ಕೆ ಧ್ವನಿ ನೀಡಿದ ಶಿವಣ್ಣ

ಟಾಲಿವುಡ್‌ನ  ಪ್ರಭಾಸ್ ಸದ್ಯ 'ರಾಧೆ ಶ್ಯಾಮ್' ಬಿಡುಗಡೆಯ ಸಿದ್ಧತೆಯಲ್ಲಿದ್ದಾರೆ. ಕೆಲ ದಿನಗಳ ಮೊದಲು ಟ್ರೇಲರ್‌ವೊಂದನ್ನು ಬಿಡುಗಡೆ ಮಾಡಿದ್ದ ಚಿತ್ರತಂಡ ಇದೀಗ ಮತ್ತೊಂದು ಟ್ರೇಲರ್‌ನ್ನು ಬಿಡುಗಡೆ ಮಾಡಿದೆ. 

ಟಾಲಿವುಡ್‌ನ  ಪ್ರಭಾಸ್ (Prabhas) ಸದ್ಯ 'ರಾಧೆ ಶ್ಯಾಮ್' (Radhe Shyam) ಬಿಡುಗಡೆಯ ಸಿದ್ಧತೆಯಲ್ಲಿದ್ದಾರೆ. ಕೆಲ ದಿನಗಳ ಮೊದಲು ಟ್ರೇಲರ್‌ವೊಂದನ್ನು ಬಿಡುಗಡೆ ಮಾಡಿದ್ದ ಚಿತ್ರತಂಡ ಇದೀಗ ಮತ್ತೊಂದು ಟ್ರೇಲರ್‌ನ್ನು ಬಿಡುಗಡೆ ಮಾಡಿದೆ. ಹೌದು! ಚಿತ್ರಮಂದಿರಗಳಲ್ಲಿ ಬಿಡುಗಡೆಗೂ ಮುನ್ನ 'ರಾಧೆ ಶ್ಯಾಮ್'ನಲ್ಲಿ ಏನೆಲ್ಲಾ ಇರಲಿದೆ ಎಂಬುದರ ಗ್ಲಿಂಪ್ಸ್ ಅನ್ನು ಈ ಟ್ರೇಲರ್‌ನಲ್ಲಿ ಕಾಣಬಹುದಾಗಿದೆ. 1.08 ನಿಮಿಷಗಳ ಚಿಕ್ಕ ಟ್ರೇಲರ್ ಇದಾಗಿದ್ದು, ಈ ಅವಧಿಯಲ್ಲೇ ಹತ್ತು ಹಲವು ವಿಚಾರಗಳನ್ನು ಟ್ರೇಲರ್ ಹೊತ್ತುತಂದಿದೆ. 

ನಟ ಪ್ರಭಾಸ್ 'ರಾಧೆ ಶ್ಯಾಮ್' ಸಿನಿಮಾ ಒಪ್ಪಿಕೊಂಡ ನಟ ಶಿವರಾಜ್‌ಕುಮಾರ್?

ಇದನ್ನು ನೋಡಿದ ಪ್ರಭಾಸ್ ಫ್ಯಾನ್ಸ್ ಮತ್ತಷ್ಟು ಎಕ್ಸೈಟ್ ಆಗಿದ್ದಾರೆ. ಟ್ರೇಲರ್​ ಕೊನೆಯಲ್ಲಿ ಸ್ಯಾಂಡಲ್‌ವುಡ್‌ನ ಕರುನಾಡ ಚಕ್ರವರ್ತಿ ಶಿವರಾಜ್​ಕುಮಾರ್ ಧ್ವನಿ ಕೂಡ ಇದೆ. 'ಪ್ರೀತಿ ಮತ್ತು ವಿಧಿ ನಡೆಯುವ ಯುದ್ಧವೇ ರಾಧೆ ಶ್ಯಾಮ್' ಎನ್ನುವ ಸಾಲುಗಳ ಮೂಲಕ ಚಿತ್ರ ಹೇಗಿರಬಹುದು ಎಂಬ ಕಲ್ಪನೆಯನ್ನು ಟ್ರೇಲರ್ ಕಟ್ಟಿಕೊಟ್ಟಿದೆ. ಹಸ್ತಸಾಮುದ್ರಿಕ ತಿಳಿದಿರುವ ವ್ಯಕ್ತಿಯ ಪಾತ್ರದಲ್ಲಿ ಪ್ರಭಾಸ್ ಬಣ್ಣ ಹಚ್ಚಿದ್ದು, ನಾಯಕಿಯಾಗಿ ಪೂಜಾ ಹೆಗ್ಡೆ (Pooja Hegde) ಕಾಣಿಸಿಕೊಂಡಿದ್ದಾರೆ. 1970ರ ಕಾಲಘಟ್ಟದಲ್ಲಿ ಯುರೋಪ್​ನಲ್ಲಿ ನಡೆಯುವ ಕತೆ ಇದಾಗಿದೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Video Top Stories