- Home
- Entertainment
- Cine World
- 1993ರ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಮಹೇಶ್ ಬಾಬು ಪತ್ನಿ ಕೊಟ್ಟ ಉತ್ತರ ಕೇಳಿ, ಇದಕ್ಕೇ ಕಿರೀಟ ಗೆಲ್ಲಲಿಲ್ಲ ಎಂದ ನೆಟ್ಟಿಗರು!
1993ರ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಮಹೇಶ್ ಬಾಬು ಪತ್ನಿ ಕೊಟ್ಟ ಉತ್ತರ ಕೇಳಿ, ಇದಕ್ಕೇ ಕಿರೀಟ ಗೆಲ್ಲಲಿಲ್ಲ ಎಂದ ನೆಟ್ಟಿಗರು!
ಮಿಸ್ ಯೂನಿವರ್ಸ್ 1993ರಲ್ಲಿ ನಮ್ರತಾ ಶಿರೋಡ್ಕರ್ ಕೊಟ್ಟ ಉತ್ತರವೊಂದು ಇಂಟರ್ನೆಟ್‌ನಲ್ಲಿ ಹೊಸದಾಗಿ ಹರಿದಾಡುತ್ತಿದೆ. ಈ ಪೆದ್ದು ಉತ್ತರದಿಂದಾಗಿಯೇ ನಮ್ರತಾಗೆ ಮಿಸ್ ಯೂನವರ್ಸ್ ಪಟ್ಟ ಕೈ ತಪ್ಪಿತು ಎಂದು ನೆಟಿಜನ್ಸ್‌ಗಳು ಹೇಳುತ್ತಿದ್ದಾರೆ.

ಮಿಸ್ ಯೂನಿವರ್ಸ್ 1993ರಲ್ಲಿ ನಮ್ರತಾ ಶಿರೋಡ್ಕರ್ ಕೊಟ್ಟ ಉತ್ತರದ ವಿಡಿಯೋವೊಂದು ಇಂಟರ್ನೆಟ್‌ನಲ್ಲಿ ಹೊಸದಾಗಿ ಹರಿದಾಡುತ್ತಿದೆ. ಈ ಪೆದ್ದು ಉತ್ತರದಿಂದಾಗಿಯೇ ನಮ್ರತಾಗೆ ಮಿಸ್ ಯೂನವರ್ಸ್ ಪಟ್ಟ ಕೈ ತಪ್ಪಿತು ಎಂದು ನೆಟಿಜನ್ಸ್ ಹೇಳುತ್ತಿದ್ದಾರೆ.
ತೆಲುಗು ನಟ ಮಹೇಶ್ ಬಾಬು ಪತ್ನಿಯಾಗಿರುವ ನಮ್ರತಾ ಶಿರೋಡ್ಕರ್ ಸ್ವತಃ ನಟಿ ಹಾಗೂ ಮಾಡೆಲ್. 1993ರಲ್ಲಿ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಅವರು ಭಾರತವನ್ನು ಪ್ರತಿನಿಧಿಸಿದ್ದರು. ಕಡೆಯ 6 ಸ್ಪರ್ಧಿಗಳಲ್ಲಿ ಉಳಿದುಕೊಂಡಿದ್ದ ಸಂದರ್ಭದಲ್ಲಿ ಭಾರವಾದ ಕಿವಿಯೋಲೆಗಳೊಂದಿಗೆ ಗೋಲ್ಡನ್ ಗೌನ್ ಧರಿಸಿದ್ದಾರೆ ನಮ್ರತಾ ಶಿರೋಡ್ಕರ್ .
ಈ ಸಂದರ್ಭದಲ್ಲಿ 'ನೀವು ಶಾಶ್ವತವಾಗಿ ಬದುಕಲು ಅವಕಾಶ ಸಿಕ್ಕರೆ ಯಾಕಾಗಿ ನೀವು ಹಾಗೆ ಬದುಕಲು ಬಯಸುತ್ತೀರಾ' ಎಂಬ ಪ್ರಶ್ನೆಯನ್ನು ನಮ್ರತಾಗೆ ಕೇಳಲಾಗಿತ್ತು.
ಇದಕ್ಕೆ ನಮ್ರತಾ 'ನಾನು ಶಾಶ್ವತವಾಗಿ ಬದುಕಲು ಬಯಸುವುದಿಲ್ಲ. ಏಕೆಂದರೆ, ಯಾರೊಬ್ಬರೂ ಹಾಗೆ ಬದುಕುವುದು ಸಾಧ್ಯವಿಲ್ಲ ಎಂದು ನಂಬಿದ್ದೇನೆ' ಎಂದು ಉತ್ತರಿಸಿದ್ದಾರೆ. ತೀರ್ಪುಗಾರರು ಆಕೆಯ ಉತ್ತರದಿಂದ ಪ್ರಭಾವಿತರಾಗಲಿಲ್ಲ. ಆಕೆ 6ನೇ ಸ್ಥಾನಕ್ಕೇ ಉಳಿದುಕೊಂಡರು.
ನಮ್ರತಾ ಈ ಉತ್ತರ ನೆಟಿಜನ್‌ಗಳಿಗೆ ಕೂಡಾ ಇಷ್ಟವಾಗಿಲ್ಲ. ಇದೆಂಥ ಪೆದ್ದು ಉತ್ತರ! ಈ ರೀತಿ ಉತ್ತರದಿಂದಾಗಿಯೇ ನಮ್ರತಾ ವಿಶ್ವ ಸುಂದರಿ ಕಿರೀಟವನ್ನು ಕಳೆದುಕೊಂಡಿದ್ದಾರೆ ಎಂದು ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ.
ತೀರ್ಪುಗಾರರು ಕಾಲ್ಪನಿಕ ಪ್ರಶ್ನೆ ಕೇಳಿದರು- ಒಂದು ವೇಳೆ ಹಾಗಿದ್ದರೆ ನೀವೇನು ಮಾಡುತ್ತೀರಿ ಎಂದು. ಅದಕ್ಕೆ ನಮ್ರತಾ ವಾಸ್ತವದ ಉತ್ತರ ಕೊಟ್ಟಿದ್ದಾರೆ, ಇದು ಸರಿಯಲ್ಲ, ಇದಕ್ಕಾಗೇ ಅವರು ಸೋತರು ಎಂದು ಅನೇಕರು ಪ್ರತಿಕ್ರಿಯಿಸುತ್ತಿದ್ದಾರೆ.
'ನನಗೆ ಅವಳ ಉತ್ತರ ಇಷ್ಟವಾಗಲಿಲ್ಲ, ಇದು ಕಾಲ್ಪನಿಕ ಪ್ರಶ್ನೆಯಾಗಿದೆ. ಅದು ಸಾಧ್ಯವಿಲ್ಲ ಎಂದು ಹೇಳುವುದು ಸರಿಯಲ್ಲ. ಬದಲಿಗೆ ಹಾಗಾಗಿದ್ದರೆ ತಾನೇನು ಮಾಡುತ್ತಿದ್ದೆ ಎಂದು ಹೇಳಬೇಕಿತ್ತು' ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.
'ಸ್ಪರ್ಧೆಯ ಈ ರೌಂಡ್‌ನಲ್ಲಿ ಒತ್ತಡದ ಸಂದರ್ಭದಲ್ಲಿ ನೀವು ಸ್ವಯಂಪ್ರೇರಿತವಾಗಿ ಹೇಗೆ ಯೋಚಿಸುತ್ತೀರಿ ಎಂದು ಅಳೆಯಲಾಗುತ್ತದೆ. ಬಹಳಷ್ಟು ಜನರು ಇದರ ತರಬೇತಿ ಪಡೆದಿರುತ್ತಾರೆ. ಹಾಗಿದ್ದೂ ನಮ್ರತಾ ಮೂರ್ಖತನದ ಉತ್ತರ ಕೊಟ್ಟಿದ್ದು ಅವರು ಯೋಚಿಸುವ ರೀತಿಯನ್ನು ತೋರಿಸುತ್ತದೆ' ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
'ನನ್ನ ಪ್ರೀತಿಪಾತ್ರರು ಶಾಶ್ವತವಾಗಿ ಬದುಕಲು ಸಾಧ್ಯವಾದರೆ ಮಾತ್ರ ನಾನು ಶಾಶ್ವತವಾಗಿ ಬದುಕಲು ಬಯಸುತ್ತೇನೆ. ಇಲ್ಲದಿದ್ದರೆ ನನ್ನ ಸಮಯ ಬಂದಾಗ ಸಂತೋಷದಿಂದ ಪ್ರಪಂಚವನ್ನು ತೊರೆಯುತ್ತೇನೆ ಎಂದವಳು ಹೇಳಬೇಕಿತ್ತು' ಎಂದು ಬಳಕೆದಾರರೊಬ್ಬರು ಹೇಳಿದ್ದಾರೆ.
ಬಾಲಿವುಡ್ ತೊರೆಯುವ ಮೊದಲು ನಮ್ರತಾ ಅವರು, ಕಚ್ಚೆ ಧಾಗೆ, ವಾಸ್ತವ್: ದಿ ರಿಯಾಲಿಟಿ, ಪುಕಾರ್, ದಿಲ್ ವಿಲ್ ಪ್ಯಾರ್ ವ್ಯಾರ್ ಮತ್ತು ಬ್ರೈಡ್ ಅಂಡ್ ಪ್ರಿಜುಡೀಸ್‌ನಂತಹ ಹಲವಾರು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
ನಮ್ರತಾ ಮತ್ತು ಮಹೇಶ್ ಬಾಬು 2005ರಲ್ಲಿ ವಿವಾಹವಾದರು, ನಂತರ ಅವರು ತಮ್ಮ ವೃತ್ತಿಜೀವನವನ್ನು ತೊರೆದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ - ಮಗಳು ಸಿತಾರಾ ಘಟ್ಟಮನೇನಿ ಮತ್ತು ಮಗ ಗೌತಮ್ ಘಟ್ಟಮನೇನಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.