ನಿಮ್ಮ ಪತ್ನಿಗೆ ವಯಸ್ಸಾಗಿದೆ ಎಂದವರಿಗೆ ಖಡಕ್ ಉತ್ತರ ಕೊಟ್ಟ ನಟ Niranjan Nair!
ಮಲಯಾಳಂನ ಜನಪ್ರಿಯ ನಟಿ ನಿರಂಜನ್ ನಾಯರ್ ನೆಟ್ಟಿಗರ ವಿರುದ್ಧ ಗರಂ ಆಗಿದ್ದಾರೆ. ಇದಕ್ಕೆ ಕಾರಣ ಅವರ ಪತ್ನಿ ಜೊತೆಗಿರುವ ಫೋಟೋ ನೋಡಿ, ನೆಟ್ಟಿಗರು ಮಾಡಿರುವ ಕಮೆಂಟ್ಸ್....
ಮಲಯಾಳಂ ಜನಪ್ರಿಯ ನಟ ಕಮ್ ಸೋಷಿಯಲ್ ಮೀಡಿಯಾ ಸ್ಟಾರ್ ನಿರಂಜನ್ ತಮ್ಮ ಪತ್ನಿ ಜೊತೆ ಅಪ್ಲೋಡ್ ಮಾಡಿದಾಗ, ನೆಟ್ಟಿಗರು ನೆಗೆಟಿವ್ ಆಗಿ ಕಾಮೆಂಟ್ ಮಾಡುವುದಕ್ಕೆ ಬೇಸರ ವ್ಯಕ್ತ ಪಡಿಸಿದ್ದಾರೆ ಹಾಗೂ ಅವರಿಗೆ ಕ್ಲಾಸ್ ತೆಗೆದು ಕೊಂಡಿದ್ದಾರೆ.
'ಗೋಪಿಕಾ ನಿಮಗೆ ಸೂಟ್ ಆಗುವುದಿಲ್ಲ. ಆಕೆ ಕ್ಯಾರೆಕ್ಟರ್ ಹೇಗಿದೆ ನಮಗೋ ಗೊತ್ತಿಲ್ಲ. ಆಕೆ ತುಂಬಾನೇ Vulger ಮತ್ತು ವಯಸ್ಸಾದಂತೆ ಕಾಣಿಸುತ್ತಾರೆ,' ಎಂದು ನೆಟ್ಟಿಗನೊಬ್ಬ ಕಾಮೆಂಟ್ ಮಾಡಿದ್ದಾನೆ.
ಅದಲ್ಲದೇ ಸಿನಿಮಾ ರಂಗದಲ್ಲಿರುವ ನಿಮಗೆ ಸೂಪರ್ ಆಗಿರುವ ಹುಡುಗಿ ಸಿಗುತ್ತಾರೆ. ನೀವು ಯಾಕೆ ಇವರನ್ನು ಮದುವೆ ಆಗಿದ್ದು? ನಿಮಗೆ ಸೂಪರ್ ಚಾಯಿಸ್ ಇತ್ತು ಎಂದು ಹೇಳಿದ್ದಾರೆ. ಈ ಕಾಮೆಂಟ್‌ನ ಹಂಚಿಕೊಂಡು ನಿರಂಜನ್ ಉತ್ತರ ಕೊಟ್ಟಿದ್ದಾರೆ.
'ನನ್ನ ಹೆಂಡತಿಗೆ ಅವಳದ್ದೇ ಬ್ಯೂಟಿ ಇದೆ. ಅದು ನನಗೆ ಇಷ್ಟವಾಗುತ್ತದೆ. ನಿಮ್ಮೊಟ್ಟಿಗೆ ಇದರ ಬಗ್ಗೆ ಚರ್ಚೆ ಮಾಡುವ ಅಗತ್ಯವಿಲ್ಲ. ನಿಮ್ಮಂಥ ಮೈಂಡ್ ಸೆಟ್ ಇರುವವರು ಮಾತ್ರ ಈ ರೀತಿ ಕಾಮೆಂಟ್ ಮುಂದುವರಿಸುತ್ತಾರೆ,' ಎಂದಿದ್ದಾರೆ ನಿರಂಜನ್.
'ಇದು ನಿಮಗೆ ಬೇಡದ ವಿಚಾರ. None of your business. ನನಗೆ ಆಯ್ಕೆ ಸೂಕ್ತ ಎಂದು ಆಯ್ಕೆ ಮಾಡುವುದಕ್ಕೆ ನೀವು ಯಾಕೆ? ನನ್ನ ಹೆಂಡತಿ ಬಗ್ಗೆ ಮಾತನಾಡುವುದಕ್ಕೆ ನೀವು ಯಾರು?'
'ಆಕೆಯನ್ನು ನಾನು ತುಂಬಾನೇ ಇಷ್ಟ ಪಡುತ್ತೀನಿ. ಈ ರೀತಿ ಕಾಮೆಂಟ್ ಮತ್ತೆ ಮಾಡಿದರೆ ಸರಿ ಇರುವುದಿಲ್ಲ. ಮಗು ಹುಟ್ಟಿದ ಮೇಲೆ ಎಲ್ಲರ ದೇಹ ಬದಲಾಗುತ್ತದೆ. ತಾಯಿಯಾಗಿ ಆಕೆ ತಮ್ಮ ಅಂದ ಮತ್ತು ದೇಹವನ್ನು ತ್ಯಾಗ ಮಾಡುತ್ತಾರೆ. ಮುಚ್ಕೊಂಡು ಹೋಗೋ ನೀನು,' ಎಂದು ನಿರಂಜನ್ ಬರೆದುಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆ ನಿರಂಜನ್ ಮತ್ತು ಗೋಪಿಕಾ ಪುತ್ರನಿಗೆ ಸರಳವಾಗಿ ನಾಮಕರಣ ಮಾಡಿದ್ದಾರೆ. 'ದೈವಿಕ್' ಎಂದು ಹೆಸರಿಟ್ಟಿದ್ದಾರೆ.