Met Gala 2023: ಜಗಮಗ ಫ್ಯಾಷನ್ ಈವೆಂಟ್‌ಲ್ಲಿ ಬಾಲಿವುಡ್ ಸ್ಟಾರ್ಸ್; ದೀಪಿಕಾ, ಅಲಿಯಾ, ಪ್ರಿಯಾಂಕಾ ಮಿಂಚಿಂಗ್
Met Gala 2023: ಜಗಮಗ ಫ್ಯಾಷನ್ ಈವೆಂಟ್‌ಲ್ಲಿ ಭಾರತದ ಸ್ಟಾರ್ಸ್; ದೀಪಿಕಾ, ಅಲಿಯಾ, ಪ್ರಿಯಾಂಕಾ ಮಿಂಚಿಂಗ್
ಪ್ರತಿಷ್ಠಿತ ಫ್ಯಾಷನ್ ಈವೆಂಟ್‌ಗಳಲ್ಲಿ ಒಂದಾಗಿರುವ ಮೆಟ್ ಗಾಲಾ 2023 ಅದ್ದೂರಾಗಿ ಪ್ರಾರಂಭವಾಗಿದೆ. ನ್ಯೂಯಾರ್ಕ್‌ನಲ್ಲಿ ನಡೆಯುವ ಅದ್ದೂರಿ ಈವೆಂಟ್ ನಲ್ಲಿ ಭಾರತೀಯ ಸ್ಟಾರ್ಸ್ ಕೂಡ ಮಿಂಚಿದ್ದಾರೆ.
ನ್ಯೂಯಾರ್ಕ್‌ನ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್‌ನಲ್ಲಿ ಮೆಟ್ ಗಾಲಾ 2023 ಪ್ರಾರಂಭವಾಗಿದ್ದು ರೆಡ್ ಕಾರ್ಪೆಟ್ ಮೇಲೆ ಪ್ರಸಿದ್ಧ ಸಿನಿ ತಾರೆಯರು ಹೆಜ್ಜೆ ಹಾಕಿದ್ದಾರೆ.
ಎಂದಿನಂತೆ ಈ ಬಾರಿ ಕೂಡ ಸೆಲೆಬ್ರಿಟಿಗಳ ಡ್ರೆಸ್ ಗಮನ ಸೆಳೆಯುತ್ತಿದೆ. ಫ್ಯಾಷನ್ ಈವೆಂಟ್ ಅಂದಮೇಲೆ ಚಿತ್ರ ವಿಚಿತ್ರ ಡ್ರೆಸ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಾರಿ ಕೂಡ ತರಹೇವಾರಿ ರೀತಿಯ ಡ್ರೆಸ್ ಗಳಲ್ಲಿ ಮಿಂಚಿದ್ದಾರೆ.
ವಿಶೇಷ ಎಂದರೆ ಮೆಟ್ ಗಾಲಾ ಈವೆಂಟ್ ನಲ್ಲಿ ಭಾರತೀಯ ಸ್ಟಾರ್ಸ್ ಕೂಡ ಗಮನ ಸೆಳೆದರು. ಜಾಗತಿಗ ಸ್ಟಾರ್ ಎನಿಸಿಕೊಂಡಿರುವ ಪ್ರಿಯಾಂಕಾ ಚೋಪ್ರಾ, ಬಾಲಿವುಡ್ ಸ್ಟಾರ್‌ಗಳಾದ ದೀಪಿಕಾ ಪಡುಕೋಣೆ ಮತ್ತು ಅಲಿಯಾ ಭಟ್ ಕೂಡ ರೆಡ್ ಕಾರ್ಪೆಟ್ ಮೇಲೆ ಹೆಜ್ಜಾಹಾಕಿದ್ದಾರೆ.
ವಿಶೇಷ ಎಂದರೆ ಅಲಿಯಾ ಭಟ್ ಮತ್ತು ದೀಪಿಕಾ ಪುಡುಕೋಣೆ ಬಿಳಿ ಬಣ್ಣದ ಡ್ರೆಸ್‌ನಲ್ಲಿ ರ್ಯಾಂಪ್ ವಾಕ್ ಮಾಡಿದ್ದಾರೆ. ಪ್ರಿಯಾಂಕಾ ಚೋಪ್ರಾ ಕಪ್ಪು ಬಣ್ಣದ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಬಿಳಿ ಬಣ್ಣದ ಮಾಡರ್ನ್ ಸೀರೆಯಲ್ಲಿ ದೀಪಿಕಾ ಮಿರ ಮಿರ ಮಿಂಚಿದ್ರೆ, ಮುತ್ತುಗಳಿಂದ ತುಂಬಿದ ಬಳಿ ಬಣ್ಣದ ಗೌನ್‌ನಲ್ಲಿ ಅಲಿಯಾ ಭಟ್ ಗಮನ ಸೆಳೆದರು. ಇನ್ನೂ ಪ್ರಿಯಾಂಕಾ ಚೋಪ್ರಾ ಪತಿ ನಿಕ್ ಜೋನಸ್ ಜೊತೆ ಕಾಣಿಸಿಕೊಂಡರು.
Met Gala 2023
ಪ್ರಿಯಾಂಕಾ ಕಪ್ಪು ಬಣ್ಣದ ಹೈ ಸ್ಲಿಟ್ ಗೌನ್ ಧರಿಸಿದ್ದರು. ಪತಿ ವಿಕ್ ಜೋನಸ್ ಬ್ಲಾಕ್ ಅಂಡ್ ವೈಟ್ ಸೂಟ್‌ನಲ್ಲಿ ಕಾಣಿಸಿಕೊಂಡರು. ಇಬ್ಬರೂ ಒಬ್ಬರಿಗೊಬ್ಬರು ಕೈ ಕೈ ಹಿಡಿದು ಕ್ಯಾಮರಾಗೆ ಪೋಸ್ ನೀಡುತ್ತಾ ಹೆಜ್ಜೆ ಹಾಕಿದರು.