ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಸೊಸೆ ಕನ್ನಡ ಚಿತ್ರದಲ್ಲೂ ನಟಿಸಿದ್ದಾರೆ!
ಬಾಲಿವುಡ್‌ನ ಡಿಸ್ಕೋ ಡ್ಯಾನ್ಸರ್ ಮಿಥುನ್ ಬಗ್ಗೆ ಜನರಿಗೆ ಸಾಕಷ್ಟು ತಿಳಿದಿದೆ, ಆದರೆ ಅವರ ಕುಟುಂಬದ ಬಗ್ಗೆ ಹೆಚ್ಚು ತಿಳಿದಿಲ್ಲ. ಮಿಥುನ್ ಸೊಸೆ ಮಡಲ್ಸಾ ಪ್ರಸ್ತುತ ಜನಪ್ರಿಯ ಟಿವಿ ಕಾರ್ಯಕ್ರಮ ಅನುಪಮಾದಲ್ಲಿ ಕಾವ್ಯಾ ಜಾವೆರಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಮಿಥುನ್ ಸೊಸೆ ಚೆಲುವೆ ಮಡಲ್ಸಾ ತೆಲುಗು ಚಿತ್ರರಂಗದ ಪ್ರಸಿದ್ಧ ನಟಿ ಕೂಡ ಹೌದು.
ಮಡಲ್ಸಾ ಪ್ರಸಿದ್ಧ ನಟಿ ಶೀಲಾ ಶರ್ಮಾ ಮತ್ತು ನಿರ್ಮಾಪಕ-ನಿರ್ದೇಶಕಿ ಸುಭಾಷ್ ಶರ್ಮಾ ಅವರ ಪುತ್ರಿ. 90 ರ ದಶಕದಲ್ಲಿ ಪ್ರಸಾರವಾದ ಮಹಾಭಾರತದಲ್ಲಿ ಶೀಲಾ ದೇವಕಿಯಾಗಿ ನಟಿಸಿದ್ದರು.
ಮಡಲ್ಸಾ 2018 ರ ಜುಲೈನಲ್ಲಿ ಮಿಥುನ್ ಚಕ್ರವರ್ತಿಯ ಹಿರಿಯ ಮಗ ಮಹಾಕ್ಷಾಯ (ಮಿಮೋಹ್) ಚಕ್ರವರ್ತಿಯನ್ನು ವಿವಾಹವಾದರು. - ಮಿಥುನ್ ಅವರ ಕುಟುಂಬವು ಸುಸಂಸ್ಕೃತವಾಗಿದೆ ಮತ್ತು ಮಗಳ ವಿವಾಹದ ಬಗ್ಗೆ ನಮಗೆ ಯಾವುದೇ ಸಂದೇಹವಿಲ್ಲ' ಎಂದು ಮಗಳು ಮಡಲ್ಸಾ ಮದುವೆಯ ಬಗ್ಗೆ ತಾಯಿ ಶೀಲಾ ಶರ್ಮಾ ಹೇಳಿದ್ದರು
ಮಡಲ್ಸಾ ಕೂಡ ತಾಯಿಯಂತೆ ನಟಿ. 2009 ರ ತೆಲುಗು ಚಿತ್ರ 'ಫಿಟ್ಟಿಂಗ್' ಮೂಲಕ ಮಡಲ್ಸಾ ನಟನೆಗೆ ಎಂಟ್ರಿ ಕೊಟ್ಟ ನಟಿ ಕನ್ನಡದ ಚಿತ್ರ 'ಶೌರ್ಯ' ದಲ್ಲಿಯೂ ಕೆಲಸ ಮಾಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಇರುವ ನಟಿ , ಆಗಾಗ್ಗೆ ಬೋಲ್ಡ್ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.
ಮಿಥುನ್ ಚಕ್ರವರ್ತಿಯವರ ಸೊಸೆ ಮಡಲ್ಸಾ ಶರ್ಮಾ ಅನೇಕ ಪ್ರಾದೇಶಿಕ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ಈಗ ಟಿವಿ ಜಗತ್ತಿನಲ್ಲಿ ತೊಡಗಿಸಿಕೊಂಡಿದ್ದಾರೆ. ಹಿಂದಿ ಸಿರಿಯಲ್ ಅನುಪಮಾದಲ್ಲಿ ಅವರು ಉದ್ಯಮಿ ಆಗಿರುವ ಕಾವ್ಯಾ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
'ಈ ಪಾತ್ರವು ಸಾಕಷ್ಟು ಫನ್ ಮತ್ತು ಅನೇಕ ಶೇಡ್‌ಗಳನ್ನು ಹೊಂದಿದೆ. ಕಾವ್ಯ ಸ್ಟ್ರಾಂಗ್, ಸ್ವತಂತ್ರ ಮತ್ತು ತನ್ನ ಕಾಲ ಮೇಲೆ ನಿಂತಿರುವ ಹುಡುಗಿ. ಪ್ರೇಕ್ಷಕರು ಈ ಪಾತ್ರವನ್ನು ತುಂಬಾ ಇಷ್ಟಪಡುತ್ತಾರೆ.
ಈ ಪಾತ್ರವನ್ನು ಪ್ರೇಕ್ಷಕರು ಪ್ರೀತಿಯಿಂದ ಆಗಲೇ ಸ್ವೀಕರಿಸಿದ್ದಾರೆ.
ಈ ಶೋ ಮಾಡಲು ನನಗೆ ತುಂಬಾ ಸಂತೋಷವಾಗಿದೆ. ನಾನು ಯಾವಾಗಲೂ ರಾಜನ್ ಶಾಹಿ ಸರ್ ಜೊತೆಗೆ ಕೆಲಸ ಮಾಡಲು ಬಯಸುತ್ತಿದ್ದೆ ಮತ್ತು ಈ ಪ್ರಸ್ತಾಪ ಬಂದಾಗ ನಾನು ಒಂದು ಕ್ಷಣ ತಡಮಾಡಲಿಲ್ಲ. ಇದು ಟಿವಿಯಲ್ಲಿ ನನ್ನ ಚೊಚ್ಚಲ ಮತ್ತು ಅಂತಹ ಪ್ರಸಿದ್ಧ ಬ್ಯಾನರ್‌ನೊಂದಿಗೆ ನನ್ನ ಪ್ರಯಾಣವನ್ನು ಪ್ರಾರಂಭಿಸುವುದು ಹೆಮ್ಮೆಯ ವಿಷಯವಾಗಿದೆ' ಎಂದು ಸಂದರ್ಶನವೊಂದರಲ್ಲಿ, ಮಡಲ್ಸಾ ಹೇಳಿದ್ದಾರೆ.
ಬಾಲ್ಯದಿಂದಲೂ ಮಡಲ್ಸಾ ಸುತ್ತ ನಟನಾ ವಾತಾವರಣವಿರುವುದು ನಟನೆ ಹೊರತುಪಡಿಸಿ ಬೇರೆ ಯಾವುದೇ ಕ್ಷೇತ್ರದ ಬಗ್ಗೆ ಅವರು ಯೋಚಿಸದಿರಲು ಕಾರಣವಾಗಿದೆ. 'ಮಿಮೋಹ್‌ರನ್ನು ಮೊದಲು ಮೀಟ್ ಮಾಡಿದ ಬಗ್ಗೆ ಮಡಲ್ಸಾಗೆ ಸಂದರ್ಶನದಲ್ಲಿ ಕೇಳಿದಾಗ 'ನಾವು ಅನೇಕ ವರ್ಷಗಳಿಂದ ಪರಸ್ಪರ ತಿಳಿದಿದ್ದೇವೆ' ಎಂದು ಹೇಳಿದ್ದಾರೆ.
'ನನ್ನ ಭಾವಿ ಮಾವ ಮಿಥುನ್ ಚಕ್ರವರ್ತಿಯನ್ನು ಭೇಟಿಯಾದಾಗ, ನಾನು ಅವರ ಮಗನ ಜೀವನದಲ್ಲಿ ಶಾಶ್ವತವಾಗಿ ಭಾಗಿಯಾಗಬಹುದೇ ಎಂದು ಅವರು ನನ್ನನ್ನು ಕೇಳಿದ್ದರು. ಇದನ್ನು ಅವರು ತನ್ನ ಮಗನಿಗೂ ಕೇಳಿದರು. ಅವರು ನಿಜವಾದ ವ್ಯಕ್ತಿ. ಅವರು ನನ್ನ ತಂದೆ ಮತ್ತು ಅದು ನನಗೆ ಒಂದು ಪುಣ್ಯ. ಪ್ರತಿ ಬಾರಿ ನೀವು ಅವರಿಂದ ಏನಾದರೂ ಒಳ್ಳೆಯದನ್ನು ಕಲಿಯುತ್ತೀರಿ. ಅವರು ಸಣ್ಣಪುಟ್ಟ ವಸ್ತುಗಳನ್ನು ಸಹ ನೋಡಿಕೊಳ್ಳುತ್ತಾರೆ' ಎಂದು ಮಾವ ಮಿಥುನ್ ಬಗ್ಗೆ, ಮಡಲ್ಸಾ ಹೇಳುತ್ತಾರೆ.
'ಇಷ್ಟು ಸ್ಟಾರ್ಡಮ್ ಸಿಕ್ಕಿದ ನಂತರ, ಯಾವುದೇ ಕೆಲಸವನ್ನು ಸರಿಯಾಗಿ ಮಾಡಲು ಅವರು ಇನ್ನೂ ತುಂಬಾ ಶ್ರಮಿಸುತ್ತಾರೆ ಮತ್ತು ನಾನು ಅದನ್ನು ಅವರಿಂದ ಕಲಿತಿದ್ದೇನೆ. ಅಲ್ಲದೆ ಅವರು ತುಂಬಾ ಒಳ್ಳೆಯ ಅಡುಗೆ ಮಾಡುತ್ತಾರೆ' ಎಂದಿದ್ದಾರೆ ಮಾವ ಮಿಥುನ್ ದಾದ ಬಗ್ಗೆ.
ಅನುಪಮಾ ಟಿವಿ ಕಾರ್ಯಕ್ರಮದ ಕಥೆ ತನ್ನ ಇಡೀ ಜೀವನವನ್ನು ತ್ಯಾಗ ಮಾಡಿ ಕುಟುಂಬಕ್ಕೆ ತನ್ನನ್ನು ಅರ್ಪಿಸಿಕೊಳ್ಳುವ ತಾಯಿಯ ಸುತ್ತ ಸುತ್ತುತ್ತದೆ.
ಮಡಲ್ಸಾರ ಬೋಲ್ಡ್ ಲುಕ್.
ಪತಿ ಮಿಮೋಹ್ ಚಕ್ರವರ್ತಿಯೊಂದಿಗೆ ಮಡಲ್ಸಾ.