- Home
- Entertainment
- Cine World
- ಹೇಗಿದ್ರು ಈಗ ಹೀಗಾಗಿದ್ದಾರೆ; ಸಿಕ್ಕಾಪಟ್ಟೆ ತೆಳ್ಳಗಾಗಿರುವ ಮೀರಾ ಜಾಸ್ಮೀನ್ ನೋಡಿ ಫ್ಯಾನ್ಸ್ ಶಾಕ್
ಹೇಗಿದ್ರು ಈಗ ಹೀಗಾಗಿದ್ದಾರೆ; ಸಿಕ್ಕಾಪಟ್ಟೆ ತೆಳ್ಳಗಾಗಿರುವ ಮೀರಾ ಜಾಸ್ಮೀನ್ ನೋಡಿ ಫ್ಯಾನ್ಸ್ ಶಾಕ್
ಮೀರಾ ಜಾಸ್ಮೀನ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಸದಾ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಸುಂದರ ಫೋಟೋಶೂಟ್ ನಲ್ಲಿ ಮಿಂಚುತ್ತಿರುತ್ತಾರೆ. ಇತ್ತೀಚಿಗೆ ಮೀರಾ ಜಾಸ್ಮೀನ್ ಶೇರ್ ಮಾಡಿರುವ ಫೋಟೋಗಳು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.

ಮಲಯಾಳಂನ ಖ್ಯಾತ ನಟಿ ಮೀರಾ ಜಾಸ್ಮೀನ್ ಮತ್ತೆ ಸಿನಿಮಾರಂಗಕ್ಕೆ ವಾಪಾಸ್ ಆಗಿದ್ದಾರೆ. ಆದರೆ ಮೀರಾಗೆ ಹೇಳಿಕೊಳ್ಳುವಷ್ಟು ಅವಕಾಶಗಳು ಹುಡುಕಿ ಬರುತ್ತಿಲ್ಲ. ಉತ್ತಮ ಸಿನಿಮಾಗಳಿಗಾಗಿ ಮೀರಾ ಜಾಸ್ಮೀನ್ ಎದುರು ನೋಡುತ್ತಿದ್ದಾರೆ.
ಮದುವೆ ಬಳಿಕ ಬ್ರೇಕ್ ಪಡೆದಿದ್ದ ಮೀರಾ ಜಾಸ್ಮೀನ್ ಬಳಿಕ ವಿದೇಶಕ್ಕೆ ಹಾರಿದ್ದರು. ಕೆಸಲವೇ ವರ್ಷಗಳಲ್ಲಿ ಮತ್ತೆ ಭಾರತಕ್ಕೆ ವಾಪಾಸ್ ಆಗಿರುವ ಮೀರಾ ಸಿನಿಮಾದಲ್ಲಿ ನಟಿಸಿದರು.
2014ರಲ್ಲಿ ಮೀರಾ ಜಾಸ್ಮೀನ್ ಉದ್ಯಮಿ ಅನಿಲ್ ಜಾನ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾಗಿ ಕೆಲವೇ ವರ್ಷಗಳಲ್ಲಿ ಮೀರಾ ಪತಿಯಿಂದ ದೂರ ಆದರು. ವಿಚ್ಛೇದನ ಪಡೆದಿದು. ಆದರೆ ಈ ಬಗ್ಗೆ ಎಲ್ಲೂ ಬಹಿರಂಗವಾಗಿ ಹೇಳಿಕೊಂಡಿಲ್ಲ.
ಸದ್ಯ ಮೀರಾ ಜಾಸ್ಮೀನ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಸದಾ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಸುಂದರ ಫೋಟೋಶೂಟ್ ನಲ್ಲಿ ಮಿಂಚುತ್ತಿರುತ್ತಾರೆ. ಇತ್ತೀಚಿಗೆ ಮೀರಾ ಜಾಸ್ಮೀನ್ ಶೇರ್ ಮಾಡಿರುವ ಫೋಟೋಗಳು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.
ಮೀರಾ ಜಾಸ್ಮೀನ್ ಸಿಕ್ಕಾಪಟ್ಟೆ ತೆಳು ಆಗಿದ್ದಾರೆ. ಅರಸು ಕಾಲದ ಮೀರಾಗೂ ಈಗಿನ ಮೀರಾಗೂ ತುಂಬನೆ ವ್ಯತ್ಯಾಸವಿದೆ. ತೆಳ್ಳಗೆ ಬಳಕುವ ಬಳ್ಳಿಯಾಗಿರುವ ಮೀರಾ ನೋಡಿ ಅಭಿಮಾನಿಗಳು ಅಚ್ಚರಿ ಪಡುತ್ತಿದ್ದಾರೆ.
ಅಂದಹಾಗೆ ಮೀರಾ ಸಿಕ್ಕಾಪಟ್ಟೆ ವರ್ಕೌಟ್ ಮಾಡುತ್ತಾರೆ. ಜಿಮ್‌ನಲ್ಲಿ ಬೆವರಿಳಿಸುವ ಮೀರಾ ತೆಳ್ಳಗಾಗಿದ್ದಾರೆ. ಮೀರಾ ಫೋಟೋ ನೋಡಿ ಕನ್ನಡ ಅಭಿಮಾನಿಗಳು ಶಾಕ್ ಆಗಿದ್ದಾರೆ.
ಮೀರಾ ಸಿನಿಮಾ ವಿಚಾರಕ್ಕೆ ಬರುವುದಾದರೆ 2001ರಲ್ಲಿಯೇ ಮೀರಾ ಬಣ್ಣದ ಲೋಕಕ್ಕೆ ಕಾಲಿಟ್ಟರು. ಮಲಯಾಳಂ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ ಮೀರಾ ಬಳಿಕ ತಮಿಳು, ತೆಲುಗು ಮತ್ತು ಕನ್ನಡದಲ್ಲಿ ಪ್ರಸಿದ್ಧರಾಗಿದ್ದಾರೆ. ಕನ್ನಡದಲ್ಲಿ ಮೀರಾ ಪುನೀತ್ ರಾಜ್ ಕುಮಾರ್ ಜೊತೆ ಮಯೂರ, ಅರಸು ಮತ್ತು ಶಿವರಾಜ್ ಕುಮಾರ್ ಜೊತೆ ದೇವರು ಕೊಟ್ಟ ತಂಗಿ ಸೇರಿದಂತೆ ಇನ್ನು ಕೆಲವು ಸಿನಿಮಾಗಳಲ್ಲಿ ನಟಿಸದ್ದಾರೆ.