ಪತಿ ಶ್ರೀರಾಮ್‌ಗೆ ಮಾಧುರಿ ಬಗ್ಗೆಯೇ ಗೊತ್ತಿರಲಿಲ್ಲವಂತೆ!
ಬಾಲಿವುಡ್‌ನ ಎವರ್‌ಗ್ರೀನ್ ನಟಿ ಮಾಧುರಿ ದೀಕ್ಷಿತ್‌ಗೆ 53ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. 15 ಮೇ 1967 ರಂದು ಮುಂಬೈನಲ್ಲಿ ಜನಿಸಿದ ಮಾಧುರಿ, ಅನೇಕ ಸೂಪರ್‌ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಆದಾಗ್ಯೂ, ಸಿನಿಮಾದಲ್ಲಿ ಕಾಣಿಸಿಕೊಳ್ಳುವುದು ಕಡಿಮೆಯಾದರೂ ಸೋಶಿಯಲ್ ಮೀಡಿಯಾದ ಮೂಲಕ ಫ್ಯಾನ್‌ಗಳ ಜೊತೆ ಕನೆಕ್ಟ್ ಆಗಿದ್ದಾರೆ. ಪ್ರಸ್ತುತ, ಲಾಕ್ ಡೌನ್ ಕಾರಣ ಅವರು ಮನೆಯಲ್ಲಿ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ. ಯುಎಸ್ ಮೂಲದ ಸರ್ಜನ್ ಡಾ. ಶ್ರೀರಾಮ್ ನೆನೆ ಅವರನ್ನು ಮದುವೆಯಾಗಿರುವ ಇವರಿಗೆ ಎರಡು ಗಂಡು ಮಕ್ಕಳು. ಜನರಿಗೆ ಇವರಿಬ್ಬರ ಲವ್ ಸ್ಟೋರಿ ಬಗ್ಗೆ ಹೆಚ್ಚು ತಿಳಿದಿಲ್ಲ. ಇಲ್ಲಿದೆ ನೋಡಿ ಮಾಧುರಿ ಹಾಗೂ ಶ್ರೀರಾಮ್ ನೆನೆ ಅವರ ಪ್ರೇಮ್‌ಕಹಾನಿ.

ಧಕ್ ಧಕ್ ಹುಡುಗಿ ಮಾಧುರಿ ದೀಕ್ಷಿತ್‌ಗೆ 53ನೇ ಹುಟ್ಟು ಹಬ್ಬದ ಸಂಭ್ರಮ.

ಸಂದರ್ಶನವೊಂದರಲ್ಲಿ ನಟಿ, ಶ್ರೀರಾಮ್ ನೆನೆ ಅವರೊಂದಿಗಿನ ಮೊದಲ ಭೇಟಿ ಮತ್ತು ಪ್ರೇಮ ಕಥೆಯ ಬಗ್ಗೆ ಹೇಳಿದ್ದರು.

'ಡಾಕ್ಟರ್ ಸಾಬ್ ಜೊತೆ ನನ್ನ ಮೊದಲ ಭೇಟಿ ನನ್ನ ಸಹೋದರನ ಪಾರ್ಟಿಯಲ್ಲಿ (ಲಾಸ್ ಏಂಜಲೀಸ್) ಆಕಸ್ಮಿಕವಾಗಿ ನಡೆಯಿತು. ನಾನು ನಟಿಯಾಗಿದ್ದೇನೆ ಮತ್ತು ಬಾಲಿವುಡ್ ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದರೂ, ಅವರಿಗೆ ನನ್ನ ಬಗ್ಗೆ ಗೊತ್ತಿಲ್ಲವೆಂದಾಗ ತುಂಬಾ ಆಶ್ಚರ್ಯವಾಗಿತ್ತು.

'ಪಾರ್ಟಿಯ ನಂತರ, ಡಾ. ನೆನೆ ನೀವು ನನ್ನೊಂದಿಗೆ ಪರ್ವತಗಳಲ್ಲಿ ಬೈಕು ಸವಾರಿಗೆ ಬರುತ್ತೀರಾ ಎಂದು ಕೇಳಿದರು, ಪರ್ವತ ಮತ್ತು ಬೈಕುಗಳಿವೆ ಸರಿ ಎಂದು ನಾನು ಭಾವಿಸಿದೆ. ಆದರೆ ಪರ್ವತಗಳಿಗೆ ಹೋದ ನಂತರವೇ ತಿಳಿದಿದ್ದು, ಅದು ಕಷ್ಟ ಎಂದು. - ಮಾಧುರಿ ದೀಕ್ಷಿತ್.

ಅಲ್ಲಿಂದ ನಾವಿಬ್ಬರೂ ಒಬ್ಬರಿಗೊಬ್ಬರು ಹತ್ತಿರವಾಗಿ ಪ್ರೀತಿಸಲು ಪ್ರಾರಂಭಿಸಿದ್ದೆವು. ಕೆಲವು ಕಾಲಗಳ ಡೇಟಿಂಗ್ ನಂತರ ಮದುವೆಯಾಗಲು ನಿರ್ಧರಿಸಿದೆವು ಎಂದಿದ್ದಾರೆ ನಟಿ. ಮಾಧುರಿ ಅವರು ತಮ್ಮ ಕೇರಿಯರ್‌ನ ಉನ್ನತ ಸ್ಥಿತಿಯಲ್ಲಿರುವಾಗಲೇ ಮದುವೆಯಾಗಲು ನಿರ್ಧರಿಸಿದ್ದರು.

ಮಾಧುರಿ 1984ರಲ್ಲಿ ಅಬೋಧ್ ಸಿನಮಾದಿಂದ ವೃತ್ತಿಜೀವನವನ್ನು ಪ್ರಾರಂಭಿಸಿದರು. ಆದಾಗ್ಯೂ, ಮೊದಲ ಚಿತ್ರ ಸೂಪರ್ ಫ್ಲಾಪ್ ಆಗಿತ್ತು. ಇದರ ನಂತರ 1988ರಲ್ಲಿ ತೇಜಾಬ್ ಅವರನ್ನು ರಾತ್ರೋರಾತ್ರಿ ಸ್ಟಾರ್ ಮಾಡಿತು. ಈ ಚಿತ್ರದ ಸೂಪರ್ ಹಿಟ್ ಹಾಡು ಏಕ್ ದೋ ತೀನ್.....ಇನ್ನೂ ಜನರು ಮರೆತಿಲ್ಲ.

ಈ ಬಾಲಿವುಡ್ ನಟಿಯ ಹಿಟ್ ಚಿತ್ರಗಳಿಗೆ ಲೆಕ್ಕವಿಲ್ಲ. ಸುಮಾರಷ್ಟು ಕಾಲ ಬಾಲಿವುಡ್ ಆಳಿದ ನಟಿಯರಲ್ಲಿ ಇವರು ಒಬ್ಬರು.

ಮಾಧುರಿ ಡಾ. ಶ್ರೀರಾಮ್ ನೆನೆ ಅಕ್ಟೋಬರ್ 1999ರಲ್ಲಿ ವಿವಾಹವಾದ ನಂತರ ಯುಎಸ್‌ಗೆ ಸ್ಥಳಾಂತರಗೊಂಡು, ಚಲನಚಿತ್ರಗಳಿಂದ ಬಹುತೇಕ ದೂರವಾಗಿದ್ದರು. ಅವರಿಬ್ಬರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.

ನಂತರ, 2007 ರಲ್ಲಿ ಆಜಾ ನಾಚ್ಲೆ ಸಿನಿಮಾದೊಂದಿಗೆ ಮತ್ತೆ ಬಾಲಿವುಡ್‌ಗೆ ಹಿಂದಿರುಗಿದ್ದು, ಕೊನೆಯ ಬಾರಿಗೆ ಕಲಾಂಕ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ ನಟಿ ಮಾಧುರಿ ದೀಕ್ಷಿತ್.