ಮೂರೂವರೆ ಕೋಟಿ ಕೊಡ್ತೀನಿ ಅಂದ್ಮೇಲೆ ಸಿಕ್ತು ಕಳುವಾಗಿದ್ದ ನಾಯಿ
First Published Feb 28, 2021, 11:39 AM IST
ಮುದ್ದಿನ ನಾಯಿಯನ್ನು ಕಳೆದುಕೊಂಡ ಅಮೆರಿಕನ್ ಸಿಂಗರ್ | ಹುಡುಕಿ ಕೊಟ್ಟೋರಿಗೆ ಮೂರೂವರೆ ಕೋಟಿ ಆಫರ್ ಮಾಡಿದ ಲೇಡಿ ಗಾಗ

ಫೆಬ್ರವರಿ 24 ರಂದು, ಜನಪ್ರಿಯ ಗಾಯಕಿ ಲೇಡಿ ಗಾಗಾ ಅವರ ಎರಡು ಫ್ರೆಂಚ್ ಬುಲ್ಡಾಗ್ಸ್ ಕೋಜಿ ಮತ್ತು ಗುಸ್ತಾವ್ ಕಳವಾಗಿತ್ತು.

ಗಾಗಾ ಅವರ ನಾಯಿಗಳ ವಾಕರ್ ರಿಯಾನ್ ಫಿಷರ್ ನಾಯಿಗಳನ್ನು ವಾಕ್ ಕರೆದುಕೊಂಡು ಹೋಗುತ್ತಿದ್ದಾಗ ಇಬ್ಬರು ಎದೆಗೆ ಗುಂಡು ಹಾರಿಸಿದ್ದರು

ಇವರು ಕೊಜಿ ಮತ್ತು ಗುಸ್ತಾವ್ ನಾಯಿಯೊಂದಿಗೆ ಓಡಿಹೋಗಿದ್ದರು.

ಶ್ವಾನ ಕಳೆದು ಕೊಂಡ ಗಾಗಾ ಅದನ್ನು ಮರಳಿಸಿದವರಿಗೆ ಮೂರೂವರೇ ಕೋಟಿ ರೂಪಾಯಿ ಘೋಷಿಸಿದ್ದರು.

ನಂತರ ಅಧಿಕಾರಿಗಳು ಅದನ್ನು ಹುಡುಕಿ ತಂದು ಕೊಟ್ಟಿದ್ದಾರೆ.

ಲೇಡಿ ಗಾಗಾ ಅವರ ಎರಡು ನಾಯಿಗಳು ಈಗ ಸುರಕ್ಷಿತವಾಗಿವೆ ಮತ್ತು ಅವರು ಮನೆಗೆ ಮರಳಿದ್ದಾರೆಂದು ತಿಳಿದುಬಂದಿದೆ.

ನನ್ನ ಪ್ರೀತಿಯ ನಾಯಿಗಳಾದ ಕೊಜಿ ಮತ್ತು ಗುಸ್ತಾವ್ ಕದ್ದು ಒಯ್ದಿದ್ದಾರೆ ಎಂದು ಈಕೆ ಪೋಸ್ಟ್ ಹಾಕಿದ್ದರು.

ಮನಸಿಗೆ ನೋವಾಗಿದೆ. ನನ್ನ ಕುಟುಂಬವು ದಯೆಯಿಂದ ಮತ್ತೆ ಪೂರ್ಣವಾಗಬೇಕಾಗಿದೆ. ಅವರ ಸುರಕ್ಷಿತ ಆಗಮನಕ್ಕೆ ನಾನು ಮೂರೂವರೆ ಕೋಟಿ ಪಾವತಿಸುತ್ತೇನೆ ಎಂದಿದ್ದರು.