ಅಬ್ಬಾ..! 'ಆದಿಪುರುಷ್' ಟ್ರೈಲರ್ ಲಾಂಚ್‌ಗೆ 24 ಕ್ಯಾರೆಟ್ ಗೋಲ್ಡ್ ಸೀರೆಯಲ್ಲಿ ಮಿಂಚಿದ ನಟಿ ಕೃತಿ
ಆದಿಪುರುಷ್' ಟ್ರೈಲರ್ ಲಾಂಚ್ ಈವೆಂಟ್‌ಗೆ ನಟಿ ಕೃತಿ ಸನೊನ್ 24 ಕ್ಯಾರೆಟ್ ಗೋಲ್ಡ್ ಸೀರೆಯಲ್ಲಿ ಮಿಂಚಿದ್ದಾರೆ.
ಟಾಲಿವುಡ್ ಸ್ಟಾರ್ ಪ್ರಭಾಸ್ ನಟನೆಯ ಬಹುನಿರೀಕ್ಷೆಯ ಆದಿಪುರುಷ್ ಸಿನಿಮಾದ ಟ್ರೈಲರ್ ಕೊನೆಗೂ ತೆರೆಗೆ ಬಂದಿದೆ. ಟೀಸರ್ ಮೂಲಕ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದ ಆಗಿದ್ದ ಆದಿಪುರುಷ್ ಟ್ರೈಲರ್ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಇದೀಗ ಕಾತರಕ್ಕೆ ತೆರೆಬಿದ್ದಿದೆ. ಆದುಪುರುಷ್ ಟ್ರೈಲರ್ ಅದ್ದೂರಿಯಾಗಿ ತೆರೆಗೆ ಬಂದಿದೆ.
ಆದಿಪುರುಷ್ ಟ್ರೈಲರ್‌ನಲ್ಲಿ ರಾಮನಾಗಿ ಕಾಣಿಸಿಕೊಂಡಿರುವ ಪ್ರಭಾಸ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಟೀಸರ್ ಮೂಲಕ ನಿರಾಸೆ ಮೂಡಿಸಿದ್ದ ಆದಿಪುರುಷ್ ತಂಡ ಇದೀಗ ಟ್ರೈಲರ್ ಮೂಲಕ ಅಭಿಮಾನಿಗಳಿಗೆ ಸಂತಸ ನೀಡಿದೆ. ಜೊತೆಗೆ ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.
ಆದಿಪುರುಷ್ ಟ್ರೈಲರ್ ಮೇ 9ರಂದು ಅದ್ದೂರಿಯಾಗಿ ತೆರೆಗೆ ಬಂದಿದೆ. ಮುಂಬೈನಲ್ಲಿ ನಡೆದ ಅದ್ದೂರಿ ಈವೆಂಟ್‌ನಲ್ಲಿ ಇಡೀ ತಂಡ ಹಾಜರಾಗಿತ್ತು. ನಾಯಕ ಪ್ರಭಾಸ್, ನಟಿ ಕೃತಿ ಸನೊನ್ ಸೇರಿದಂತೆ ಇಡು ತಂಡ ಹಾಜರಿತ್ತು. ಸೀತೆಯಾಗಿ ಮಿಂಚಿರುವ ನಟಿ ಕೃತಿ ಕಾರ್ಯಕ್ರಮದಲ್ಲಿ ಸೀರೆ ಧರಿಸಿ ಅಭಿಮಾನಿಗಳ ಗಮನ ಸೆಳೆದರು.
ಅಂದಹಾಗೆ ಟ್ರೈಲರ್ ರಿಲೀಸ್ ಈವೆಂಟ್‌ಗೆ ಕೃತಿ ಧರಿಸಿದ್ದ ಸೀರೆ ಈಗ ಸದ್ದು ಮಾಡುತ್ತಿದೆ. ಕೃತಿ ಧರಿಸಿದ್ದ ಸೀರೆ ಸಾಮಾನ್ಯ ಸೀರೆ ಆಗಿರಲಿಲ್ಲ. ವಿನ್ಯಾಸಕಾರರಾದ ಅಬು ಜಾನಿ ಮತ್ತು ಸಂದೀಪ್ ಖೋಸ್ಲಾ ಅವರು ಡಿಸೈನ್ ಮಾಡಿದ್ದ ಸೀರೆ ಅದಾಗಿತ್ತು. ಇದು 24-ಕ್ಯಾರೆಟ್ ಚಿನ್ನದ ಖಾದಿ ಮುದ್ರಣ ಮತ್ತು ಪಚ್ಚೆಗಳನ್ನು ಒಳಗೊಂಡಿದೆ.
ಕೃತಿ ಧರಿಸಿದ್ದ ಸೀರೆ 'ಜರ್ಡೋಜಿ ಬಾರ್ಡರ್‌ನೊಂದಿಗೆ ಮಿಶ್ರಿತ ಬಿಳಿ ಖಾದಿ ಸೀರೆ ಮತ್ತು 24-ಕ್ಯಾರೆಟ್ ಚಿನ್ನದ ವಿಂಟೇಜ್ ಕೇರಳದ ಕಾಟನ್ ಸೀರೆ ಇದಾಗಿದೆ' ಎಂದು ಡಿಸೈನರ್ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಕೃತಿ, 'ನಾನು ಇಂದು ತುಂಬಾ ಭಾವುಕನಾಗಿದ್ದೇನೆ, ಟ್ರೇಲರ್ ಅನ್ನು ನೋಡುವಾಗ ನನಗೆ ರೋಮಾಂಚನ ಆಯ್ತು. ಏಕೆಂದರೆ ಇದು ಕೇವಲ ಚಲನಚಿತ್ರವಲ್ಲ ಅದಕ್ಕಿಂತ ಹೆಚ್ಚು. ಈ ಚಿತ್ರದ ಅನುಭವ ತುಂಬಾ ವಿಶೇಷವಾಗಿದೆ' ಎಂದು ಹೇಳಿದ್ದಾರೆ.
ಆದಿಪುರುಷ್ ಸಿನಿಮಾದ ಟ್ರೈಲರ್ ಅದ್ದೂರಿಯಾಗಿ ರಿಲೀಸ್ ಮಡುವ ಮೊದಲು ಹೈದರಾಬಾದ್‌ನ ಕೆಲವು ಚಿತ್ರಮಂದಿರಗಳಲ್ಲಿ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಅಭಿಮಾನಿಗಳಿಗೆ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಈ ಬಹುನಿರೀಕ್ಷೆಯ ಸಿನಿಮಾ ಜೂನ್ 16 ರಂದು ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಲಿದೆ.