Actress Bikini Look: ಬಿಕಿನಿ ಧರಿಸಿ ಹಾಟ್ ಲುಕ್ನಲ್ಲಿ ಕೊರೋನಾ ಸುದ್ದಿ ಹೇಳಿದ ನೋರಾ
ಕಳೆದ ಕೆಲವು ದಿನಗಳಲ್ಲಿ ಬಹಳಷ್ಟು ನಟಿಯರು ತಮ್ಮ ಬಿಕಿನಿ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಕಿಯಾರಾ ಅಡ್ವಾಣಿಯಿಂದ (Kiara Advan) ಹಿಡಿದು ಪೂಜಾ ಹೆಗ್ಡೆ (Pooja Hegde), ಜಾನ್ವಿ ಕಪೂರ್ (Janhvi Kapoor) ಮತ್ತು ಹೆಚ್ಚಿನವರು, ತಮ್ಮ ಹಾಟ್ ಬಿಕಿನಿ ಫೋಟೋಗಳೊಂದಿಗೆ ಇಂಟರ್ನೆಟ್ಗೆ ಬೆಂಕಿ ಹಂಚಿದ್ದಾರೆ.
ಇತ್ತೀಚೆಗೆ ತಮ್ಮ ಸಾಮಾಜಿಕ ಮಾಧ್ಯಮ ಪೇಜ್ನಲ್ಲಿ ಬಿಕಿನಿ ಲುಕ್ನಲ್ಲಿ ಕಾಣಿಸಿಕೊಂಡಿರುವ ಈ ನಟಿಯರು ಇಲ್ಲಿದ್ದಾರೆ. ಕಿಯಾರಾ ಅಡ್ವಾಣಿಯಿಂದ ಪೂಜಾ ಹೆಗ್ಡೆ ವರೆಗೆ ಹಲವು ನಟಿಯರ ಬಿಕಿನಿ ಫೋಟೋಗಳನ್ನು ಮಿಸ್ ಮಾಡಿಕೊಳ್ಳಬೇಡಿ.
ಜಾನ್ವಿ ಕಪೂರ್: ಮಂಗಳವಾರ, ನಟಿ ಜಾನ್ವಿ ಕಪೂರ್ ಅವರು ಹಳದಿ ಹೂವಿನ ಬಿಕಿನಿಯನ್ನು ಧರಿಸಿರುವ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಪೂಲ್ನ ಜಾನ್ವಿಯ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ತಾಪಮಾನ ಹೆಚ್ಚಿಸಿವೆ. ಫ್ಯಾನ್ಸ್ ಜಾನ್ವಿಯನ್ನು 'ಮತ್ಸ್ಯಕನ್ಯೆ' ಎಂದು ಕರೆದಿದ್ದಾರೆ.
ಸೋನಾಲ್ ಚೌಹಾಣ್: ಇತ್ತೀಚಿಗೆ ಪೂಲ್ನಿಂದ ಬಿಕಿನಿ ಫೋಟೋವನ್ನು ಹಾಕಿರುವ ಮತ್ತೊಬ್ಬ ನಟಿ ಸೋನಾಲ್ ಚೌಹಾಣ್. ಸೋನಾಲ್ ತನ್ನ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ಪಿಂಕ್ ಬಿಕಿನಿ ಧರಿಸಿರುವ ಮೂರು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಕಿಯಾರಾ ಅಡ್ವಾಣಿ: ಸಿದ್ಧಾರ್ಥ್ ಮಲ್ಹೋತ್ರಾ ಅವರ ರೂಮರ್ಡ್ ಗರ್ಲ್ಫ್ರೆಂಡ್, ನಟಿ ಕಿಯಾರಾ ಅಡ್ವಾಣಿ ಮಾಲ್ಡೀವ್ಸ್ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. 'ಶೆರ್ಷಾ' ನಟಿ ಬಿಳಿ ಬಿಕಿನಿಯನ್ನು ಶೋ ಆಫ್ ಮಾಡುತ್ತಿರುವ ಫೋಟೋ ಮತ್ತು ರೀಲ್ ಅನ್ನು ಹಂಚಿಕೊಂಡಿದ್ದಾರೆ.
ದಿಶಾ ಪಟಾನಿ: ಪರ್ಫೇಕ್ಟ್ ಫಿಗರ್ ಮತ್ತು ತನ್ನ ಹಾಟ್ ಬಾಡಿ ದೇಹವನ್ನು ಪ್ರದರ್ಶಿಸುವಲ್ಲಿ ದಿಶಾ ಪಟಾನಿ ಎಂದಿಗೂ ವಿಫಲವಾಗುವುದಿಲ್ಲ. ಅದರಲ್ಲೂ ವಿಶೇಷವಾಗಿ ಬಿಕಿನಿಯಲ್ಲಿ ಲುಕ್ನ ಪೋಸ್ಟ್ ಮಾಡುವುದನ್ನು ತಪ್ಪಿಸುವುದಿಲ್ಲ. ದಿಶಾ ಆಗಾಗ್ಗೆ ತನ್ನ ಸಾಮಾಜಿಕ ಮಾಧ್ಯಮದಲ್ಲಿ ತನ್ನ ಹಾಟ್ ಫೋಟೋಗಳನ್ನು ಹಾಕುತ್ತಾರೆ. ಬೇಬಿ ಪಿಂಕ್ ಬಿಕಿನಿಯಲ್ಲಿ ಕಾಣಿಸಿಕೊಂಡಿರುವ ದಿಶಾ ಅವರ ಈ ಫೋಟೋ ಅಂತರ್ಜಾಲಕ್ಕೆ ಬೆಂಕಿ ಹಚ್ಚಿತ್ತು.
ನೋರಾ ಫತೇಹಿ: ಇತ್ತೀಚೆಗೆ ನಟಿ ನೋರಾ ಫತೇಹಿ ಕೋವಿಡ್ -19 ನಿಂದ ಚೇತರಿಸಿಕೊಂಡಿದ್ದಾರೆ. ಕಪ್ಪು ಮತ್ತು ಬಿಳಿ ಬಿಕಿನಿಯಲ್ಲಿ, ನೋರಾ ತಮ್ಮ ಬೀಚ್ನಿಂದ ಸೆಲ್ಫಿಯನ್ನು ಪೋಸ್ಟ್ ಮಾಡಿದ್ದಾರೆ. ಅವರು ಕೋವಿಡ್ -19 ನಿಂದ ಚೇತರಿಸಿಕೊಂಡ ನಂತರ ಪ್ರಸ್ತುತ ದುಬೈನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.