ಮಗುವಾದ ತಿಂಗಳಲ್ಲಿಯೇ ಮತ್ತೆ ಶೂಟಿಂಗ್ ಆರಂಭಿಸಿದ ಕರೀನಾ ಕಪೂರ್!
ಎರಡನೇ ಮಗನಿಗೆ ಜನ್ಮ ನೀಡಿದ ಒಂದು ತಿಂಗಳ ನಂತರ ಕರೀನಾ ಕಪೂರ್ ಶೂಟಿಂಗ್‌ಗೆ ಮರಳಿದ್ದಾರೆ. ಸೋಮವಾರ, ಬೆಬೊ ಶೂಟಿಂಗ್ ಸೆಟ್‌ನಲ್ಲಿ ಕಾಣಿಸಿಕೊಂಡರು. ಸೆಟ್ ತಲುಪಿದ ಕರೀನಾ ಅವರ ಅನೇಕ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ಫೋಟೋಗಳಲ್ಲಿನ ಪೋಸ್ಟ್ ಡೆಲಿವರಿ ಟ್ರಾನ್ಸ್‌ಫಾರ್ಮೇಷನ್ ಎಲ್ಲರನ್ನು ಅಚ್ಚರಿಗೊಳಿಸಿದೆ. ಅವರ ಈ ಲುಕ್‌ನಿಂದ ಎರಡನೇ ಮಗನಿಗೆ ಜನ್ಮ ನೀಡಿದ ನಂತರ ಕರೀನಾ ವೇಯಿಟ್ ಲಾಸ್ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ ಎಂಬುವುದು ಸ್ಪಷ್ಟವಾಗುತ್ತದೆ.
ಎರಡನೇ ಮಗುವಾದ ಮೇಲೆ ಮತ್ತೆ ಶೂಟಿಂಗ್‌ನಲ್ಲಿ ತಲ್ಲೀನರಾಗಿದ್ದಾರೆ ಕರೀನಾ ಕಪೂರ್. ಈ ಸಮಯದಲ್ಲಿ ಲೈಟ್ ಮೇಕಪ್ ಧರಿಸಿ ಹೀಲ್ಸ್ ಮತ್ತು ತೆರೆದ ಕೂದಲಿನಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ.
ಫೆಬ್ರವರಿ 21ರಂದು ಕರೀನಾ ತಮ್ಮ ಎರಡನೇ ಮಗನಿಗೆ ಜನ್ಮ ನೀಡಿದ್ದು, ಈಗ ಒಂದು ತಿಂಗಳ ನಂತರ ಕೆಲಸಕ್ಕೆ ಮರಳಿದ್ದಾರೆ. ಅವರ ಮೊದಲ ಪ್ರೆಗ್ನೆಂಸಿ ಮತ್ತು ಹೆರಿಗೆ ನಂತರವೂ ಅವರು ಅದೇ ರೀತಿ ಮಾಡಿದರು. ಡೆಲಿವರಿಯ ಎರಡು ದಿನಗಳ ಮೊದಲೂ ಕರೀನಾ ಶೂಟ್ ಮಾಡಿದ್ದರು.
ಕರೀನಾ ಕಪೂರ್ ಇನ್ನೂ ತಮ್ಮ ಎರಡನೆಯ ಮಗನ ಹೆಸರನ್ನು ಆನೌನ್ಸ್ ಮಾಡಿಲ್ಲ. ಜೊತೆಗೆ ಮಗನ ಮುಖವನ್ನು ಫ್ಯಾನ್ಸ್‌ಗೆ ತೋರಿಸಿಲ್ಲ.
ಕೈಯಲ್ಲಿ ಬಾಟಲ್ ಮತ್ತು ಫೋನ್ ಹಿಡಿದು ಜಿಮ್‌ನ ಹೊರಗೆ ಕಾಣಿಸಿಕೊಂಡ ಮಲೈಕಾ ಅರೋರಾ .
ಗೋವಿಂದ ಪತ್ನಿ ಸುನೀತಾ ಜೊತೆಗೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು.
ಇತ್ತೀಚೆಗೆ ಲ್ಯಾಕ್ಮೆ ಫ್ಯಾಶನ್ ವೀಕ್‌ನಲ್ಲಿ ರಾಂಪ್‌ನಲ್ಲಿ ನಡೆದ ಅನನ್ಯಾ ಪಾಂಡೆ ಕುಟುಂಬದೊಂದಿಗೆ.
ಪಪ್ಪಾ ಬೋನಿ ಕಪೂರ್ ಜೊತೆ ವಿಮಾನ ನಿಲ್ದಾಣದಲ್ಲಿ ಜಾನ್ವಿ ಕಪೂರ್.
ಅಮೀರಾ ದಸ್ತೂರ್ ಮತ್ತು ಕುನಾಲ್ ಕಪೂರ್ ಅವರನ್ನು ಬಾಂದ್ರಾದಲ್ಲಿ ಸ್ಪಾಟ್ ಮಾಡಲಾಯಿತು. ಈ ದಿನಗಳಲ್ಲಿ ಇಬ್ಬರೂ ತಮ್ಮ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.
ಕಂಗನಾ ರಣಾವತ್ ಬಾಂದ್ರಾದ ಡಬ್ಬಿಂಗ್ ಸ್ಟುಡಿಯೊದ ಹೊರಗೆ. ಅವರು ಬಿಳಿ ಬಣ್ಣದ ಸೀರೆಯನ್ನು ಧರಿಸಿ ಸನ್ ಗ್ಲಾಸ್‌ನಲ್ಲಿ ಕಾಣಿಸಿಕೊಂಡರು. ಮಾಸ್ಕ್ ಧರಿಸಿರಲಿಲ್ಲ.
ಜಿಮ್ ಹೊರಗೆ ಕಾಣಿಸಿಕೊಂಡ ಸಾರಾ ಅಲಿ ಖಾನ್ ಫೋಟೋಗ್ರಾಫರ್ಸ್‌ಗೆ ಸಾಕಷ್ಟು ಪೋಸ್ ನೀಡಿದ್ದರು. ಸಾರಾ ಶಾರ್ಟ್ಸ್ ಮತ್ತು ಟೀ ಶರ್ಟ್‌ಗಳಲ್ಲಿ ಮೋಹಕವಾಗಿ ಕಾಣುತ್ತಿದ್ದರು.
ಬಿಳಿ ಬಣ್ಣದ ಶರ್ಟ್ ಧರಿಸಿ ನೀಲಿ ಫೈಲ್ ಹಿಡಿದು ರಕುಲ್ ಪ್ರೀತ್ ಸಿಂಗ್ ಕಾಣಿಸಿಕೊಂಡಿದ್ದು ಹೀಗೆ.