ಹೆಂಡತಿ ಬಿಟ್ಟ 2 ಮಕ್ಕಳ ತಂದೆಯ ಮದುವೆಯಾಗಬೇಡ ಎಂದಿದ್ರಂತೆ ಮಂದಿ!

First Published Jun 12, 2020, 6:26 PM IST

ಕೆರಿಯರ್‌ನ ಟಾಪ್‌ನಲ್ಲಿದ್ದ  ಕರೀನಾ ಕಪೂರ್‌, ಡಿವೋರ್ಸಿ 2 ಮಕ್ಕಳ ತಂದೆ ಸೈಫ್‌ ಅಲಿ ಖಾನ್‌ರನ್ನು 2012ರಲ್ಲಿ ಮದುವೆಯಾಗುವ ಸುದ್ದಿ ಕೊಟ್ಟು ಎಲ್ಲರಿಗೂ ಶಾಕ್‌ ಕೊಟ್ಟಿದ್ದರು. ಕರೀನಾರ ಈ ನಿರ್ಧಾರಕ್ಕೆ ಮೂಗು ಮುರಿಯದವರೇ ಇಲ್ಲ ಎನ್ನಬಹುದು. ಕಳೆದ ವರ್ಷ ಬಾಲಿವುಡ್‌ ದಿವಾ ಕಾಫಿ ವಿತ್ ಕರಣ್‌ನಲ್ಲಿ ಈ ಬಗ್ಗೆ ಹೇಳಿಕೊಂಡಿದ್ದರು. ಕರೀನಾ ಸೈಫ್‌ರನ್ನು ಪ್ರೀತಿಸಿ ಮದುವೆಯಾಗಲು ಡಿಸೈಡ್‌ ಮಾಡಿದಾಗ ಫ್ಯಾನ್ಸ್ ವಿರೋಧ ವ್ಯಕ್ತಪಡಿಸಿದ್ದರು. ಹಾಗೂ ಹೆಂಡತಿ ಬಿಟ್ಟ 2 ಮಕ್ಕಳ ತಂದೆಯನ್ನು ಮದುವೆಯಾಗಬೇಡ ಎಂದು ಹಲವರು ಎಚ್ಚರಿಸಿದ್ದರಂತೆ. ಈಗ ಸೈಫೀನಾ ದಂಪತಿಗೆ ತೈಮೂರ್‌ ಎಂಬ ಮಗನಿದ್ದಾನೆ.