ಮೊದಲ ಬಾರಿಗೆ ಎರಡನೇ ಮಗ ಜೆಹ್ ಜೊತೆ ಕಾಣಿಸಿಕೊಂಡ ಕರೀನಾ ಸೈಫ್!
ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಅವರ ಎರಡನೇ ಮಗುವಿನ ಮುಖ ನೋಡಲು ಅಭಿಮಾನಿಗಳು ಬಹಳ ಸಮಯದಿಂದ ಕಾಯುತ್ತಿದ್ದರು. ಕರೀನಾ-ಸೈಫ್ ತಮ್ಮ ಕಿರಿಯ ಮಗ ಜೇಹ್ ರಣಧೀರ್ ಕಪೂರ್ ಅವರ ಮನೆಯ ಹೊರಗೆ ಕಾಣಿಸಿಕೊಂಡರು. ಫೋಟೋಗಳಲ್ಲಿ, ಜೆಹ್ ಖವು ಸಂಪೂರ್ಣವಾಗಿ ಕಾಣಿಸದಿದ್ದರೂ, ಫ್ಯಾನ್ಸ್ ಕರೀನಾರ ಮಗುವಿನ ಫಸ್ಟ್ ಲುಕ್ನಿಂದ ಸಾಕಷ್ಟು ಖುಷಿಯಾಗಿದ್ದಾರೆ. ಹೊರಬಂದ ಫೋಟೋಗಳಲ್ಲಿ, ತಂದೆ ಸೈಫ್ ತೋಳಲ್ಲಿ ಜೆಹ್ ಕಾಣಿಸಿಕೊಂಡಿದ್ದಾನೆ.
ಈ ವರ್ಷ ಫೆಬ್ರವರಿಯಲ್ಲಿ ಕರೀನಾ ಕಪೂರ್ ತಮ್ಮ ಎರಡನೇ ಮಗುವಿಗೆ ಜನ್ಮ ನೀಡಿದ್ದರು. ಆದರೆ ಇಲ್ಲಿಯವರೆಗೆ, ಅವರು ಮಗನ ಮುಖವನ್ನು ಯಾರಿಗೂ ತೋರಿಸಲಿಲ್ಲ ಹಾಗೂ ಅವನ ಹೆಸರಿನ ಬಗ್ಗೆ ಯಾವುದೇ ಮಾಹಿತಿಯನ್ನೂ ಬಹಿರಂಗ ಪಡಿಸಿರಲಿಲ್ಲ. ವಾಸ್ತವವಾಗಿ, ತನ್ನ ಮಗವನ್ನು ಮಿಡೀಯಾದಿಂದ ಆದಷ್ಟು ದೂರವಿಡಲು ಬಯಸಿದ್ದಾರೆ ಕರೀನಾ ದಂಪತಿಗಳು.
ಕರೀನಾ ಕಪೂರ್ ಕೆಲವು ದಿನಗಳ ಹಿಂದೆ ತಮ್ಮ ಒಂದು ಪುಸ್ತಕವನ್ನು ಬಿಡುಗಡೆ ಮಾಡಿದ್ದರು. ಈ ಪುಸ್ತಕದ ಮೂಲಕ ಅವರು ನಟಿಯ ಮಗ ಹೆಸರು ತಿಳಿದು ಬಂದಿದೆ. ಈ ಪುಸ್ತಕದಲ್ಲಿ ಮಗನ ಹೆಸರನ್ನು ಜಹಾಂಗೀರ್ ಅಲಿ ಖಾನ್ ಎಂದು ಉಲ್ಲೇಖಿಸಲಾಗಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.
ತೈಮೂರ್ನಂತೆ ಎರಡನೇ ಮಗನಿಗೂ ಸಯೀದ್ ಅತ್ಯಂತ ಕ್ರೂರ ರಾಜ ಜಹಾಂಗರ್ ಹೆಸರನ್ನು ಇಟ್ಟಿದಾನೆ. ಇದಕ್ಕೂ ಜನರು ಟ್ರೋಲ್ ಮಾಡುತ್ತಿದ್ದಾರೆ. ಕರೀನಾ ತಮ್ಮ ಮೊದಲ ಮಗನಿಗೆ ತೈಮೂರ್ ಎಂದು ಹೆಸರಿಸಿದಾಗಲೂ ಜನರು ಆಕ್ಷೇಪಿಸಿದ್ದರು.
ಕರೀನಾ ಕಪೂರ್ ಕೆಲವು ದಿನಗಳ ಹಿಂದೆ ತಮ್ಮ ಒಂದು ಪುಸ್ತಕವನ್ನು ಬಿಡುಗಡೆ ಮಾಡಿದ್ದರು. ಈ ಪುಸ್ತಕದ ಮೂಲಕ ಅವರ ಮಗನ ಹೆಸರು ತಿಳಿದುಬಂದಿದೆ. ಈ ಪುಸ್ತಕದಲ್ಲಿ ಮಗನ ಹೆಸರನ್ನು ಜಹಾಂಗೀರ್ ಲಿ ಖಾನ್ ಎಂದು ಉಲ್ಲೇಖಿಸಲಾಗಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.
ಆದರೆ ಕರಣ್ ಜೋಹರ್ ಜೊತೆ ಮಾತನಾಡುವಾಗ, ಕರೀನಾ ಸ್ವತಃ ಮಗನ ಹೆಸರು ಜೆಹ್ ಅಲಿ ಖಾನ್ ಎಂದು ಹೇಳಿದರು. ಕರೀನಾ-ಸೈಫ್ ತಮ್ಮ ಮಗನಿಗೆ ಜಹಾಂಗೀರ್ ಎಂದು ಹೆಸರಿಟ್ಟಿದ್ದು ಬೆಳಕಿಗೆ ಬಂದ ತಕ್ಷಣ, ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಮಾಡಲು ಪ್ರಾರಂಭಿಸಿದರು.
ತಮ್ಮ ಮೂರನೇ ಮಗನಿಗೆ ಔರಂಗಜೇಬ್ ಎಂದು ಹೆಸರಿಸುತ್ತಾರೆ ಎಂದು ಜನರು ಟೀಕೆ ಮಾಡಲು ಪ್ರಾರಂಭಿಸಿದ್ದರು.ಅದೇ ಸಮಯದಲ್ಲಿ, ಇತ್ತೀಚೆಗೆ, ಕರೀನಾ ಜಹಾಂಗೀರ್ ಹೆಸರಿನಲ್ಲಿ ಹರಡಿರುವ ನೆಗೆಟಿವಿಟಿ ಕುರಿತು ಇಂಡಿಯಾ ಟುಡೇ ಜೊತೆ ಮಾತನಾಡಿದ್ದಾರೆ.
'ನಾನು ತುಂಬಾ ಪಾಸಿಟಿವ್ ಚಿಂತನೆಯ ಮಹಿಳೆ. ನಾನು ಯಾವಾಗಲೂ ಪಾಸಿಟಿವಿಟಿಯನ್ನು ಹರಡಲು ಇಷ್ಟಪಡುತ್ತೇನೆ. ಯಾರಾದರೂ ನೆಗೆಟಿವ್ ಆಗಿ ಟ್ರೋಲ್ ಮಾಡುತ್ತಿದ್ದರೆ ಅಥವಾ ಮಾತನಾಡುತ್ತಿದ್ದರೆ, ನಾನು ಅದರ ಬಗ್ಗೆ ಗಮನ ಹರಿಸುವುದಿಲ್ಲ' ಎಂದು ಕರೀನಾ ಹೇಳಿದರು.
'ಇದರಿಂದ ಹೊರಬರಲು ನನಗೆ ಒಂದು ಸರಿಯಾದ ಮಾರ್ಗವಿದೆ. ಅದು ಧ್ಯಾನ. ನಾನು ಒತ್ತಡಕ್ಕೊಳಗಾದಾಗ ಧ್ಯಾನ ಮಾಡುವ ಮೂಲಕ ರಿಲ್ಯಾಕ್ಸ್ ಆಗುತ್ತೇನೆ. ಈ ಸಮಯದಲ್ಲಿ, ನಾನು ಯಾವಾಗಲೂ ಧ್ಯಾನ ಮಾಡುತ್ತೇನೆ. ಧನಾತ್ಮಕ ವಿಷಯಗಳಿದ್ದರೆ ನಕಾರಾತ್ಮಕ ಅಂಶಗಳೂ ಇರುತ್ತವೆ ಎಂದು ನಂಬಿದ್ದೇನೆ ಮತ್ತು ನಾನು ಈ ವಿಷಯಗಳನ್ನು ನನ್ನದೇ ರೀತಿಯಲ್ಲಿ ನೋಡುತ್ತೇನೆ' ಎಂದು ಸಂದರ್ಶನದಲ್ಲಿ ಹೇಳಿದರು.
'ಜನರು ಮಾತನಾಡುತ್ತಿರುವುದು ಇಬ್ಬರ ಮುಗ್ಧ ಮಕ್ಕಳು ಬಗ್ಗೆ. ಅವರಿಗೆ ಈ ಎಲ್ಲ ವಿಷಯಗಳ ಬಗ್ಗೆ ಅರ್ಥವಾಗುವುದಿಲ್ಲ. ಇಬ್ಬರೂ ಸಂತೋಷವಾಗಿರುವುದನ್ನು ನೋಡಲು ಮತ್ತು ನನ್ನನ್ನು ಧನಾತ್ಮಕವಾಗಿಡಲು ನಾನು ಬಯಸುತ್ತೇನೆ' ಎಂದು ಬೇಸರದಲ್ಲಿ ತಮ್ಮ ಮಕ್ಕಳ ಹೆಸರಿನ ಟ್ರೋಲ್ಗಳಿಗೆ ಪ್ರತಿಕ್ರಿಯಿಸಿದ್ದಾರೆ ಬೆಬೋ.