ನಾವ್ಯಾವತ್ತೂ ಫ್ರೆಂಡ್ಸ್ ಆಗರ್ಲಿಲ್ಲ: ಕರೀನಾ ಬಗ್ಗೆ ಪಿಗ್ಗಿ ಮಾತು
ಬಾಲಿವುಡ್‌ನಲ್ಲಿ ಟಾಪ್ ನಟಿಯರಾಗಿದ್ರೂ ಫ್ರೆಂಡ್‌ಶಿಪ್ ಇಲ್ಲ ಬೇಬೋ & ಪಿಗ್ಗಿ ಯಾವತ್ತೂ ಗೆಳತಿಯರಾಗಿರ್ಲಿಲ್ವಂತೆ

ಬಾಲಿವುಡ್‌ನಲ್ಲಿ ಜೆಡೆ ಜಗಳ ಬಹಳಷ್ಟಿದೆ. ಕರೀನಾಗೆ ಐಶ್ವರ್ಯಾ ಕಂಡ್ರೆ ಆಗಲ್ಲ, ಸೋನಂ ಕೂಡಾ ಐಶ್‌ಗೆ ಟಾಂಗ್ ಕೊಟ್ಟಿದ್ದಾಳೆ. ಹಾಗೆಯೇ ಅಲ್ಲಿಂದಲ್ಲಿಗೆ ರಿಲೇಷನ್‌ಶಿಪ್ ಮೈಂಟೆನ್ ಮಾಡುವವರಿದ್ದಾರೆ. ಅತ್ತ ಜಗಳವೂ ಇಲ್ಲ, ಇತ್ತ ಫ್ರೆಂಡ್‌ಶಿಪ್ ಕೂಡಾ ಇಲ್ಲ ಎನ್ನವಂತಹ ಸಂಬಂಧಗಳೂ ಬಾಲಿವುಡ್‌ನಲ್ಲಿದೆ.
ಪ್ರಿಯಾಂಕ ಚೋಪ್ರಾ ಹಾಗೂ ಕರೀನಾ ಕಪೂರ್ ಗೆಳತಿಯರಲ್ಲ ಅಂದ್ರೆ ಅಚ್ಚರಿಯಾಗಲ್ವಾ ? ಹೌದು, ಇವರಿಬ್ಬರ ನಡುವೆ ಅಂಥಹ ಫ್ರೆಂಡ್‌ಶಿಪ್ ಬಾಂಡ್ ಇಲ್ಲ. ಸಹುದ್ಯೋಗಿಗಳು ಅಷ್ಟೇ. ಹಾಗಂತ ಕೋಪ, ಜಗಳ ಏನಿಲ್ಲ
ಎಲ್ಲವೂ ಚೆನ್ನಾಗಿ ಶುರುವಾಗುವುದು, ಚೆನ್ನಾಗಿ ಕೊನೆಗೊಳ್ಳುವುದು ಕೆಲವೊಮ್ಮೆ ನಿಜವಲ್ಲ. ಪೀಸಿ ಮತ್ತು ಬೆಬೊ ಅವರ ಸಂಬಂಧವನ್ನು ನೋಡಿದರೆ ಇವರದ್ದು ಕೂಲ್ ರಿಲೇಷನ್‌ಶಿಪ್. ಇಬ್ಬರು ಅದ್ಭುತವಾದ ನಟಿಯರು ಐತ್ರಾಜ್ ಮತ್ತು ನಂತರ ಡಾನ್‌ನಲ್ಲಿ ಒಟ್ಟಿಗೆ ಕೆಲಸ ಮಾಡಿದಾಗ ಚೆನ್ನಾಗಿ ಮೂಡಿ ಬಂದಿತ್ತು ಸಿನಿಮಾ.
ಆದರೆ ಕರೀನಾ ಮತ್ತು ಶಾಹಿದ್ ವಿಘಟನೆಯ ನಂತರ ಶಾಹಿದ್ ಕಪೂರ್ ಮತ್ತು ಪ್ರಿಯಾಂಕ ಚೋಪ್ರಾ ಪರಸ್ಪರ ಡೇಟಿಂಗ್ ಆರಂಭಿಸಿದ ನಂತರ ಇಬ್ಬರ ನಡುವಿನ ಸಂಬಂಧ ಸ್ವಲ್ಪ ಬಿಗಡಾಯಿಸಿತು. ಆದರೂ ಇಬ್ಬರೂ ಇದನ್ನು ಸಾರ್ವಜನಿಕವಾಗಿ ದೃಢಪಡಿಸಲಿಲ್ಲ. ಕಾಫಿ ವಿಥ್ ಕರಣ್ ಶೋನಲ್ಲಿ ಕೆಲವು ಕ್ಲೂ ಕೊಟ್ಟಿದ್ದಾರೆ.
ಸರಿ, ಕರೀನಾ ಮತ್ತು ನಾನು ಎಂದಿಗೂ ಸ್ನೇಹಿತರಾಗಿರಲಿಲ್ಲ. ನಾವು ಹ್ಯಾಂಗ್ ಔಟ್ ಮಾಡಿದ್ದೇವೆ, ನಮಗೆ ಕಾಮನ್ ಫ್ರೆಂಡ್ಸ್ ಇದ್ದಾರೆ. ಆ ಸಮಯದಲ್ಲಿ ನಾವು ಬಹಳಷ್ಟು ಹ್ಯಾಂಗ್ ಔಟ್ ಮಾಡುತ್ತಿದ್ದೆವು. ನಾವು ಒಟ್ಟಿಗೆ ರಜೆಯಲ್ಲಿದ್ದೆವು. ನಾವು ಒಟ್ಟಿಗೆ ಚಿತ್ರವೊಂದರಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ನಾನು ಭಾವಿಸುತ್ತೇನೆ. ಅವಳು ತನ್ನ ಜೀವನದಲ್ಲಿ ನಿರತಳಾಗಿದ್ದಾಳೆ, ನಾನು ನನ್ನ ಜೀವನದಲ್ಲಿ ನಿರತಳಾಗಿದ್ದೇನೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
ప్రియాంక చోప్రా గ్లామర్ ఫోటోలు.
ಆದರೂ ಅವರ ನಡುವೆ ಕೆಟ್ಟದ್ದೇನೂ ಇಲ್ಲ ಎಂದು ನಟಿ ದೃಢಪಡಿಸಿದ್ದಾರೆ. ನಾವು ಚಿಟ್-ಚಾಟ್ ಮಾಡುತ್ತೇವೆ, ನಗುತ್ತೇವೆ. ಆದರೆ ವೃತ್ತಿಪರವಾಗಿ ಜನರು ತಮ್ಮ ಜೀವನದಲ್ಲಿ ಕಾರ್ಯನಿರತರಾಗಿದ್ದಾರೆ. ನೀವು ಸಹನಟರಾಗಿರುವ ಕಾರಣಕ್ಕೆ ನೀವು ಅತ್ಯುತ್ತಮ ಸ್ನೇಹಿತರಾಗಿರಬೇಕೆಂದಿಲ್ಲ ಎಂದಿದ್ದಾರೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.