ಸ್ಪೇಷಲ್ ಮೆಸೇಜ್ ಜೊತೆ ಮಗಳ ಪೋಟೋ ಹಂಚಿಕೊಂಡ ಕಪಿಲ್ ಶರ್ಮ!
ವರ್ಲ್ಡ್ ಡಾಟರ್ ಡೇಯನ್ನು ಸೆಪ್ಟೆಂಬರ್ 27 ರಂದು ಆಚರಿಸಲಾಗುತ್ತದೆ. ಎಲ್ಲಾ ಸ್ಟಾರ್ಸ್ ತಮ್ಮ ಹೆಣ್ಣುಮಕ್ಕಳೊಂದಿಗೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ, ಈ ಸಮಯದಲ್ಲಿ, ಕಾಮಿಡಿ ಕಿಂಗ್ ಕಪಿಲ್ ಶರ್ಮಾ ಅವರ ಮಗಳ ಜೊತೆ ಕಾಣಿಸಿಕೊಂರುವ ಅವರ ಪೋಟೋ ವೈರಲ್ ಆಗುತ್ತಿದೆ. 2019 ರ ವರ್ಷವು ಕಪಿಲ್‌ಗೆ ಸ್ಪೆಷಲ್ ಕಪಿಲ್ ಶರ್ಮಾ ಶೋ ಹೆಚ್ಚು ಟಿಆರ್‌ಪಿ ಗಳಿಸಿದೆ, ವರ್ಷದ ಕೊನೆಯಲ್ಲಿ, ಪುಟ್ಟ ಏಂಜೆಲ್ ಅವರ ಮನೆಗೆ ಬಂದಳು. 10 ಡಿಸೆಂಬರ್ 2019 ರಂದು ತಂದೆಯಾದರು ಕಪಿಲ್ ಶರ್ಮ.
ಸೆಪ್ಟೆಂಬರ್ 27 ರಂದು, ವರ್ಲ್ಡ್ ಡಾಟರ್ ಡೇಯನ್ನು ಪ್ರಪಂಚದಾದ್ಯಂತ ಆಚರಿಸಲಾಯಿತು. ಈ ವಿಶೇಷ ದಿನದಂದು, ಅನೇಕ ಸ್ಟಾರ್ಸ್ ತಮ್ಮ ಹೆಣ್ಣುಮಕ್ಕಳನ್ನು ಹೆಸರಿಸುವಾಗ ತಮ್ಮ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಹೆಣ್ಣುಮಕ್ಕಳ ದಿನದಂದು ಕಪಿಲ್ ಶರ್ಮ ಮುದ್ದಾದ ಸಂದೇಶ ಜೊತೆ ಮಗಳ ಪೋಟೋ ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ.
ಕಪಿಲ್ ತಮ್ಮ ಮಗಳು ಅನಯ್ರಾ ಶರ್ಮಾ ಜೊತೆಯ ಫೋಟೋ ಅಂತರ್ಜಾಲದಲ್ಲಿ ಬಹಳ ವೈರಲ್ ಆಗಿದೆ.
'ನಮ್ಮ ಜೀವನವನ್ನು ಹೆಚ್ಚು ಸುಂದರಗೊಳಿಸಿದ್ದಕ್ಕಾಗಿ ಧನ್ಯವಾದಗಳು ನಮ್ಮ ಲಾಡೋ' ಎಂದು ಫೋಟೋಗೆ ಕ್ಯಾಪ್ಷನ್ ನೀಡಿದ್ದಾರೆ.
ಈ ಸಂದರ್ಭದಲ್ಲಿ, ಕಪಿಲ್ ಈ 2 ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅನಯ್ರಾಳ ಕ್ಯೂಟ್ ನಗುವಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ಇನ್ನೊಂದು ಫೋಟೋದಲ್ಲಿ, ಕೂಲಿಂಗ್ ಗ್ಲಾಸ್ ಧರಿಸಿ ಫೋಸ್ ನೀಡಿದ್ದಾಳೆ ಪುಣಾಣಿ ಅನಯ್ರಾ.
ಪೋಟೋಗೆ ಸಖತ್ ಲೈಕ್ ಮಾಡಿ ಕಾಮೆಂಟ್ ಮಾಡಿದ್ದಾರೆ ಫ್ಯಾನ್ಸ್.
ಕಪಿಲ್ ಮತ್ತು ಗಿನ್ನಿ ಸಾಮಾಜಿಕ ಮಾಧ್ಯಮದಲ್ಲಿ ಬಹಳ ಸಕ್ರಿಯರಾಗಿದ್ದು, ಆಗಾಗ ಮಗಳೊಂದಿಗೆ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಕಪಿಲ್ ತನ್ನ ಮಗಳೊಂದಿಗೆ ಲಾಕ್‌ಡೌನ್‌ನಲ್ಲಿ ಸಾಕಷ್ಟು ಸಮಯವನ್ನು ಕಳೆದರು.
ಕಪಿಲ್ ಶರ್ಮಾ ತನ್ನ ಗೆಳತಿ ಗಿನ್ನಿ ಚತ್ರತ್ ಅವರನ್ನು 2018 ರ ಡಿಸೆಂಬರ್‌ನಲ್ಲಿ ವಿವಾಹವಾದರು.