ಅಜ್ಜನ ಹಾದಿಯಲ್ಲಿ ಸಾಗಿ ಕ್ರಿಕೆಟರ್ ಆಗುತ್ತರಾ ಸೈಫ್ ಪುತ್ರ ಇಬ್ರಾಹಿಂ?
ನಟ ಸೈಫ್ ಆಲಿ ಖಾನ್ ಹಾಗೂ ಅಮೃತಾ ಸಿಂಗ್ ಮಕ್ಕಳಾದ ಸಾರಾ ಮತ್ತು ಇಬ್ರಾಹಿಂ ಬಾಲಿವುಡ್‌ನ ಫೇಮಸ್ ಸ್ಟಾರ್ ಕಿಡ್. ಸಾರಾ ಆಲಿ ಖಾನ್ ತಂದೆ ತಾಯಿಯಂತೆ ಸಿನಿಮಾ ರಂಗವನ್ನು ಆರಿಸಿಕೊಂಡಿದ್ದಾರೆ ಹಾಗೂ ನಿಧಾನವಾಗಿ ಯಶಸ್ಸು ಕೂಡ ಕಾಣುತ್ತಿದ್ದಾರೆ. ಅದೇ ರೀತಿ ಸೈಫ್ ಪುತ್ರ ಇಬ್ರಾಹಿಂ ಅವರನ್ನು ಸಹ ಫ್ಯಾನ್ಸ್ ತೆರೆ ಮೇಲೆ ಕಾಣಲು ಕಾಯುತ್ತಿದ್ದಾರೆ. ಆದರೆ ಇಬ್ರಾಹಿಂ ಅವರ ಅಜ್ಜನ ಹಾದಿಯಲ್ಲಿ ಸಾಗಿ ಕ್ರಿಕೆಟರ್ ಆಗುವ ಲಕ್ಷಣಗಳು ಕಾಣಿಸಿಕೊಳ್ಳುತ್ತಿದೆ.
ಸೈಫ್ ಅವರ ಸಹೋದರಿ ಸಾಬಾ ಆಲಿ ಖಾನ್ ತಮ್ಮ ಸೋದರಳಿಯ ಇಬ್ರಾಹಿಂ ಜೊತೆಗಿನ ಫೋಟೋವೊಂದನ್ನು ಶೇರ್ ಮಾಡಿದ್ದಾರೆ.
ಸಾಬಾ ಇನ್‌ಸ್ಟಾಗ್ರಾಮ್‌ನಲ್ಲಿ ಇಬ್ರಾಹಿಂ ಕ್ರಿಕೆಟ್ ಆಡುತ್ತಿರುವ ಫೋಟೋ ಪೋಸ್ಟ್ ಮಾಡಿದ್ದಾರೆ.
ಇಬ್ರಾಹಿಂ ಅಜ್ಜನಂತೆ ಇಂಡಿಯಾ ಟೀಮ್‌ಗೆ ಆಡುತ್ತಾನೆ ಎಂದು ನಿಮಗೆ ಅನಿಸುತ್ತದೆಯಾ ಎಂದು ಫೋಟೋಗೆ ಕ್ಯಾಪ್ಷನ್ ನೀಡಿದ್ದಾರೆ.
ಇಬ್ರಾಹಿಂ ತಂದೆಯಂತೆ ಆ್ಯಕ್ಟಿಂಗ್ ಮಾಡಬೇಕೆಂದು ಕಾಮೆಂಟ್‌ನಲ್ಲಿ ಫ್ಯಾನ್ಸ್ ಪುಕ್ಕಟೆ ಸಲಹೆ ನೀಡಿದ್ದಾರೆ.
ಇದು ಮೊದಲ ಬಾರಿಯಲ್ಲ. ಈ ಮೊದಲು ಅತನನ್ನು ಕ್ರಿಕೆಟ್ ಕಿಟ್ ಬ್ಯಾಗ್ ಜೊತೆ ಹಾಗೂ ಕ್ರಿಕೆಟ್ ಪ್ರಾಕ್ಟೀಸ್ ಮಾಡುತ್ತಿರುವುದನ್ನು ನೋಡಿದ್ದೇವೆ.
ಇಬ್ರಾಹಿಂ ತಂದೆಯಂತೆ ನಟ ಅಲ್ಲ, ಅಜ್ಜನಂತೆ ಕ್ರಿಕೆಟರ್ ಆಗಲು ಬಯಸುತ್ತಾನೆ ಎಂದು ಇದರಿಂದ ತಿಳಿಯುತ್ತದೆ.
'ಇಬ್ರಾಹಿಂ ನಟನೆಯ ಕೆರೆಯರ್ ಏಕೆ ಆರಸಿಕೊಳ್ಳಬಾರದು? ನನ್ನ ಎಲ್ಲಾ ಮಕ್ಕಳು ನಟನೆಯನ್ನು ಆರಸಿಕೊಂಡರೂ, ನನಗೆ ಇಷ್ಟ,'ಎಂದು ಸೈಫ್ ಇಂಟರ್‌ವ್ಯೂವ್‌ನಲ್ಲಿ ಒಮ್ಮೆ ಹೇಳಿದ್ದರು.
ಸಿನಿಮಾ ಇಂಡಸ್ಟ್ರಿ ಕೆಲಸ ಮಾಡಲು ಸೇಫ್ ಜಾಗ ಮತ್ತು ಅವರನ್ನು ಉಳಿಸಿದ್ದು ನಟನೆ ಎಂಬುದು ಸೈಫ್ ಅವರ ಅಭಿಪ್ರಾಯ.
'ಇಲ್ಲಿ ಕೆಲಸ ಮಾಡುವ ಮೂಲಕ ಜಾಬ್ ಡೆಟರ್ಮಿನೇಷನ್ ಪಡೆದು ಕೊಂಡಿದ್ದೇನೆ. ಇಲ್ಲಿ ಕೆಲಸ ಮಾಡುವುದನ್ನು ಎಲ್ಲದಕ್ಕಿಂತ ಮತ್ತು ಊಹಿಸಿದ್ದಕ್ಕಿಂತ ಹೆಚ್ಚಾಗಿ ಎಂಜಾಯ್ ಮಾಡುತ್ತಿದ್ದೇನೆ,' ಎಂದಿದ್ದಾರೆ ಸೈಫ್ ಆಲಿ ಖಾನ್.