ಮಲ್ಟಿಸ್ಟಾರ್ಸ್‌ಗಳಿದ್ದು ಈ ಬಿಗ್ ಬಜೆಟ್ ಚಿತ್ರ ಭಾರತದ ಸಿನಿ ರಂಗದ ದೊಡ್ಡ ಪ್ಲಾಪ್ಸ್!
ಭಾರತದ ಅತ್ಯಂತ ದುಬಾರಿ ಚಿತ್ರವೆಂದು ಪರಿಗಣಿಸಲ್ಪಟ್ಟ ಈ ಚಿತ್ರವು 8 ಸೂಪರ್ ಸ್ಟಾರ್ಸ್ ಹೊಂದಿದ್ದರೂ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡದೆ ಅಟ್ಟರ್ ಫ್ಲಾಪ್ ಸಿನಿಮಾವಾಗಿದ್ದಲ್ಲದೇ, ಇದು ಭಾರತದ ಅತಿದೊಡ್ಡ ಫ್ಲಾಪ್ ಸಿನಿಮಾಯಿತು. ಆ ಸಿನಿಮಾ ಯಾವುದು ಗೊತ್ತಾ?
ಶೋಲೆ (Sholey) ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅತಿದೊಡ್ಡ ಹಿಟ್ ಸಿನಿಮಾ. ಈ ಚಿತ್ರ ಎಲ್ಲ ಗಲ್ಲಾಪೆಟ್ಟಿಗೆ ದಾಖಲೆಗಳನ್ನು ಮುರಿದು, ಮದರ್ ಇಂಡಿಯಾ ಮತ್ತು ಮೊಘಲ್-ಎ-ಆಜಮ್ನಂತಹ ಬ್ಲಾಕ್‌ಬಸ್ಟರ್‌ಗಳನ್ನು ಹಿಂದಿಕ್ಕಿ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರವಾಯಿತು.
ಈ ಚಿತ್ರದ ಯುವ ನಿರ್ದೇಶಕ ರಮೇಶ್ ಸಿಪ್ಪಿಗೆ (Ramesh Sippy) ಇಷ್ಟು ದೊಡ್ಡ ಹಿಟ್ ಸಿನಿಮಾ ಕೊಟ್ಟ ಮೇಲೆ ನಂತರ ಸಣ್ಣ ಚಿತ್ರ ಕೊಡೋದಕ್ಕೆ ಸಾಧ್ಯವೇ? ಅದಕ್ಕಾಗಿಯೇ ಸಿಪ್ಪಿ ಎಂಟು ಸೂಪರ್ ಸ್ಟಾರ್ಸ್‌ಗಳನ್ನು ಜೊತೆಯಾಗಿ ಸೇರಿಸಿ, ಜೇಮ್ಸ್ ಬಾಂಡ್ ಶೈಲಿಯ ಆಕ್ಷನ್ ಥ್ರಿಲ್ಲರ್ ಚಿತ್ರ ಮಾಡಿದರು. ಇದು ಆ ಕಾಲದ ಬಾಲಿವುಡ್ ಇತಿಹಾಸದಲ್ಲಿಯೇ ಅತಿದೊಡ್ಡ ಬಜೆಟ್ ಚಿತ್ರ. ಎಂಟು ಸೂಪರ್ ಸ್ಟಾರ್‌ಗಳಿದ್ದರೂ, ಸಿನಿಮಾ ಮಾತ್ರ ಜನರ ಮನಸ್ಸು ಗೆಲ್ಲುವಲ್ಲಿ ವಿಫಲವಾಗಿ ಅತ್ಯಂತ ಫ್ಲಾಪ್ ಸಿನಿಮಾವಾಯಿತು.
ಅತಿ ದೊಡ್ಡ ಫ್ಲಾಪ್ ಆದ ಭಾರತದ ಅತ್ಯಂತ ದುಬಾರಿ ಚಿತ್ರ
1980 ರಲ್ಲಿ, ಸಿಪ್ಪಿ ಅಮಿತಾಬ್ ಬಚ್ಚನ್, ಸುನಿಲ್ ದತ್, ಶಶಿ ಕಪೂರ್, ಶತ್ರುಘ್ನ ಸಿನ್ಹಾ, ರಾಖಿ ಗುಲ್ಜಾರ್, ಪರ್ವೀನ್ ಬಾಬಿ, ಬಿಂದಿಯಾ ಗೋಸ್ವಾಮಿ, ಜಾನಿ ವಾಕರ್ ಮತ್ತು ಕುಲಭೂಷಣ್ ಖರ್ಬಂದಾ ಅವರಂತಹ ಘಟಾನುಘಟಿಗಳನ್ನು ಸೇರಿಸಿ ಶಾನ್ (Shaan) ಎಂಬ ಚಲನಚಿತ್ರದಲ್ಲಿ ನಿರ್ದೇಶಿಸಿದರು. ಈ ಚಿತ್ರ ಸೇಡಿನ ಚಿತ್ರವಾಗಿತ್ತು. ಜೇಮ್ಸ್ ಬಾಂಡ್ ಅವರ ಅರ್ನ್ಸ್ಟ್ ಸ್ಟಾವ್ರೊ ಬ್ಲೋಫೆಲ್ಡ್ ನಿಂದ ಸ್ಫೂರ್ತಿ ಪಡೆದ ಖಳನಾಯಕ ಶಕಾಲ್ ಪಾತ್ರದಲ್ಲಿ ಖರ್ಬಂದಾ ನಟಿಸಿದ್ದರು.
‘ಶಾನ್’ ಸಿನಿಮಾವನ್ನು ಸುಮಾರು 6 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಿಸಲಾಯಿತು, ಇದು ಶೋಲೆಗಿಂತ ಎರಡು ಪಟ್ಟು ಹೆಚ್ಚು ಬಜೆಟ್ ಸಿನಿಮಾ, ಅಷ್ಟೇ ಅಲ್ಲ, ಇದು ಆ ಸಮಯದಲ್ಲಿ ಅತ್ಯಂತ ದುಬಾರಿ ಭಾರತೀಯ ಚಿತ್ರವಾಯಿತು. ಇದಾದ ಮೂರು ವರ್ಷದ ನಂತರ ಕಮಲ್ ಅಮ್ರೋಹಿ ಬರೋಬ್ಬರಿ 7 ಕೋಟಿ ಬಜೆಟ್‌ನಲ್ಲಿ ರಜಿಯಾ ಸುಲ್ತಾನ್ ಸಿನಿಮಾ ಮಾಡುವ ಮೂಲಕ ಶಾನ್ ಸಿನಿಮಾವನ್ನು ದೊಡ್ಡ ಬಜೆಟ್ ಚಿತ್ರದ ಸ್ಥಾನದಿಂದ ಕೆಳಕ್ಕಿಳಿಸಿದರು.
ಇಷ್ತು ದೊಡ್ಡ ಬಜೆಟ್, ದೊಡ್ಡ ತಾರಾಗಣವಿದ್ದರೂ, ‘ಶಾನ್’ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಗಲಿಲ್ಲ. ಇದು ಆರಂಭದಲ್ಲಿ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು ನಿಜ. ಆದರೆ ನಕಾರಾತ್ಮಕ ವಿಮರ್ಶೆಗಳು (negative review) ಬಾಯಿಂದ ಬಾಯಿಗೆ ಹೋಗಿ ಕೊನೆಗೆ ಸಿನಿಮಾದ ಮೇಲೆ ಭಾರಿ ಪರಿಣಾಮ ಬೀರಿತು. ಕೊನೆಯಲ್ಲಿ, ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಗೆಲ್ಲೋದರಲ್ಲಿ ಸೋತಿತು, ಆದರೆ ವಿದೇಶದಲ್ಲಿ ಈ ಸಿನಿಮಾದಲ್ಲಿ ಕೊಂಚ ಯಶಸ್ಸು ಕಂಡಿತ್ತು.
ಶಾನ್ ಹೇಗೆ ಕಲ್ಟ್ ಕ್ಲಾಸಿಕ್ ಸಿನಿಮಾವಾಯಿತು
ಶಾನ್ ವಿಫಲವಾದರೂ, ಈ ಚಿತ್ರ ಬಾಲಿವುಡ್ ಮೇಲೆ ಶಾಶ್ವತ ಪರಿಣಾಮ ಬೀರಿತು. ಕುಲಭೂಷಣ್ ಖರ್ಬಂದಾ ಅವರ ಶಕಾಲ್ ಪಾತ್ರವು ಬಾಲಿವುಡ್ ಇತಿಹಾಸದಲ್ಲಿ ಅತ್ಯಂತ ಅಪ್ರತಿಮ ಖಳನಾಯಕರಲ್ಲಿ ಒಬ್ಬರು. ಮಿಸ್ಟರ್ ಇಂಡಿಯಾದ (Mister India) ಅಮರೀಶ್ ಪುರಿ ಮೊಗಂಬೊ ಅವರಂತಹ ಇತರ ಸ್ಮರಣೀಯ ಖಳನಾಯಕರ ಮೇಲೆ ಪ್ರಭಾವ ಬೀರಿದ ಸಿನಿಮಾವಿದು.
ಶಾನ್ ಮರು-ಬಿಡುಗಡೆಯಾದ ಬಳಿಕ ಹೆಚ್ಚು ಗಳಿಸಿದರು ಮತ್ತು ಅಂತಿಮವಾಗಿ ಅದರ ತಯಾರಕರಿಗೆ ಲಾಭವಾಗಿದ್ದು ವರ್ಷಗಳ ನಂತರ. ಈ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ 8 ಕೋಟಿ ರೂ. ಆಗಿತ್ತು. 80 ಮತ್ತು 90ರ ದಶಕದಲ್ಲಿ ಶಾನ್ ಸಿನಿಮಾ ಟಿವಿಯಲ್ಲಿ ಪ್ರಸಾರವಾಗಲು ಪ್ರಾರಂಭಿಸಿದ ನಂತರ, ಈ ಸಿನಿಮಾಗೆ ಹೆಚ್ಚು ಅಭಿಮಾನಿಗಳು ಹುಟ್ಟಿಕೊಂಡರು.