8 ವರ್ಷ, 15 ಸೂಪರ್ ಹಿಟ್ ಚಿತ್ರ, ಸೌತ್ ಇಂಡಿಯಾ ಆಳುತ್ತಿರುವ ರಶ್ಮಿಕಾ ಮಂದಣ್ಣ ಆದಾಯ ಕೇಳಿದ್ರೆ ಶಾಕ್!
ಕೇವಲ 8 ವರ್ಷಗಳ ಹಿಂದೆ ಚಿತ್ರರಂಗ ಪ್ರವೇಶಿಸಿದ ನಟಿ ರಶ್ಮಿಕಾ ಮಂದಣ್ಣ 15 ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ ಪುಷ್ಪಾ 2 ಸಿನಿಮಾ ಮೂಲಕ ಇದೀಗ ದೇಶಾದ್ಯಂತ ಸುದ್ದಿಯಲ್ಲಿರುವ ನಟಿಯಾಗಿದ್ದಾರೆ. ಈ ಸುಂದರಿಯ ಆದಾಯ ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ
ಸದ್ಯ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಬಾಲಿವುಡ್, ಟಾಲಿವುಡ್‌ನಲ್ಲಿ ಭಾರೀ ಸುದ್ದಿಯಲ್ಲಿರುವ ನಟಿಯೆನಿಸಿದ್ದಾರೆ. ಅದಕ್ಕೆ ಕಾರಣವೇನೆಂಬುದು ಗೊತ್ತೇ ಇದೆ. ಸೌತ್ ಸ್ಟಾರ್ ಅಲ್ಲು ಅರ್ಜುನ್ ಜೊತೆ ಅಭಿನಯಿಸಿರುವ ಪುಷ್ಪಾ 2 ದೇಶಾದ್ಯಂತ ಭಾರೀ ಸುದ್ದಿಯಲ್ಲಿದೆ. ಈ ಚಿತ್ರದ ಬಿಡುಗಡೆಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಕೆಲವೇ ವರ್ಷಗಳ ವೃತ್ತಿಜೀವನದಲ್ಲಿ ಚಿತ್ರರಂಗದ ಮೇಲೆ ತನ್ನ ಪ್ರಭಾವ ಬೀರಿದ ನಟಿಯಲ್ಲಿ ರಶ್ಮಿಕಾ ಮಂದಣ್ಣ ಒಬ್ಬರು. ಇವರು ಕನ್ನಡದ ನಟಿಯೆಂಬುದು ವಿಶೇಷ. ಇಂದು ಭಾರೀ ಬೇಡಿಕೆಯ ನಟಿಯಾಗಿರುವ ರಶ್ಮಿಕಾ ಮಂದಣ್ಣ ಅವರು ಎಲ್ಲ ವಿವಾದ, ಟೀಕೆಗಳ ನಡುವೆ ಹೇಗೆ ಬೆಳೆದರು ಗೊತ್ತೇ?
ರಶ್ಮಿಕಾ ಮಂದಣ್ಣ ಕೇವಲ 8 ವರ್ಷಗಳ ಹಿಂದೆಯೇ ನಟನಾ ಜಗತ್ತಿಗೆ ಕಾಲಿಟ್ಟಿದ್ದು, ಇಂದು ದಕ್ಷಿಣ ಭಾರತದ ಚಿತ್ರರಂಗವನ್ನು ಆಳುತ್ತಿದ್ದಾರೆ ಎಂದರೆ ಅಚ್ಚರಿಯಾಗುತ್ತದೆ ಅಲ್ಲವೇ?. ರಶ್ಮಿಕಾ ವೃತ್ತಿಜೀವನವು 2016 ರಲ್ಲಿ 'ಕಿರಿಕ್ ಪಾರ್ಟಿ' ಚಿತ್ರದ ಮೂಲಕ ಪ್ರಾರಂಭವಾಯಿತು. ಇದಾದ ನಂತರ 2017ರಲ್ಲಿ 'ಅಂಜನಿಪುತ್ರ' ಮತ್ತು 'ಚಮಕ್' ಚಿತ್ರಗಳಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದರು. ಈ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲೂ ಸಾಕಷ್ಟು ಗಳಿಸಿತು.
ನಂತರ 2018ರಲ್ಲಿ ನಟಿಯ 'ಚಲೋ', 'ಗೀತಾ ಗೋವಿಂದಂ' ಕೂಡ ಸೂಪರ್‌ಹಿಟ್ ಆಗಿದ್ದವು. ಆದರೆ 'ದೇವದಾಸ್' ಚಿತ್ರ ತೆರೆಮೇಲೆ ವಿಶೇಷ ಏನನ್ನೂ ತೋರಿಸಲು ಸಾಧ್ಯವಾಗದೆ ಫ್ಲಾಪ್ ಎಂದು ಸಾಬೀತಾಯಿತು. ಇದಲ್ಲದೆ, 2019 ರ ವರ್ಷವು ರಶ್ಮಿಕಾ ವೃತ್ತಿ ಜೀವನದಲ್ಲಿ ಟರ್ನಿಂಗ್ ಪಾಯಿಂಟ್ ಎನ್ನಬಹುದು ಕಾರಣ ಈ ವರ್ಷದಲ್ಲಿ, ಬ್ಲಾಕ್ ಬಸ್ಟರ್ ಸಿನಿಮಾಗಳು ಗೆದ್ದವು. ಆದರೂ 'ಡಿಯರ್ ಕಾಮ್ರೇಡ್' ಫ್ಲಾಪ್ ಆಯಿತು. ನಂತರ 2020 ರಲ್ಲಿ ನಟಿಯ 'ಸರಿಲೇರು ನೀಕೆವ್ವರು' ಮತ್ತು 'ಭೀಷ್ಮ' ಗಲ್ಲಾಪೆಟ್ಟಿಗೆಯಲ್ಲಿ ಸಂಚಲನ ಮೂಡಿಸಿತು.
ನಂತರ 2021 ರಲ್ಲಿ ರಶ್ಮಿಕಾ ಮಂದಣ್ಣ ಅಭಿನಯದ 'ಪೊಗರು', ತಮಿಳಿನ 'ಸುಲ್ತಾನ್' ಮತ್ತು ತೆಲುಗಿನ 'ಪುಷ್ಪ: ದಿ ರೈಸ್' ಸೂಪರ್ಹಿಟ್ ಆಗಿದ್ದವು. 2022 ರಲ್ಲಿ, 'ಸೀತಾ ರಾಮಂ' ಚಿತ್ರಗಳಲ್ಲಿ ಕಾಣಿಸಿಕೊಂಡರು.
ಇದಲ್ಲದೇ ರಶ್ಮಿಕಾ ಅಭಿನಯದ ಬಾಲಿವುಡ್ ಚಿತ್ರ 'ಅನಿಮಲ್' ಕೂಡ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಈಗ ಎಲ್ಲರ ಕಣ್ಣು ಈ ನಟಿಯ ಮುಂದಿನ ಚಿತ್ರ 'ಪುಷ್ಪಾ 2' ಮೇಲೆ ನೆಟ್ಟಿದೆ. ಇದು ಡಿಸೆಂಬರ್ 5 ರಂದು ಬಿಡುಗಡೆಯಾಗಲಿದೆ.