Hijab ಇಸ್ಲಾಂಗೆ ಮತಾಂತರಗೊಂಡ ಖ್ಯಾತ ನಟಿ ಮೆರೀನ್; ಹಜ್‌ನಲ್ಲಿರುವ ಫೋಟೋ ವೈರಲ್!
ಇಸ್ಲಾಂಗೆ ಮತಾಂತಗೊಂಡ ಫೋಟೋ ಮತ್ತು ಹಜ್‌ಗೆ ಭೆಟಿ ಕೊಟ್ಟ ಕ್ಷಣಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಮಾಡೆಲ್...

ಫ್ರೆಂಚ್ ಕಿರುತೆರೆ ಲೋಕದ ಜನಪ್ರಿಯ ನಟಿ ಕಮ್ ಮಾಡೆಲ್ ಮೆರಿನ್ ಅಲ್ ಹೈಮರ್ ಇಸ್ಲಾಂಗೆ ಮತಾಂತರಗೊಂಡಿರುವುದಾಗಿ ಇನ್‌ಸ್ಟಾಗ್ರಾಂ ಮೂಲಕ ತಿಳಿಸಿದ್ದಾರೆ.
ಕಾಬಾದಲ್ಲಿ ಸ್ನೇಹಿತೆ ಜೊತೆ ಕುಳಿತುಕೊಂಡು ಮೆರಿನ್ ಅಲ್ ಹೈಮರ್ ಶಹಾದತ್ ಉಚ್ಛಾರಣೆ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
'ಮತಾಂತರಗೊಳ್ಳುತ್ತಿರುವ ಕ್ಷಣಗಳು ನನ್ನ ಜೀವನದ ಬ್ಯೂಟಿಫುಲ್ ದಿನಗಳು' ಎಂದು ಮೆರಿನ್ ಅಲ್ ಹೈಮರ್ (Marine el Himer) ಬರೆದುಕೊಂಡಿದ್ದಾರೆ.
1.5 ಮಿಲಿಯನ್ ಫಾಲೋವರ್ಸ್ ಹೊಂದಿರುವ ಮೆರಿನ್ ಅಲ್ ಹೈಮರ್ ಮತಾಂತಗೊಂಡಿರುವುದಕ್ಕೆ ಕಾರಣ ತಿಳಿಸಿದ್ದಾರೆ. ನನ್ನ ಮನಸ್ಸು, ಹೃದಯ ಮತ್ತು ಆತ್ಮವನ್ನು ಸಮನ್ವಯಗೊಳಿಸಿದ ಪರಿಣಾಮವಾಗಿ ಇಸ್ಲಾಂ ಆಯ್ಕೆ ಮಾಡಿಕೊಂಡೆ.
ದಕ್ಷಿಣ ಫ್ರಾನ್ಸ್‌ನ ಬೋರ್ಡೆಕ್ಸ್‌ನಲ್ಲಿ ಜುಲೈ 1993ರಲ್ಲಿ ಜನಿಸಿದ ಮರೀನ್ ಎಲ್ ಹಿಮರ್ ಮೂಲತಃ ಮೊರೊಕನ್- ಈಜಿಪ್ಟ್‌ನವರು. ಮರೀನ್‌ಗೆ ಓಸಿಯಾನ್ ಎಲ್ ಹಿಮರ್ ಎಂಬ ಅವಳಿ ಸಹೋದರಿ ಇದ್ದಾರೆ.
ತಮ್ಮ ತಂದೆಯ ಜೊತೆ ಮಾತನಾಡುವಾಗ ಮರಿನ್ ಇಸ್ಲಾಂ ಧರ್ಮಕ್ಕೆ ಆಕರ್ಷಿತಳಾಗಿದ್ದಾರೆ. ಮತಾಂತರಗೊಂಡು ಒಂದು ತಿಂಗಳು ಕಳೆದಿದೆ ಈಗ ತಿಳಿಸುತ್ತಿದ್ದಾರೆ ಎಂದು ಫ್ರೆಂಚ್ ಮಾಧ್ಯಮವೊಂದರಲ್ಲಿ ವರದಿ ಮಾಡಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ಮೆರಿನ್ ಅಲ್ ಹೈಮರ್ ಸಖತ್ ಹಾಟ್ ಆಗಿರುವ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ. ಹೀಗಾಗಿ ಇನ್ನು ಮುಂದೆ ಮರೀನ್ ಪೋಸ್ಟ್ ಮಾಡುವುದರಿಂದ ನೆಗೆಟಿವ್ ಕಾಮೆಂಟ್ ಬರುವ ಸಾಧ್ಯತೆಗಳಿ ಎನ್ನುತ್ತಾರೆ ಅಭಿಮಾನಿಗಳು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.