- Home
- Entertainment
- Cine World
- ಎರಡು 'ಬ್ಲ್ಯಾಕ್ ಲೇಡಿ' ಜೊತೆ ಸಾಯಿ ಪಲ್ಲವಿ; ಇಂಥ ದಿನಗಳು ಮತ್ತೆ ಮತ್ತೆ ಬರಲ್ಲ ಎಂದ 'ಪ್ರೇಮಂ' ಬ್ಯೂಟಿ
ಎರಡು 'ಬ್ಲ್ಯಾಕ್ ಲೇಡಿ' ಜೊತೆ ಸಾಯಿ ಪಲ್ಲವಿ; ಇಂಥ ದಿನಗಳು ಮತ್ತೆ ಮತ್ತೆ ಬರಲ್ಲ ಎಂದ 'ಪ್ರೇಮಂ' ಬ್ಯೂಟಿ
ಸೌತ್ ಸುಂದರಿ ಸಾಯಿ ಪಲ್ಲವಿ ಎರಡು ಬ್ಲ್ಯಾಕ್ ಲೇಡಿ ಹಿಡಿದು ಸಂಭ್ರಮಿಸಿದ್ದಾರೆ. ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಇಂಥ ದಿನಗಳು ಮತ್ತೆ ಮತ್ತೆ ಬರಲ್ಲ ಎಂದು ಹೇಳಿದ್ದಾರೆ.

ಸೌತ್ ಸುಂದರಿ ಸಾಯಿ ಪಲ್ಲವಿ ಎರಡು ಬ್ಲ್ಯಾಕ್ ಲೇಡಿ ಹಿಡಿದು ಸಂಭ್ರಮಿಸಿದ್ದಾರೆ. ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಇಂಥ ದಿನಗಳು ಮತ್ತೆ ಮತ್ತೆ ಬರಲ್ಲ ಎಂದು ಹೇಳಿದ್ದಾರೆ. ಅಂದಹಾಗೆ ಸಾಯಿ ಪಲ್ಲವಿ ಹೇಳಿದ್ದು ಫಿಲ್ಮ್‌ಫೇರ್ ಪ್ರಶಸ್ತಿ ಬಗ್ಗೆ.
ಫಿಲ್ಮ್‌ಫೇರ್ ಅವಾರ್ಡ್ ಸೌತ್ ಸಮಾರಂಭ ಇತ್ತೀಚಿಗಷ್ಟೆ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನೆರವೇರಿತು. 67ನೇ ಸಾಲಿನ ಫಿಲ್ಮ್‌ಫೇರ್ ಸಮಾರಂಭ ಬೆಂಗಳೂರಿನ ಮಾದಾವರ ಬಳಿಯ ಬಿಐಇಸಿ ಮೈದಾನದಲ್ಲಿ ನಡೆಯಿತು. ಅಕ್ಟೋಬರ್ 9ರಂದು ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕನ್ನಡ, ತಮಿಳು, ತೆಲುಗು ಮತ್ತು ಮಲಾಯಳಂ ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಗಿದೆ.
ನಟಿ ಸಾಯಿ ಪಲ್ಲವಿ ಅವರಿಗೆ ಎರಡು ಪ್ರಶಸ್ತಿ ಬಂದಿರುವುದು ವಿಶೇಷ. ತೆಲುಗಿನ ಲವ್ ಸ್ಟೋರಿ ಸಿನಿಮಾದ ಅಭಿನಯಕ್ಕೆ ಅತ್ಯುತ್ತಮ ನಟಿ ಪ್ರಶಸ್ತಿ ಮುಡಿಗೇರಿಸಿಕೊಂಡರೆ ಶ್ಯಾಮ್ ಸಿಂಗ್ ರಾಯ್ ಸಿನಿಮಾದ ನಟನೆಗೆ ವಿಮರ್ಶಕರ ನೆಚ್ಚಿನ ನಟಿ ಪ್ರಶಸ್ತಿ ಗೆದ್ದು ಬೀಗಿದರು.
ಶ್ಯಾಮ್ ಸಿಂಗ ರಾಯ್ ಮತ್ತು ಲವ್ ಸ್ಟೋರಿ ಸಿನಿಮಾಗಳು ಒಂದೇ ವರ್ಷ ರಿಲೀಸ್ ಆಗಿದ್ದು ಎರಡೂ ಸಿನಿಮಾಗು ಪ್ರಶಸ್ತಿ ಬಂದಿರುವುದು ಸಾಯಿ ಪಲ್ಲವಿ ಸಂತಸಕ್ಕೆ ಪಾರವೇ ಇಲ್ಲ. ಎರಡು ಬ್ಲ್ಯಾಕ್ ಲೇಡಿ ಹಿಡಿದು ಪ್ರೇಮಂ ಸುಂದರಿ ಕ್ಯಾಮರಾಗೆ ಪೋಸ್ ನೀಡಿರುವ ಫೋಟೋವನ್ನು ಶೇರ್ ಮಾಡಿದ್ದಾರೆ.
ಫೋಟೋ ಶೇರ್ ಮಾಡಿ, 'ಇಂಥ ದಿನಗಳು ಮತ್ತೆ ಮತ್ತೆ ಸಂಭವಿಸಲ್ಲ. ಒಂದೇ ವರ್ಷ ಎರಡು ಸಿನಿಮಾಗಳನ್ನು ಗುರುತಿಸಿ ಮೆಚ್ಚುಗೆ ನೀಡಿದ್ದು ತುಂಬಾ ವಿಶೇಷ. ಈ ಪಾತ್ರಗಳಿಗೆ ನಾನು ಪಡೆದ ಅಪಾರ ಪ್ರೀತಿಗೆ ಆಭಾರಿಯಾಗಿದ್ದೇನೆ. ಅಂತಹ ಅದ್ಭುತ ಪಾತ್ರಗಳು ಮತ್ತಷ್ಟು ಸಿಗಲಿ ಎಂದು ಕೇಳಿಕೊಳ್ಳುತ್ತೇನೆ' ಎಂದು ಬರೆದುಕೊಂಡಿದ್ದಾರೆ.
ನಟಿ ಸಾಯಿ ಪಲ್ಲವಿ 2015ರಲ್ಲಿ ಪ್ರೇಮಂ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ನಿವಿನ್ ಪೌಲಿ ಜೊತೆ ನಟಿಸಿದ ಮೊದಲ ಸಿನಿಮಾನೇ ದೊಡ್ಡ ಮಟ್ಟದಲ್ಲಿ ಹಿಟ್ ಆಯಿತು. ಆ ನಂತರ ಬಂದ ಸಿನಿಮಾಗಳು ಸಹ ಬ್ಯಾಕ್ ಟು ಬ್ಯಾಕ್ ಹಿಟ್ ಆಯಿತು. ಸಾಯಿ ಪಲ್ಲವಿ ಕೊನೆಯದಾಗಿ ಗಾರ್ಗಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.
ಈ ಬಾರಿ ಫಿಲ್ಮ್ ಫೇರ್ ಮುಡಿಗೇರಿಸಿಕೊಂಡ ಸೌತ್ ನಟ-ನಟಿಯರೆಂದರೆ ಕನ್ನಡದಲ್ಲಿ ನಟ ಧನಂಜಯ್, ನಟಿ ಯಜ್ಞಾ ಶೆಟ್ಟಿ, ತಮಿಳಿನಲ್ಲಿ ನಟ ಸೂರ್ಯ, ನಟಿ ಲಿಜೋಮೋಲ್ ಜೋಸ್ ಮತ್ತು ತೆಲುಗಿನಲ್ಲಿ ನಟ ಅಲ್ಲುಅರ್ಜುನ್ ಮತ್ತು ಸಾಯಿ ಪಲ್ಲವಿ ಹಾಗೂ ಮಲಯಾಳಂನಲ್ಲಿ ಬಿಜು ಮೆನನ್ ಮತ್ತು ನಟಿ ನಿಮಿಶಾ ಅವರಿಗೆ ಅತ್ಯುತ್ತಮ ನಟ ಮತ್ತು ನಟಿ ಪ್ರಶಸ್ತಿ ಗರಿ ಸಿಕ್ಕಿದೆ. ಇನ್ನು ಜೀವಮಾನ ಸಾಧನ ಪ್ರಶಸ್ತಿಯನ್ನು ಪವರ್ ಸ್ಟಾರ್ ಪುನೀತ್ ರಾಜ್ ಅವರಿಗೆ ನೀಡಲಾಗಿದೆ.