ಅಕ್ಷಯ್ ಖನ್ನಾ ಜೊತೆ ಮಗಳು ಕರಿಷ್ಮಾ ಮದುವೆ ತಪ್ಪಿಸಿದ ತಾಯಿ ಬಬಿತಾ!
ಅಕ್ಷಯ್ ಖನ್ನಾ ಬಾಲಿವುಡ್‌ನ ಟ್ಯಾಲೆಂಟೆಡ್ ನಟರಲ್ಲಿ ಒಬ್ಬರು. ಆದರೆ ಸಿನಿಮಾಗಳಲ್ಲಿ ಇನ್ನೂ ಆ್ಯಕ್ಟಿವ್ ಆಗಿರುವ ಅವರ ಕೆರಿಯರ್ ಗ್ರಾಫ್ ಹೆಚ್ಚು ಮೇಲೆರಲಿಲ್ಲ. ಇವರಿಗೆ ಸಂಬಂಧಪಟ್ಟ ವಿಷಯವೊಂದು ವೈರಲ್ ಆಗಿದೆ. ಅದರ ಪ್ರಕಾರ ಅಕ್ಷಯ್ ಖನ್ನಾರ ಜೊತೆ ಕರಿಷ್ಮಾ ಕಪೂರ್ ಮದುವೆ ನಟಿಯ ತಾಯಿ ಬಬಿತಾ ಕಾರಣದಿಂದ ತಪ್ಪಿ ಹೋಯಿತಂತೆ. ವಿವರ ಇಲ್ಲಿದೆ.
ಬಾಲಿವುಡ್ ನಟ ಅಕ್ಷಯ್ ಖನ್ನಾ ಅವರ ವೃತ್ತಿಜೀವನವೂ ಹೆಚ್ಚು ವಿಶೇಷವಾಗಿಲ್ಲ.ತಂದೆ ವಿನೋದ್ ಖನ್ನಾ ಅವರಂತೆ ಯಶಸ್ಸನ್ನು ಸಾಧಿಸಲು ಸಾಧ್ಯವಾಗಿಲ್ಲ ಅಕ್ಷಯ್‌ಗೆ.
ಈ ನಡುವೆ ಅಕ್ಷಯ್ ಮದುವೆಗೆ ಸಂಬಂಧ ಪಟ್ಟ ವಿಷಯವೊಂದು ಬೆಳಕಿಗೆ ಬಂದಿದೆ.
ಕರಿಷ್ಮಾ ಕಪೂರ್ ಹಾಗೂ ಅಕ್ಷಯ್ ಖನ್ನಾ ಮದುವೆ ಮಾತುಕತೆ ನೆಡೆದಿತ್ತು . ಈ ಸಂಬಂಧವನ್ನು ಕರಿಷ್ಮಾ ಅವರ ತಂದೆ ರಣಧೀರ್ ಕಪೂರ್ ಪ್ರಸ್ತಾಪಿಸಿದ್ದರು.ಆದರೆ ಅವರ ತಾಯಿ ಬಬಿತಾ ಈ ಸಂಬಂಧಕ್ಕೆ ಅಡ್ಡಿಪಡಿಸಿದರು ಎನ್ನಲಾಗಿದೆ.
45 ವರ್ಷದ ಅಕ್ಷಯ್ ಇನ್ನೂ ಬ್ಯಾಚುಲರ್. ಪತಿ ಸಂಜಯ್ ಕಪೂರ್ ವಿಚ್ಛೇದನ ಪಡೆದ ನಂತರ ಕರಿಷ್ಮಾ ಕಪೂರ್ ತನ್ನ ಇಬ್ಬರು ಮಕ್ಕಳೊಂದಿಗೆ ಏಕಾಂಗಿಯಾಗಿ ವಾಸಿಸುತ್ತಿದ್ದಾರೆ.
ರಣಧೀರ್ ಕಪೂರ್ ತಮ್ಮ ಮಗಳು ಕರಿಷ್ಮಾ ಕಪೂರ್ ಅವರ ಸಂಬಂಧವನ್ನು ಅಕ್ಷಯ್ ಖನ್ನಾಗಾಗಿ ತಂದೆ ವಿನೋದ್ ಖನ್ನಾ ಅವರಿಗೆ ಕಳುಹಿಸಿದ್ದರು. ಆದರೆ ಕರಿಷ್ಮಾ ತಾಯಿ ಬಬಿತಾಗೆ ಈ ಸಂಬಂಧ ಇಷ್ಟವಾಗಲಿಲ್ಲ. ಕರಿಷ್ಮಾ ಅವರ ವೃತ್ತಿಜೀವನಕ್ಕೆ ಯಾವುದೇ ರೀತಿಯ ಬ್ರೇಕ್ ಹಾಕಲು ತಾಯಿ ಬಯಸಲಿಲ್ಲ.
ಮಕ್ಕಳನ್ನು ಇಷ್ಟಪಡುವುದಿಲ್ಲ, ಆದ್ದರಿಂದ ಇನ್ನೂ ಮದುವೆಯಾಗಿಲ್ಲ ಎಂದು ಸಂದರ್ಶನವೊಂದರಲ್ಲಿ ಅಕ್ಷಯ್ ಖನ್ನಾ ಮದುವೆಯ ಬಗ್ಗೆ ಪ್ರಶ್ನಿಸಿದಾಗ ಹೇಳಿದರು.
'ನಾನು ಎಂದಿಗೂ ಮದುವೆಯಾಗಲು ಬಯಸುವುದಿಲ್ಲ. ಒಂಟಿಯಾಗಿರುವುದು ನನಗೆ ಇಷ್ಟ. ನಾನು ಸ್ವಲ್ಪ ಸಮಯದವರೆಗೆ ಸಂಬಂಧದಲ್ಲಿ ಉಳಿಯಬಹುದು. ಆದರೆ ಆ ಸಂಬಂಧವನ್ನು ಹೆಚ್ಚು ಕಾಲ ನಡೆಸಲಾಗುವುದಿಲ್ಲ. ಅಷ್ಟೇ ಅಲ್ಲ, ಮದುವೆಯಾಗುವ ಬದಲು ಸಂಬಂಧದಲ್ಲಿ ಬದುಕುವುದರಲ್ಲಿ ಹೆಚ್ಚು ನಂಬಿಕೆ ಇಟ್ಟಿದ್ದೇನೆ,' ಎಂದೂ ಅಕ್ಷಯ್ ಖನ್ನಾ ಹೇಳಿದರು.
1999 ರ ಸೂಪರ್ ಹಿಟ್ 'ತಾಲ್' ಚಿತ್ರದ ಮೂಲಕ ಅಕ್ಷಯ್ ಗಮನ ಸೆಳೆದರು. ಈ ಚಿತ್ರದಲ್ಲಿ ಅಕ್ಷಯ್ ಐಶ್ವರ್ಯಾ ರೈಗೆ ಹೀರೋ ಆಗಿ ನಟಿಸಿದ್ದಾರೆ.
'ದಿಲ್ ಚಾಹ್ತಾ ಹೈ' ಚಿತ್ರಕ್ಕಾಗಿ ಅಕ್ಷಯ್ ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದರು. ಇದರ ನಂತರ ಅಕ್ಷಯ್ ಅವರು 'ಹಮರಾಜ್', 'ಹಂಗಮಾ', 'ಹಸ್ಲ್', 'ರೇಸ್' ಮತ್ತು 'ದಹಕ್' ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಇನ್ನೂ ಸಿನಿಮಾದಲ್ಲಿ ಸಕ್ರಿಯರಾಗಿದ್ದಾರೆ.
ಪೂಜಾ ಬಾತ್ರಾ, ಟ್ವಿಂಕಲ್ ಖನ್ನಾ, ರವೀನಾ ಟಂಡನ್, ಶಿಲ್ಪಾಶೆಟ್ಟಿ ಮುಂತಾದ ಟಾಪ್ ನಟಿಯರ ಜೊತೆ ಅಕ್ಷಯ್ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ.
1982ರಲ್ಲಿ ಅಕ್ಷಯ್ ಅವರ ತಂದೆ ವಿನೋದ್ ಖನ್ನಾ ಎಲ್ಲವನ್ನೂ ತ್ಯಜಿಸಿ ಓಶೋ ಆಶ್ರಯಕ್ಕೆ ಹೋದರು. ಅವರು ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿ ನಿವೃತ್ತರಾದರು. ಸುಮಾರು ಹತ್ತು ವರ್ಷಗಳ ಕಾಲ ಉದ್ಯಮದಿಂದ ದೂರ ಉಳಿದಿದ್ದರು.
1997ರಲ್ಲಿ ಹಿಮಾಲಯ ಪುತ್ರ ಮೂಲಕ ಬಾಲಿವುಡ್‌ಗೆ ಎಂಟ್ರಿ ನೀಡಿದ ಅಕ್ಷಯ್ ಕೊನೆಯ ಬಾರಿಗೆ 2020ರಲ್ಲಿ ಸಬ್ ಖುಷಲ್ ಮಂಗಲ್ ಚಿತ್ರದಲ್ಲಿ ಕಾಣಿಸಿಕೊಂಡರು. ಪ್ರಸ್ತುತ, ಅವರ ಬಳಿ ಯಾವುದೇ ಸಿನಿಮಾಗಳಿಲ್ಲ.
ಸಂಜಯ್ ಕಪೂರ್ ಅವರನ್ನು ಮದುವೆಯಾದ ನಂತರ ಕರಿಷ್ಮಾ ಕಪೂರ್ ಸಿನಿಮಾಗಳಿಂದ ದೂರವಾಗಿದ್ದರು. ಕರಿಷ್ಮಾ ಪತಿಗೆ ವಿಚ್ಛೇದನ ನೀಡಿದ ನಂತರ ಸಿನಿಮಾಕ್ಕೆ ಮರಳಿ ಬಂದರೂ, ಯಶಸ್ವಿಯಾಗಲಿಲ್ಲ. ಈಗ ಅವರು ವೆಬ್ ವೆಬ್ ಸರಣಿಯಲ್ಲಿ ಕೆಲಸ ಮಾಡುತ್ತಿದ್ದಾರೆ.