ಬಿಕಿನಿ ಫೋಟೋ ಶೇರ್ ಮಾಡಿದ ದಿಶಾ; ಪಾರ್ನ್ ಸ್ಟಾರ್ ಆಗಿದ್ದೀರಾ ಎಂದ ನೆಟ್ಟಿಗರು
ನಟಿ ದಿಶಾ ಪಟಾನಿ ಇದೀಗ ಮತ್ತೊಂದು ಹಾಟ್ ಫೋಟೋ ಶೇರ್ ಮಾಡಿದ್ದಾರೆ. ಬಿಕಿನಿಯಲ್ಲಿ ಪೋಸ್ ನೀಡಿದ ದಿಶಾ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಎಬ್ಬಿಸಿದೆ.

ಬಾಲಿವುಡ್ ಹಾಟ್ ನಟಿ ಎಂದೇ ಖ್ಯಾತಿಗಳಿಸಿರುವ ದಿಶಾ ಪಟಾನಿ ಆಗಾಗ ಸುದ್ದಿಯಲ್ಲಿರುತ್ತಾರೆ. ಅದೂ ಕೂಡ ಹಾಟ್ ಫೋಟೋಶೂಟ್ ಮೂಲಕ. ಆಗಾಗ ಹಾಟ್ ಫೋಟೋಗಳನ್ನು ಶೇರ್ ಮಾಡುವ ಮೂಲಕ ದಿಶಾ ಅಭಿಮಾನಿಗಳ ನಿದ್ದೆಗೆಡಿಸುತ್ತಿರುತ್ತಾರೆ.
ನಟಿ ದಿಶಾ ಪಟಾನಿ ಇದೀಗ ಮತ್ತೊಂದು ಹಾಟ್ ಫೋಟೋ ಶೇರ್ ಮಾಡಿದ್ದಾರೆ. ಬಿಕಿನಿಯಲ್ಲಿ ಪೋಸ್ ನೀಡಿದ ದಿಶಾ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಎಬ್ಬಿಸಿದೆ. ಇನ್ಸ್ಟಾಗ್ರಾಮ್ ನಲ್ಲಿ 54 ಮಿಲಿಯನ್ ಪಾಲೋವರ್ಸ್ ಹೊಂದಿರುವ ನಟಿಯ ಫೋಟೋಗೆ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದುಬರುತ್ತಿದೆ.
ಸಿಂಗಲ್ ಶೋಲ್ಡರ್ ನ ಬ್ಲ್ಯಾಕ್ ಬಿಕಿನಿ ಟಾಪ್ ಮತ್ತು ಬಾಟಮ್ ಧರಿಸಿರುವ ದಿಶಾ ಫೋಟೋಗೆ ನೆಟ್ಟಿಗರಿಂದ ತಹೇವಾರಿ ಕಾಮೆಂಟ್ ಹರಿದುಬರುತ್ತಿದೆ. ಸಖತ್ ಹಾಟ್ ಎಂದು ಅನೇಕರು ಹೇಳಿದ್ರೆ, ಇನ್ನು ಕೆಲವರು ಬೆಂಕಿ ಇಮೋಜಿ ಹಾಕುತ್ತಿದ್ದಾರೆ. ಇನ್ನು ಕೆಲವರು ಟ್ರೋಲ್ ಮಾಡುತ್ತಿದ್ದಾರೆ.
ದಿಶಾ ಪಟಾನಿಯನ್ನು ಉರ್ಫಿ ಜಾವೆದ್‌ಗೆ ಹೋಲಿಸುತ್ತಿದ್ದಾರೆ. ಇನ್ನು ಕೆಲವರು ಬರ್ತಾ ಬರ್ತಾ ಪಾರ್ನ್ ಸ್ಟಾರ್ ಆಗುತ್ತಿದ್ದೀರಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಸಿನಿಮಾದದಲ್ಲಿ ನಟಿಸುವ ಮೊದಲು ಹೆಚ್ಚಾಗಿ ಯಾಕೆ ತನ್ನ ಗ್ಲಾಮರ್ ಕಡೆ ಗಮನ ಹರಿಸುುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೂ ತರಹೇವಾರಿ ಕಾಮೆಂಟ್ ಗಳು ಹರಿದುಬಂದಿವೆ.
ಅಂದಹಾಗೆ ದಿಶಾ ಒಂದು ಇನ್ಸ್ಟಾಗ್ರಾಮ್ ಪೋಸ್ಟ್‌ಗೆ 10 ಲಕ್ಷ ರೂ. ಪಡೆಯುತ್ತಿದ್ದಾರೆ ಎನ್ನಲಾಗಿದೆ. ನಟಿಯರಿಗೆ ಸಾಮಾಜಿಕ ಜಾಲತಾಣದ ಮೂಲಕವೂ ಹಣ ಹರಿದುಬರುತ್ತದೆ. ದಿಸಾ ಕೂಡ ಒಂದು ಪೋಸ್ಟ್‌ಗೆ ಸಿಕ್ಕಾಪಟ್ಟೆ ಚಾರ್ಜ್ ಮಾಡುತ್ತಾರೆ.
ದಿಶಾ ಅನೇಕ ವಿಚಾರಗಳಿಗೆ ಟ್ರೋಲ್ ಆಗುತ್ತಿರುತ್ತಾರೆ. ಡ್ರೆಸ್ ಬಗ್ಗೆ ಮಾತ್ರವಲ್ಲದೇ ಬಾಡಿ ಶೇಮಿಂಗ್‌ಗೂ ಒಳಗಾಗುತ್ತಾರೆ. ಫಿಟ್ನೆಸ್ ಫ್ರೀಕ್ ದಿಶಾ ಅವರನ್ನು ನೆಟ್ಟಿಗರು ಅಪೌಷ್ಠಿಕತೆಯ ಕೊರತೆ ಇದೆ, ದಿಶಾ ಪಟಾನಿ ಗುರುತು ಅಂದರೆ ಟೈಗರ್ ಶ್ರಾಫ್ ಗರ್ಲ್ ಫ್ರೆಂಡ್ ಅಂತ ಮಾತ್ರ ಮತ್ತು ಮೈಕಾಣುವ ಬಟ್ಟೆ ಧರಿಸುವುದು ಅಷ್ಟೆ ಎಂದು ಕಾಲೆಳೆಯುತ್ತಿದ್ದಾರೆ. ಆದರೆ ಯಾವುದಕ್ಕೂ ತಲೆಕೊಡಿಸಿಕೊಳ್ಳದ ದಿಶಾ ಫೋಟೋಶೂಟ್ ಮೂಲಕ ಮಿಂಚುತ್ತಿದ್ದಾರೆ.
ದಿಶಾ ಕೊನೆಯದಾಗಿ ಏಕ್ ವಿಲನ್ ರಿಟರ್ನ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ಹೇಳಿಕೊಳ್ಳುವಷ್ಟು ಸಕ್ಸಸ್ ಕಂಡಿಲ್ಲ. ಹಿಂದಿ ಸಿನಿಮಾಗಳ ಬಳಿಕ ದಿಶಾ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಭಾಸ್ ಸಿನಿಮಾದಲ್ಲಿ ದಿಶಾ ನಟಿಸುತ್ತಿದ್ದಾರೆ. ಹಿಂದಿಯಲ್ಲಿ ಯೋಧ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.