Ex ರಣಬೀರ್‌ ಹಾಗೂ ಪತಿ ರಣವೀರ್‌ಗಿರುವ ವ್ಯತ್ಯಾಸ ಬಾಯಿಬಿಟ್ಟ ದೀಪಿಕಾ

First Published 25, Jun 2020, 6:54 PM

ಬಾಲಿವುಡ್‌ ಸೂಪರ್‌ಸ್ಟಾರ್ಸ್ ರಣವೀರ್‌ ಸಿಂಗ್‌ ಮತ್ತು ರಣಬೀರ್‌ ಕಪೂರ್‌ ಇಬ್ಬರೂ ದಿವಾ ದೀಪಿಕಾ ಪಡುಕೋಣೆ ಲೈಫ್‌ನ ಪ್ರಮುಖ ವ್ಯಕ್ತಿಗಳು. ಒಬ್ಬ ನಟಿಯ ಪಾಸ್ಟ್‌ ಆದರೆ, ಇನ್ನೊಬ್ಬ ಪ್ರೆಸೆಂಟ್‌. ದೀಪಿಕಾ ಕೋ ಸ್ಟಾರ್‌ ರಣವೀರ್‌ ಸಿಂಗ್‌ ಜೊತೆ ದಾಂಪತ್ಯ ಜೀವನ ನೆಡೆಸುತ್ತಿದ್ದಾರೆ. ಆದರೂ ರಣಬೀರ್‌ ಕಪೂರ್‌ ಜೊತೆ ಅವರ ಹಳೆ ಸಂಬಂಧ ಚರ್ಚೆಯಾಗುತ್ತಲೇ ಇರುತ್ತದೆ. ಒಮ್ಮೆ ರಣಬೀರ್ ಕಪೂರ್ ಮತ್ತು ರಣವೀರ್ ಸಿಂಗ್ ನಡುವಿನ ವ್ಯತ್ಯಾಸ ಏನೆಂದು ದೀಪಿಕಾ ಪಡುಕೋಣೆಯನ್ನು ಕೇಳಲಾಗಿತ್ತು. ಈ ನಟಿ ಅವರಿಬ್ಬರ ಬಗ್ಗೆ ಕೆಲವು ಆಸಕ್ತಿದಾಯಕ ವಿವರಗಳನ್ನು ಬಹಿರಂಗಪಡಿಸಿದ್ದು ಹೀಗೆ...

ದೀಪಿಕಾ ಪಡುಕೋಣೆ ಮತ್ತು ರಣಬೀರ್ ಕಪೂರ್ ಹಿಂದೆ ರಿಲೇಷನ್‌ಶಿಪ್‌ನಲ್ಲಿದ್ದರು. ಸಂಬಂಧ ಅಲ್ಪಾವಧಿಯದ್ದಾಗಿದ್ದರೂ, ರಣಬೀರ್ ಮತ್ತು ದೀಪಿಕಾರ ಕೆಮಿಸ್ಟ್ರಿ ತೆರೆ ಮೇಲೆ ಮತ್ತು ಆಫ್‌ಸ್ಕ್ರೀನ್  ಬಹಳ ಆಕರ್ಷಕ ಹಾಗೂ  ರೋಮ್ಯಾಂಟಿಕ್ ಆಗಿತ್ತು.

ಕೆಲವು ವರ್ಷಗಳ ನಂತರ, ದೀಪಿಕಾ ತನ್ನ ಇನ್ನೊಬ್ಬ ಸಹನಟ ರಣವೀರ್ ಸಿಂಗ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಮೀಡಿಯಾ ಹಾಗೂ ಫ್ಯಾನ್ಸ್‌ ದೀಪಿಕಾಳ ಎಕ್ಸ್‌ ಬಾಯ್‌ಫ್ರೆಂಡ್‌ ವಿಷಯ ಆಗಾಗ ಕೆದಕುತ್ತಿರುತ್ತಾರೆ.

ಒಮ್ಮೆ ರಣಬೀರ್ ಕಪೂರ್ ಮತ್ತು ರಣವೀರ್ ಸಿಂಗ್ ನಡುವಿನ ವ್ಯತ್ಯಾಸ ಏನೆಂದು ದೀಪಿಕಾ ಪಡುಕೋಣೆಯನ್ನು ಕೇಳಲಾಯಿತು, ಕೆಲವು ಇಂಟರೆಸ್ಟಿಂಗ್‌ ವಿಷಯಗಳನ್ನು ಹಂಚಿಕೊಂಡಿದ್ದಾರೆ ರಾಣಿ ಪದ್ಮಾವತ್‌.

ಜಿಯೋ ಮಾಮಿ ಮೂವಿ ಮೇಳ ವಿತ್ ಸ್ಟಾರ್, 2019 ರ ಆರಂಭಿಕ ಅಧಿವೇಶನದ ವೇಳೆಯಲ್ಲಿ, ಚಲನಚಿತ್ರ ವಿಮರ್ಶಕರಾದ ರಾಜೀವ್ ಮಸಂದ್ ಮತ್ತು ಅನುಪಮಾ ಚೋಪ್ರಾ ಜೊತೆ ಮಾತನಾಡುವಾಗ ಮಾಜಿ ಗೆಳೆಯ ರಣಬೀರ್ ಕಪೂರ್ ಮತ್ತು ಹಬ್ಬಿ ರಣವೀರ್ ಅವರ ನಟನಾ ಕೌಶಲ್ಯಗಳ ನಡುವಿನ ವ್ಯತ್ಯಾಸವನ್ನು ದೀಪಿಕಾ ಬಹಿರಂಗಪಡಿಸಿದರು.

ರಣಬೀರ್ ಮತ್ತು ರಣವೀರ್ ಇಬ್ಬರೊಂದಿಗಿನ ದೀಪಿಕಾರ ಕೆಮಿಸ್ಟ್ರಿ ಅದ್ಭುತ ಮತ್ತು ಭವ್ಯವಾದದ್ದಾಗಿರುವುದರಿಂದ, ಅವರ ಕಾರ್ಯಶೈಲಿಯ ಬಗ್ಗೆ ಸ್ವಲ್ಪ ಬೆಳಕು ಚೆಲ್ಲುವಂತೆ ಕೇಳಲಾಯಿತು.

ಇದಕ್ಕೆ ಪಿಕು ನಟಿ, 'ರಣಬೀರ್‌ಗೆ ನಿಜವಾಗಿಯೂ ಪ್ರಕ್ರಿಯೆ ಇಲ್ಲ; ಅವನು ತುಂಬಾ ಸ್ವಾಭಾವಿಕ. ಅವನು  ಪಾತ್ರಕ್ಕಾಗಿ ‘ತಯಾರಿ’ಮಾಡುವುದನ್ನು ನಾನು ಎಂದಿಗೂ ನೋಡಿಲ್ಲ. ಆ ವಿಷಯದಲ್ಲಿ ಅವನು ನನ್ನ  ಹಾಗೆ. ನಮ್ಮ ವಿಧಾನವು 50% ಪೂರ್ವಾಭ್ಯಾಸ ಮತ್ತು 50% ಸ್ವಯಂಪ್ರೇರಿತವಾಗಿದೆ.' ಎಂದು ಹೇಳಿದ್ದರು.

'ಮತ್ತೊಂದೆಡೆ, ರಣವೀರ್ ನಿಜವಾಗಿಯೂ ಪ್ರಕ್ರಿಯೆಗೆ ಸಿಲುಕುತ್ತಾನೆ. ಅವನು ಪಾತ್ರಕ್ಕಾಗಿ ಎಲ್ಲವನ್ನೂ ಬದಲಾಯಿಸುತ್ತಾನೆ - ಅವನು ಓಡಿಸುವ ಕಾರಿನಿಂದ, ಬಟ್ಟೆ ಮತ್ತು ಅವನು ಧರಿಸಿರುವ ಸುಗಂಧ ದ್ರವ್ಯದವರೆಗೆ'.

ರಣವೀರ್ ಬಗ್ಗೆ ಮಾತನಾಡುತ್ತಾ, 'ಅವರು ಪ್ರತಿ ಆರು ತಿಂಗಳಿಗೊಮ್ಮೆ ವಿಭಿನ್ನ ವ್ಯಕ್ತಿಯಾಗುತ್ತಾನೆ, ಇದು ನಮ್ಮ ಸಂಬಂಧವು ಇಷ್ಟು ದಿನ ಉಳಿಯಲು ಒಂದು ಕಾರಣ; ನನಗೆ ಎಂದಿಗೂ ಬೋರ್‌ ಆಗುವುದಿಲ್ಲ,' ಎಂದು  ಪ್ರೇಕ್ಷಕರೆಡೆಗೆ ನೋಡಿ ನಕ್ಕಿದ್ದರು  ದೀಪಿಕಾ.

ದೀಪಿಕಾ ರಣಬೀರ್‌ 2015ರಲ್ಲಿ ಕೊನೆಯದಾಗಿ ತಮಶಾ ಸಿನಿಮಾದಲ್ಲಿ ಸ್ಕ್ರೀನ್‌ ಶೇರ್‌ ಮಾಡಿಕೊಂಡಿದ್ದರು.

ಪತಿ ರಣವೀರ್‌ ಜೊತೆ ದೀಪಿಕಾ ನಟಿಸಿರುವ ಕ್ರಿಕೆಟರ್‌ ಕಪಿಲ್‌ ದೇವ್‌ ಜೀವನಾಧರಿತ ಸಿನಿಮಾ  83  ಬಿಡುಗಡೆಗೆ ರೆಡಿಯಾಗಿದೆ.

loader