ಕರೀನಾಳ ದೊಡ್ಡ ಫ್ಯಾನ್ ಸಾರಾ ಖಾನ್. ಲೈಫಲ್ಲಿ ಬಂದಳು ಮಲತಾಯಿಯಾಗಿ...
ಸೈಫ್ ಅಲಿ ಖಾನ್‌ರ ಪುತ್ರಿ ಸಾರಾ ಅಲಿ ಖಾನ್ ಯುವಕರ ನಿದ್ರೆಗೆಡೆಸುತ್ತಿರುವ ಬಾಲಿವುಡ್ ನಟಿ. ಇವರ ಚೈಲ್ದ್‌ಹುಡ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಬ್ಲಾಕ್ ಕಲರ್ ಸಲ್ವಾರ್, ದೊಡ್ಡ ಜುಮುಕಿ ಹಾಗೂ ಕೂದಲು ರಿಲಾಸ್ ಮಾಡಿರುವ ಪುಟ್ಟ ಕ್ಯೂಟ್ ಸಾರಾಗೆ ನೆಟ್ಟಿಗರು ಮನಸೋತಿದ್ದಾರೆ. ಬಾಲ್ಯದಲ್ಲೂ ಸಾರಾ ಚೆಂದದ ಡ್ರೆಸ್‌ಗಳನ್ನು ಧರಿಸುತ್ತಿದ್ದಳು ಎಂದು ಅಭಿಪ್ರಾಯಪಟ್ಟಿದ್ದಾರೆ ಫ್ಯಾನ್ಸ್.
ಸೈಫ್ ಆಲಿ ಖಾನ್ ಮೊದಲ ಪತ್ನಿ ಅಮೃತಾ ಸಿಂಗ್ ಪುತ್ರಿ ಈ ಬಾಲಿವುಡ್ ತಾರೆ.
ಕ್ಯೂಟ್ ಚಬ್ಬಿ ಸ್ಟಾರ್ ಕಿಡ್ ಈಗ ಬಾಲಿವುಡ್‌ನ ಹಾಟ್ ಫಿಟ್ ಸ್ಟಾರ್.
ಕೇದರ್‌ನಾಥ್ ಸಿನಿಮಾದಿಂದ ಬಾಲಿವುಡ್‌ಗೆ ಎಂಟ್ರಿ.
ಕೂಲಿ ನಂ ಒನ್ ಮತ್ತು ಅತರಂಗಿ ಈ ಚೆಲುವೆಯ ಮುಂದಿನ ಸಿನಿಮಾಗಳು.
ಸೈಫ್ ಮತ್ತು ಅಮೃತರ ಡೈವರ್ಸ್ ನಂತರ ಅಮ್ಮ ಹಾಗೂ ತಮ್ಮನ ಜೊತೆ ಇರುವ ನಟಿ.
ತಮ್ಮ ಇಬ್ರಾಹಿಂ ಜೊತೆ ತೆಗೆಸಿಕೊಂಡ ಬಿಕನಿ ಪೋಟೋಗೆ ಸಖತ್ ಟ್ರೋಲ್ ಆಗಿದ್ದ ಸಿಂಬಾ ಚೆಲುವೆ.
ರಣವೀರ್ ಸಿಂಗ್ ಜೊತೆ ನಟಿಸಿದ ಸಿಂಬಾ ಈಕೆಯ ಬ್ಲಾಕ್‌ಬಸ್ಟರ್ ಮೂವಿ.
ಕೊರೋನಾ ಸಂದರ್ಭದಲ್ಲಿ ವಾರಣಾಸಿಗೆ ಭೇಟಿ ನೀಡಿ, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದರು.
ಮಲತಾಯಿ ಕರೀನಾ ಕಪೂರ್‌ಳ ದೊಡ್ಡ ಫ್ಯಾನ್ ಅಂತೆ ಸಾರಾ.
ಕರೀನಾ ಹೇಗಾದರೂ ತನ್ನ ಜೀವನದಲ್ಲಿ ಬರಬೇಕೆಂದು ಸಾರಾ ಬಯಸಿದ್ದಳು ಮತ್ತು ಅಂತಿಮವಾಗಿ ಅದು ಸಂಭವಿಸಿತು.ಮಲತಾಯಿಯಾಗಿ. ಸಾರಾ ಸ್ವತಃ ಸಂದರ್ಶನವೊಂದರಲ್ಲಿ ಇದನ್ನು ಹೇಳಿದರು.