- Home
- Entertainment
- Cine World
- ವಿಜಯ್ ದೇವರಕೊಂಡಗಾಗಿ ಮಗಳ ಜೀವನ ಹಾಳು ಮಾಡಿದ ತಂದೆ! ಲೈಗರ್ ಬಿಗ್ ಫ್ಲಾಪ್ ಹಿಂದಿನ ಅಸಲಿ ಕತೆ ಬಯಲು!
ವಿಜಯ್ ದೇವರಕೊಂಡಗಾಗಿ ಮಗಳ ಜೀವನ ಹಾಳು ಮಾಡಿದ ತಂದೆ! ಲೈಗರ್ ಬಿಗ್ ಫ್ಲಾಪ್ ಹಿಂದಿನ ಅಸಲಿ ಕತೆ ಬಯಲು!
ವಿಜಯ್ ದೇವರಕೊಂಡ ಸ್ವಲ್ಪ ಸಮಯದಲ್ಲೇ ಟಾಲಿವುಡ್‌ನಲ್ಲಿ ಸ್ಟಾರ್ ಆದ್ರು. ವಿವಾದಗಳಿದ್ರೂ ತನ್ನದೇ ಆದ ಛಾಪು ಮೂಡಿಸಿದ್ರು. ಆದ್ರೆ ಲೈಗರ್ ಸಿನಿಮಾ ಫ್ಲಾಪ್ ಆಗಿ, ಅವರ ಕೆರಿಯರ್‌ಗೆ ಹಿನ್ನಡೆ ಆಗಿದ್ದು ಗೊತ್ತೇ ಇದೆ..

ವಿಜಯ್ ದೇವರಕೊಂಡ
ವಿಜಯ್ ದೇವರಕೊಂಡ ಸ್ವಲ್ಪ ಸಮಯದಲ್ಲೇ ಟಾಲಿವುಡ್‌ನಲ್ಲಿ ಸ್ಟಾರ್ ಆದವರು. ವಿವಾದಗಳಿದ್ರೂ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ರು. ಆದ್ರೆ ಲೈಗರ್ ಸಿನಿಮಾ ಫ್ಲಾಪ್ ಆಗಿ, ಅವರ ಕೆರಿಯರ್‌ಗೆ ಹಿನ್ನಡೆಯಾಗಿದ್ದು ಹೌದು. ಆದರೆ ಇನ್ನೊಂದು ನಿಮಗೆ ಗೊತ್ತಿಲ್ಲದ ವಿಚಾರ ಬಯಲಾಗಿದೆ. ಅದೇನೆಂದು ಮುಂದೆ ತಿಳಿಯೋಣ.
ಲೈಗರ್ ಈ ಸಿನಿಮಾದಲ್ಲಿ ಅನನ್ಯ ಪಾಂಡೆವಿಜಯ ದೇವರಕೊಂಡಗೆ ನಾಯಕಿಯಾಗಿದ್ದರು. ಅನನ್ಯಗೆ ಇದು ಮೊದಲ ತೆಲುಗು ಸಿನಿಮಾ. ಲೈಗರ್ ಹಿಟ್ ಆಗಿದ್ರೆ ಅನನ್ಯ ಕೆರಿಯರ್ ಬೇರೆ ಇರುತ್ತಿತ್ತು. ಆದರೆ ಮೊದಲ ಚಿತ್ರದಲ್ಲೇ ಹಿನ್ನೆಡೆ ಆಯ್ತು.
ಕಥೆ ಕೇಳಿದಾಗ ಅನನ್ಯಗೆ ಸರಿ ಅನಿಸಿಲ್ಲವಂತೆ. ಈ ಕಥೆ ತನಗೆ ಸೂಟ್ ಆಗಲ್ಲ, ಚಿಕ್ಕ ಮಗುವಿನಂತೆ ಕಾಣ್ತೀನಿ ಅಂತ ತಂದೆಗೆ ಹೇಳಿದ್ರಂತೆ.
ಆದರೆ ತಂದೆ ಮಗಳ ಮಾತು ಕೇಳದೇ ದೊಡ್ಡ ಬಜೆಟ್ ಸಿನಿಮಾ ಅಂತ ಬಲವಂತವಾಗಿ ಅನನ್ಯಳನ್ನ ಒಪ್ಪಿಸಿದರಂತೆ ಹಿಂದಿನ ಘಟನೆ ಬಗ್ಗೆ ತಂದೆ ಚಂಕಿ ಪಾಂಡೆ ಹೇಳಿದ್ದಾರೆ. ಹಿಟ್ ಆದ್ರೆ ಒಳ್ಳೇ ಹೆಸರು ಬರುತ್ತೆ ಅಂತ ಮಗಳನ್ನ ಒಪ್ಪಿಸಿದೆ. ಆದರೆ ಆಗಿದ್ದೇ ಬೇರೆ ಎಂದಿದ್ದಾರೆ.
ಲೈಗರ್ ಫ್ಲಾಪ್ ಆದ್ಮೇಲೆ ಅನನ್ಯಗೆ ಟಾಲಿವುಡ್‌ನಲ್ಲಿ ಬೇರೆ ಚಾನ್ಸ್ ಸಿಕ್ಕಿಲ್ಲ. ಜಾನ್ವಿ ಕಪೂರ್ NTR ಸಿನಿಮಾ ಮಾಡಿ ಸಕ್ಸಸ್ ಆದ್ರು. ಆದ್ರೆ ಅನನ್ಯ ಚಾನ್ಸ್ ಸಿಕ್ತಾನೆ ಇಲ್ಲ. ಆ ಸಿನಿಮಾಗೆ ಒಪ್ಪದಿದ್ರೆ ಒಳ್ಳೆ ಸಿನಿಮಾದಲ್ಲಿ ಅವಕಾಶ ಸಿಕ್ಕು ಮಿಂಚುತ್ತಿದ್ದರೇನೋ ಒಟ್ಟಿನಲ್ಲಿ ವಿಜಯ ದೇವರಕೊಂಡಗಾಗಿ ಮಗಳ ಭವಿಷ್ಯವನ್ನೇ ತಂದೆಯೇ ಹಾಳುಮಾಡಿದ್ರು ಎನ್ನತ್ತಿದ್ದಾರೆ ಸಿನಿ ಮಂದಿ.