ಪೋರ್ನ್ ವಿಡಿಯೋ ದಂಧೆ: ರಾಜ್ ಕುಂದ್ರಾಗೆ ಮಧ್ಯಂತರ ರಕ್ಷಣೆ ಕೊಟ್ಟ ಬಾಂಬೆ ಹೈಕೋರ್ಟ್
- ಪೋರ್ನ್ ವಿಡಿಯೋ ತಯಾರಿ, ಮಾರಾಟ ದಂಧೆ
- ಉದ್ಯಮಿ ರಾಜ್ ಕುಂದ್ರಾಗೆ ಮಧ್ಯಂತರ ರಕ್ಷಣೆ
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ಉದ್ಯಮಿ ರಾಜ್ ಕುಂದ್ರಾಗೆ ಬಾಂಬೆ ಹೈಕೋರ್ಟ್ ಮಧ್ಯಂತರ ರಕ್ಷಣೆ ನೀಡಿದೆ. ಪೋರ್ನ್ ವಿಡಿಯೋ ತಯಾರಿ, ಮಾರಾಟ ದಂಧೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ ಉದ್ಯಮಿ ರಾಜ್ ಕುಂದ್ರಾ.
ಮುಂಬೈ ಪೊಲೀಸರು 2020ರಲ್ಲಿ ದಾಖಲಿಸಿದ ಫಿಲ್ಮ್ ರಾಕೆಟ್ ಪ್ರಕರಣದಲ್ಲಿ ಉದ್ಯಮಿ ರಾಜ್‌ಗೆ ಬಾಂಬೆ ಹೈಕೋರ್ಟ್ ಮಧ್ಯಂತರ ರಕ್ಷಣೆ ಕೊಟ್ಟಿದ್ದು ಈ ಮೂಲಕ ಕುಂದ್ರಾಗೆ ಬಂಧನದಿಂದ ರಕ್ಷಣೆ ಸಿಕ್ಕಿದಂತಾಗಿದೆ
ಪ್ರಕರಣದ ವಿಚಾರಣೆ ಸಂದರ್ಭ ರಾಜ್ ಕುಂದ್ರಾ ಪರ ವಕೀಲ ಪ್ರಶಾಂತ್ ಪಾಟೀಲ್ ಇದೇ ಆರೋಪಕ್ಕೆ ಒಳ್ಪಟ್ಟವರು ಈಗಾಗಲೇ ಜಾಮೀನಿನಲ್ಲಿದ್ದಾರೆ ಎಂದು ವಾದಿಸಿದ್ದಾರೆ.
ಕುಂದ್ರಾ ವಿರುದ್ಧ ಇರುವ ಆರೋಪಗಳಲ್ಲಿ ಕನಿಷ್ಠ 7 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದ್ದು, ಬಂಧನದಿಂದ ರಕ್ಷಣೆ ನೀಡಬೇಕು. ಮಧ್ಯಂತರ ರಕ್ಷಣೆಗೆ ಅವರು ಅರ್ಹರು ಎಂದು ಕೋರ್ಟ್ ಮುಂದೆ ಕೇಳಿಕೊಂಡಿದ್ದರು.
ಮನವಿಯನ್ನು ವಿರೋಧಿಸಿ, ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಜಕ್ತಾ ಶಿಂಧೆ ಅವರು ಆರೋಪಿ ಕುಂದ್ರಾ ಪಾತ್ರವು ಪ್ರಕರಣದಲ್ಲಿ ಇತರ ಆರೋಪಿಗಳಿಗಿಂತ ಭಿನ್ನವಾಗಿದೆ ಎಂದು ವಾದಿಸಿದ್ದಾರೆ. ನ್ಯಾಯಮೂರ್ತಿ ಎಸ್.ಕೆ. ಮುಂದಿನ ವಿಚಾರಣೆಯನ್ನು ನಿಗದಿಪಡಿಸಿದ ಆಗಸ್ಟ್ 25 ರವರೆಗೆ ಕುಂದ್ರಾ ಬಂಧನವನ್ನು ತಡೆಯುವ ಮಧ್ಯಂತರ ಆದೇಶವನ್ನು ಅನುಮತಿಸಿದ್ದಾರೆ.
ಈ ಹಿಂದೆ ಕುಂದ್ರಾ ಅವರು ಅಶ್ಲೀಲ ವಿಡಿಯೋ ರಾಕೆಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸ್ ಸೈಬರ್ ಕ್ರೈಂ ಸೆಲ್ ದಾಖಲಿಸಿದ ಎಫ್‌ಐಆರ್‌ನಲ್ಲಿ ನಿರೀಕ್ಷಣಾ ಜಾಮೀನು ಕೋರಿದ್ದರು. ಹಾಟ್ ಶಾಟ್ ಆಪ್ ವಿರುದ್ಧ ಕುಂದ್ರಾರನ್ನು ಲಿಂಕ್ ಮಾಡಲು ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಅವರು ವಾದಿಸಿದ್ದರು.
ಜುಲೈ 19 ರಂದು ಕುಂದ್ರಾ ಅವರನ್ನು ಕ್ರೈಂ ಬ್ರಾಂಚ್ 2021 ರಲ್ಲಿ ದಾಖಲಿಸಿದ ದೂರಿನಲ್ಲಿ ಬಂಧಿಸಲಾಯಿತು. ಕಳೆದ ವಾರ ನ್ಯಾಯಾಲಯವು ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನಂತರ, ಅವರು ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದು ಒಂದು ವಾರದವರೆಗೆ ಬಂಧನದ ವಿರುದ್ಧ ಮಧ್ಯಂತರ ಪರಿಹಾರವನ್ನು ನೀಡಿದೆ.