ಕಾಜೋಲ್‌ ಕೆಟ್ಟ ನಟಿ ಎಂದಿದ್ದರು ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್‌

First Published Jun 29, 2020, 4:20 PM IST

ಕಾಜೋಲ್ ಮತ್ತು ಶಾರುಖ್ ಜೋಡಿಯನ್ನು ಇಂದಿಗೂ ಬೆಳ್ಳಿ ಪರದೆಯ ಅತ್ಯಂತ ರೊಮ್ಯಾಂಟಿಕ್‌ ಮತ್ತು ಜನಪ್ರಿಯ ಜೋಡಿಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. 'ಬಾಜಿಗರ್' ನಿಂದ 'ದಿಲ್ವಾಲೆ' ವರೆಗಿನ ಅನೇಕ ಚಿತ್ರಗಳಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದಾರೆ. ಇದಲ್ಲದೆ, ಕಾಜೋಲ್ ಶಾರುಖ್‌ರ ಅನೇಕ ಚಿತ್ರಗಳಲ್ಲಿ ಅತಿಥಿ ಪಾತ್ರಗಳಲ್ಲಿಯಬ ಕಾಣಿಸಿಕೊಂಡಿದ್ದಾರೆ. ಕಾಜೋಲ್ ಶಾರುಖ್ ಕ್ಲೋಸ್‌ ಫ್ರೆಂಡ್‌ಶಿಪ್ ಸಹ ಹೊಂದಿದ್ದಾರೆ. ಆದರೆ ಶಾರುಖ್ ಕಾಜೋಲ್‌ರನ್ನು ದ್ವೇಷಿಸುತ್ತಿದ್ದ ಸಮಯವೂ ಇತ್ತು ಒಂದು ಕಾಲದಲ್ಲಿ.