ವಯಸ್ಸಾದ ಮೇಲೆ ತಂದೆಯಾದ ಬಾಲಿವುಡ್ ನಟರಿವರು!

First Published Feb 19, 2021, 12:07 PM IST

ಬಾಲಿವುಡ್‌ ನಟಿ ಕರೀನಾ ಕಪೂರ್‌ ಪ್ರೆಗ್ನೆಂಸಿಯ ಕೊನೆಯ ದಿನಗಳಲ್ಲಿದ್ದು ಯಾವುದೇ ಸಮಯದಲ್ಲಿ ತಮ್ಮ ಎರಡನೇ ಮಗುವನ್ನು ಸ್ವಾಗತಿಸಬಹುದು. ಕರೀನಾ ತಮ್ಮ 40ನೇ ವರ್ಷದಲ್ಲಿ 2ನೇ ಮಗುವಿಗೆ ಜನ್ಮ ನೀಡಲಿದ್ದರೆ, ಅವರ ಪತಿ ಸೈಫ್‌ ಆಲಿ ಖಾನ್‌ 50 ವರ್ಷದಲ್ಲಿ ತಂದೆಯಾಗುತ್ತದ್ದಾರೆ. ಇದೇ ರೀತಿ ಹಲವು ಸ್ಟಾರ್‌ ನಟರು ವಯಸ್ಸಾದ ಮೇಲೆ ತಂದೆಯಾದ ಉದಾರಹಣೆಗಳಿವೆ. ಈ ಪಟ್ಟಿಯಲ್ಲಿ ಸೂಪರ್‌ಸ್ಟಾರ್‌ ಶಾರುಖ್‌ ಖಾನ್‌ ಹಾಗೂ ಆಮೀರ್‌ ಖಾನ್‌ ಸಹ ಸೇರಿದ್ದಾರೆ.