ನಟ ಸಿದ್ಧಾರ್ಥ್ ಸಾವು ಆಕಸ್ಮಿಕ ಎಂದು ದಾಖಲಿಸಿದ ಪೊಲೀಸರು
ನಟ ಸಿದ್ಧಾರ್ಥ್ ಶುಕ್ಲಾ ಸಾವು ಆಕಸ್ಮಿಕ ಎಂದು ದಾಖಲಿಸಿದ ಪೊಲೀಸರು ಕೆಮಿಕಲ್ ಅನಾಲಿಸಿಸ್ ವರದಿಗಾಗಿ ವೈಟಿಂಗ್

ಬಿಗ್‌ಬಾಸ್ ಸೀಸನ್ 13ರ ವಿನ್ನರ್ ಕಿರುತೆರೆ ನಟ, ಬಾಲಿವುಡ್ ನಟ ಸಿದ್ಧಾರ್ಥ್ ಶುಕ್ಲಾ ಸಾವು ಅವರ ಅಭಿಮಾನಿಗಳನ್ನು ಶೋಕದಲ್ಲಿ ಮುಳುಗಿಸಿದೆ. ಬಾಲಿವುಡ್‌ನಲ್ಲಿ ಕೆರಿಯರ್ ಆರಂಭಿಸುತ್ತಿದ್ದ ನಟ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಮುಂಬೈ ಪೊಲೀಸರು ಸಿದ್ಧಾರ್ಥ್ ಶುಕ್ಲಾ ಅವರ ಸಾವನ್ನು ಆಕಸ್ಮಿಕ ಸಾವು ಎಂದು ದಾಖಲಿಸಿದ್ದಾರೆ. ಡಿಸಿಪಿ ಸಂಗ್ರಾಮಸಿಂಹ ನಿಶಂದರ್ ಈ ಬೆಳವಣಿಗೆಯನ್ನು ದೃಢಪಡಿಸಿದ್ದಾರೆ. ಸಿಎ ಅಥವಾ ಹಿಸ್ಟೊಪಾಥಾಲಜಿ ವರದಿಗಳು ಅವರು ಸಹಜವಾಗಿ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದ ನಂತರ, ತನಿಖೆಯನ್ನು ಸಹಜ ಸಾವು ಎಂದು ಕ್ಲೋಸ್ ಮಾಡಲಾಗುತ್ತದೆ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.
ಸಾವಿಗೆ ಕಾರಣ ಅನಿಶ್ಚಿತ ಎಂದು ವೈದ್ಯರು ಹೇಳಿದ್ದರು. ಕೆಮಿಕಲ್ ಅನಾಲಿಸಿದ್ ರಿಪೋರ್ಟ್ ಮತ್ತು ಹಿಸ್ಟೊಪಾಥಾಲಜಿ ವರದಿಗಾಗಿ ಮಾದರಿಗಳನ್ನು ಕಳುಹಿಸಲಾಗಿದೆ. ಬಿಗ್‌ಬಾಸ್ ವಿಜೇತ ಸಿದ್ಧಾರ್ಥ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಸಿದ್ಧಾರ್ಥ್ ಸಾವಿಗೂ ಮುನ್ನ ನಟನಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಅವರ ತಾಯಿ ನಟ ಸಿದ್ಧಾರ್ಥ್‌ಗೆ ಬಿಸಿನೀರು ತಂದುಕೊಟ್ಟಿದ್ದರು. ಅದನ್ನು ಕುಡಿದು ನಿದ್ರೆಗೆ ಜಾರಿದ್ದ ನಟ ಮತ್ತೆ ಎದ್ದಿಲ್ಲ.
ಬೆಳಗ್ಗೆ 7 ಗಂಟೆಯಾದರೂ ಮಗ ಏಳದಿದ್ದಾಗ ಸಿದ್ಧಾರ್ಥ್ ತಾಯಿ ಎಬ್ಬಿಸಲು ಪ್ರಯತ್ನಿಸಿದ್ದರು. ನಂತರ ವಿಷಯ ತಿಳಿದು ಆಸ್ಪತ್ರೆಗೆ ಸಾಗಿಸಲಾಗಿದೆ. ನಟನ ಅಂತ್ಯಸಂಸ್ಕಾರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು.
ನಟನ ಸಹುದ್ಯೋಗಿಗಳು, ಬಿಗ್‌ಬಾಸ್ ಸಹ ಸ್ಪರ್ಧಿಗಳೂ ಅಂತಿಮ ನಮನ ಸಲ್ಲಿಸಿದ್ದರು. ಬಾಲಿವುಡ್ ನಟ ವರುಣ್ ಧವನ್ ಅವರೂ ಸಿದ್ಧಾರ್ಥ್‌ಗೆ ಅಂತಿಮ ನಮನ ಸಲ್ಲಿಸಲು ಬಂದಿದ್ದರು
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.