3 ಬಾರಿ ಬ್ರೇಕಪ್ ನಂತರ ಮದುವೆ‌‌‌: ಆಶಿಕಿ ನಟ ರಾಹುಲ್‌ ರಾಯ್‌ ಜೀವನದಲ್ಲಿದ್ದರು ಈ ಕನ್ನಡತಿ

First Published Feb 10, 2021, 4:47 PM IST

90ರ ದಶಕದಲ್ಲಿ ತನ್ನ ಮೊದಲ ಸಿನಿಮಾ ಆಶಿಕಿಯಿಂದ ರಾತ್ರೋರಾತ್ರಿ ಸ್ಟಾರ್‌ ಆದವರು ನಟ ರಾಹುಲ್‌ ರಾಯ್‌. 9 ಫೆಬ್ರವರಿ 1968ರಲ್ಲಿ ಜನಿಸಿದ ರಾಹುಲ್‌ ಕೆಲವು ದಿನಗಳ ಹಿಂದೆ ತಮ್ಮ ಆಶಿಕಿ ಕೋಸ್ಟಾರ್‌ ಅನು ಅಗರ್ವಾಲ್‌ ಜೊತೆ ಕಪಿಲ್‌ ಶರ್ಮ ಶೋನಲ್ಲಿ ಕಾಣಿಸಿಕೊಂಡಿದ್ದರು. ರಾಹುಲ್‌ ತಮ್ಮ ಲೈಫ್‌ಗೆ ಸಂಬಂಧಿಸಿದ ಹಲವು ಇಂಟರೆಸ್ಟಿಂಗ್‌ ವಿಷಯಗಳನ್ನು ಶೇರ್‌ ಮಾಡಿಕೊಂಡಿದ್ದಾರೆ. 3 ಆಫೇರ್‌ಗಳನ್ನು ಹೊಂದಿದ್ದ ರಾಹುಲ್‌ 1998ರಲ್ಲಿ ರಾಜಲಕ್ಷ್ಮಿ ಖಾನ್ವಿಲ್ಕರ್ ಅವರನ್ನು ಮದುವೆಯಾದರು. ಆದರೆ 14 ವರ್ಷಗಳ ನಂತರ ಈ ಕಪಲ್‌ 2012ರಲ್ಲಿ ಡಿವೋರ್ಸ್‌ ಆದರು. ಮತ್ತೆ ಯಾರು ಇವರ ಜೀವನದಲ್ಲಿ ಪ್ರವೇಶಿಸಿದ್ದರು?