MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • Birth Anniversary: ಸುಶಾಂತ್ ಬ್ಯಾಟಿಂಗ್ ನೋಡಿ ಸಚಿನ್ ಕೊಟ್ಟ ಸಲಹೆ ಇದು

Birth Anniversary: ಸುಶಾಂತ್ ಬ್ಯಾಟಿಂಗ್ ನೋಡಿ ಸಚಿನ್ ಕೊಟ್ಟ ಸಲಹೆ ಇದು

ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಈಗ ನಮ್ಮೊಂದಿಗಿಲ್ಲ. ಆದರೆ ಅವರ ಸಿನಿಮಾಗಳ ಮೂಲಕ ಅವರು ನಮ್ಮ ಹೃದಯದಲ್ಲಿ ಇನ್ನೂ ಜೀವಂತವಾಗಿದ್ದಾರೆ. ಇಂದು ಸುಶಾಂತ್ ಸಿಂಗ್ ರಜಪೂತ್ ಅವರ ಜನ್ಮದಿನ. ಬಿಹಾರದ ಪಾಟ್ನಾದಲ್ಲಿ ಜನಿಸಿದ ಸುಶಾಂತ್ ಸಿಂಗ್ ನಾಲ್ಕು ಸಹೋದರಿಯರ ಏಕೈಕ ಸಹೋದರ. ಅವರು 14 ಜೂನ್ 2020 ರಂದು ಮುಂಬೈನಲ್ಲಿರುವ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಸುಶಾಂತ್ ಸಿಂಗ್ ಅವರ ಬ್ಯಾಟಿಂಗ್ ನೋಡಿ ಸಚಿನ್ ತೆಂಡೂಲ್ಕರ್ ಆಶ್ಚರ್ಯಚಕಿತರಾದರು ಮತ್ತು ನಟನಿಗೆ ಒಂದು ಸಲಹೆ ಸಹ ನೀಡಿದ್ದರು. ಏನದು ಗೊತ್ತಾ?

2 Min read
Suvarna News
Published : Jan 21 2022, 06:13 PM IST
Share this Photo Gallery
  • FB
  • TW
  • Linkdin
  • Whatsapp
112

ತಮ್ಮ ಕಠಿಣ ಪರಿಶ್ರಮದ ಆಧಾರದ ಮೇಲೆ ಟಿವಿಯಿಂದ ಬಾಲಿವುಡ್‌ಗೆ ಪ್ರಯಾಣಿಸಿದ ತಾರೆಗಳಲ್ಲಿ ಸುಶಾಂತ್ ಸಿಂಗ್‌ ರಜಪೂತ್‌ ಒಬ್ಬರು. ಸುಶಾಂತ್ ತಮ್ಮ ಕೆರಿಯರ್‌ನಲ್ಲಿ ಒಂದಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಜನವರಿ 21, 1986 ರಂದು ಪಾಟ್ನಾದಲ್ಲಿ ಜನಿಸಿದ ಸುಶಾಂತ್ ಅವರು ಅಧ್ಯಯನದಲ್ಲಿ ಟಾಪರ್ ಆಗಿದ್ದರು.

212

ಸುಶಾಂತ್ ಸಿಂಗ್ ರಜಪೂಯಗ ಎಂಜಿನಿಯರಿಂಗ್ ಮಾಡಲು ನಿರ್ಧರಿಸಿದರು. ಅವರು ದೆಹಲಿಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರವೇಶ ಪಡೆದರು. ತನ್ನ ಅಧ್ಯಯನದ ಸಮಯದಲ್ಲಿ, ಅವರು ಶಿಯಾಮಕ್ ದಾವರ್ ಅವರ ಡ್ಯಾನ್ಸ್‌ ಗ್ರೂಪ್‌ಗೆ ಸೇರಿದರು.   

312

ಓದುತ್ತಿರುವಾಗ ಸುಶಾಂತ್‌ಗೆ ಬೇರೆ ಏನಾದರೂ ಚಟುವಟಿಕೆ ಮಾಡಬೇಕು ಎಂದು ಅನಿಸಿತು. ಇದರ ನಂತರ ಅವರು ಶಿಯಾಮಕ್ ದಾವರ್ ಅವರ ನೃತ್ಯ ಗುಂಪಿಗೆ ಸೇರಿದರು. ಈ ಕಾರಣದಿಂದಾಗಿ ಸುಶಾಂತ್ ದೇಶ ಮತ್ತು ವಿದೇಶಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ಮಾಡಿದರು.
 

412

ಸುಶಾಂತ್ ಅವರ ಎಂಜಿನಿಯರಿಂಗ್ ಅಲ್ಲ, ನಟನಾಗುವ ಕನಸು ಹೊಂದಿದ್ದರು.  ಅವರು ಕಿರುತೆರೆಯ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು 2008 ರಲ್ಲಿ ಟಿವಿ ಧಾರಾವಾಹಿ 'ಕಿಸ್ ದೇಶ್ ಮೇ ಹೈ ಮೇರಾ ದಿಲ್' ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು

512

ಆದರೆ ಅವರಿಗೆ ಬ್ರೇಕ್‌  ಸಿಕ್ಕಿದ್ದು ‘ಪವಿತ್ರ ರಿಷ್ತಾ’ ಧಾರಾವಾಹಿಯಿಂದ. ‘ಪವಿತ್ರ ರಿಶ್ತಾ’ ಧಾರಾವಾಹಿಯಲ್ಲಿ ಸುಶಾಂತ್ ಜೊತೆ ನಟಿ ಅಂಕಿತಾ ಲೋಖಂಡ್ ಕೂಡ ಕಾಣಿಸಿಕೊಂಡಿದ್ದರು. ತೆರೆಮೇಲೆ ಇಬ್ಬರ ಜೋಡಿಯನ್ನು ಜನ ಇಷ್ಟಪಟ್ಟಿದ್ದರು. ತೆರೆಮರೆಯಲ್ಲಿ ಸಹ ಈ ಜೋಡಿ ಹಲವು ವರ್ಷಗಳ ಕಾಲ ಸಂಬಂಧದಲ್ಲಿದ್ದರು. 

612

ಸುಶಾಂತ್ 2013 ರಲ್ಲಿ 'ಕೈ ಪೋ ಚೆ!' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಈ ಸಿನಿಮಾದಲ್ಲಿ ಸುಶಾಂತ್ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಸುಶಾಂತ್ ಸಿಂಗ್ 2013 ರ ಚಲನಚಿತ್ರ ಶುದ್ಧ್ ದೇಸಿ ರೋಮ್ಯಾನ್ಸ್‌ನಲ್ಲಿ ಕಾಣಿಸಿಕೊಂಡಿದ್ದರು. ಇದರ ನಂತರ, ಅವರು ಪಿಕೆ (2014), ಡಿಟೆಕ್ಟಿವ್ ಬೋಮೇಶ್ ಬಕ್ಷಿ (2015) ಸಿನಿಮಾದಲ್ಲಿ ಕಾಣಿಸಿಕೊಂಡರು.

712

2016 ರಲ್ಲಿ, ಮಾಜಿ ಭಾರತೀಯ ನಾಯಕ ಎಂಎಸ್ ಧೋನಿ ಆಧಾರಿತ ಎಎಸ್ ಧೋನಿ: ದಿ ಅನ್ಟೋಲ್ಡ್ ಸ್ಟೋರಿ ಸಿನಿಮಾದಲ್ಲಿನ ಸುಶಾಂತ್ ಸಿಂಗ್ ಅವರ  ಅಭಿನಯಕ್ಕಾಗಿ ತುಂಬಾ ಶ್ರಮವಹಿಸಿದ್ದರು.

812
Dhoni took questions from fans and spoke about his biopic as Sushant watched.

Dhoni took questions from fans and spoke about his biopic as Sushant watched.

ಅವರು ಈ ಸಿನಿಮಾಕ್ಕಾಗಿ 18 ತಿಂಗಳ ತರಬೇತಿಯನ್ನು ಪಡೆದರು. ಇದರಲ್ಲಿ ಅವರು 9 ತಿಂಗಳುಗಳ ಕಾಲ ಮೈದಾನದಲ್ಲಿ ಅಭ್ಯಾಸ ಮಾಡಿದರು. ಬಾಲ್ಯದಲ್ಲಿ ಕ್ರಿಕೆಟಿಗನಾಗಬೇಕು ಎಂದು ಕನಸು ಕಂಡಿದ್ದ ಸುಶಾಂತ್ ಸಿಂಗ್ ರಜಪೂತ್ ಅಭ್ಯಾಸ ನಡೆಸುತ್ತಲೇ ಉತ್ತಮ ಬ್ಯಾಟ್ಸ್‌ಮನ್ ಆಗಿದ್ದರು. 

912
Sushant Singh Rajput: This is a no-brainer, as the man who played his role in his biopic has to have a special connection with Dhoni. It was since 2016, both had become close to each other, especially after working in his movie. The two were seen spending happy moments with each other, while Sushant loved spending time with Dhoni's daughter, Ziva. Furthermore, Dhoni and Sushant, being from neighbouring states Jharkhand and Bihar, respectively, made their bonding even strong. Following Sushant's demise, Dhoni has expressed his greatest grieve over the situation.

Sushant Singh Rajput: This is a no-brainer, as the man who played his role in his biopic has to have a special connection with Dhoni. It was since 2016, both had become close to each other, especially after working in his movie. The two were seen spending happy moments with each other, while Sushant loved spending time with Dhoni's daughter, Ziva. Furthermore, Dhoni and Sushant, being from neighbouring states Jharkhand and Bihar, respectively, made their bonding even strong. Following Sushant's demise, Dhoni has expressed his greatest grieve over the situation.

ಸಚಿನ್ ತೆಂಡೂಲ್ಕರ್ ತಮ್ಮ ಶಾಟ್ ಹೊಡೆದ ರೀತಿಯನ್ನು ನೋಡಿದ ಅವರು, ಈತ ಒಬ್ಬ ನಟ ಎಂದು ನಾನು ನಂಬಲು ಸಾಧ್ಯವಿಲ್ಲ, ಅವರು ವೃತ್ತಿಪರ ಕ್ರಿಕೆಟಿಗನಂತೆ ಆಡುತ್ತಾರೆ. ಸುಶಾಂತ್ ಬಯಸಿದರೆ, ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಆಡಬಹುದು ಎಂದು ಸಚಿನ್‌ ಹೇಳಿದರು .

1012

ಇದರ ನಂತರ, ಅವರು ಸುಶಾಂತ್ ಸಿಂಗ್ ಚಿತ್ರ ರಾಬ್ತಾ (2017), ವೆಲ್‌ಕಮ್ ಟು ನ್ಯೂಯಾರ್ಕ್ (2018), ಕೇದಾರನಾಥ್ (2018), ಸೋಂಚಿಡಿಯಾ (2019), ಚಿಚೋರ್ (2019), ಡ್ರೈವ್ (2019) ನಲ್ಲಿ ಕಾಣಿಸಿಕೊಂಡರು. ಅವರ ಕೊನೆಯ ಸಿನಿಮಾ 'ದಿಲ್ ಬೇಚಾರ'. ಬಿಡುಗಡೆಯಾದಾಗ ಸುಶಾಂತ್‌ ನಮ್ಮೊಂದಿಗೆ ಇರಲಿಲ್ಲ. ಸುಶಾಂತ್ ಸಿಂಗ್ ಅವರಿಗೆ ಹಲವು ಪ್ರಶಸ್ತಿಗಳು ಸಂದಿವೆ.

1112

ಸುಶಾಂತ್ ಸಿಂಗ್ ರಜಪೂತ್ ಶಾರುಖ್ ಖಾನ್ ಅವರನ್ನು ತುಂಬಾ ಇಷ್ಟಪಡುತ್ತಿದ್ದರು. ಒಮ್ಮೆ ಶಾರುಖ್  ಕಾರ್ಯಕ್ರಮದಲ್ಲಿ, ಸುಶಾಂತ್ ಅವರು ತಮ್ಮ ಶಾಲಾ ದಿನಗಳಲ್ಲಿ ಗೆಳತಿಯರನ್ನು ಇಂಪ್ರೆಸ್‌ ಮಾಡಲು ಶಾರುಖ್ ಅವರನ್ನು ಅನುಕರಿಸುತ್ತಿದ್ದರು ಎಂದು ಹೇಳಿದರು.
 

1212

ಸುಶಾಂತ್ ಖಗೋಳಶಾಸ್ತ್ರದಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದರು. ನಕ್ಷತ್ರಗಳನ್ನು ನೋಡುವುದು ಅವರಿಗೆ ತುಂಬಾ  ಪ್ರಿಯವಾದ ಕೆಲಸವಾಗಿತ್ತು. ಅವರ ತನ್ನ ಮನೆಯಲ್ಲಿ ದೊಡ್ಡ ದೂರದರ್ಶಕವನ್ನು ಇಟ್ಟುಕೊಂಡಿದ್ದರು. ಅವರು ಬಾಹ್ಯಾಕಾಶಕ್ಕೆ ಹೋಗುವುದನ್ನು ತುಂಬಾ ಇಷ್ಟಪಡುತ್ತಿದ್ದರು. ಚಂದ್ರನ ಮೇಲೂ ಭೂಮಿ ಖರೀದಿಸಿದ್ದರು. 

About the Author

SN
Suvarna News
ಬಾಲಿವುಡ್
ಕ್ರಿಕೆಟ್
ಸಚಿನ್ ತೆಂಡೂಲ್ಕರ್
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved