ಬಿಪಾಶಾ -ಗ್ರೋವರ್‌ ಹಾಲಿಡೇ ರೊಮ್ಯಾಂಟಿಕ್‌ ಫೋಟೋ ವೈರಲ್‌!

First Published Mar 2, 2021, 5:29 PM IST

ಬಾಲಿವುಡ್‌ ನಟಿ ಬಿಪಾಶಾ ಬಸು ಬಹಳ ಸಮಯದಿಂದ ಚಿತ್ರಗಳಿಂದ ದೂರವಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಸಕ್ರಿಯವಾಗಿರುವ ನಟಿ, ತಾವು ಲೈಮ್‌ಲೈಟ್‌ನಲ್ಲಿ ಹೇಗೆ ಉಳಿಯಬೇಕೆಂದು ಚೆನ್ನಾಗಿ ತಿಳಿದಿದ್ದಾರೆ. ಪ್ರಸ್ತುತ ಪತಿ ಕರಣ್ ಸಿಂಗ್ ಗ್ರೋವರ್ ಅವರೊಂದಿಗೆ ಮಾಲ್ಡೀವ್ಸ್‌ನಲ್ಲಿ ವೆಕೇಷನ್‌ ಎಂಜಾಯ್‌ ಮಾಡುತ್ತಿದ್ದಾರೆ ಬಿಪಾಶಾ. ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಅನೇಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ. . ಅವರ ಬಿಕಿನಿ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಬಹಳ ವೈರಲ್ ಆಗುತ್ತಿವೆ. ಇಲ್ಲಿವೆ ಬಿಪಾಶಾರ ಹಾಲಿಡೇ ಫೋಟೋಗಳು.