ನನ್ನ ಬಣ್ಣವೇ + ಪಾಯಿಂಟ್; ಬೆಡ್ರೂಮ್ ವಿಡಿಯೋ ಲೀಕ್ ಬೆನ್ನಲೆ ನಟಿ ವೈಷ್ಣವಿ ಮತ್ತೊಂದು ವಿಡಿಯೋ ವೈರಲ್!
ಬೇಬಿ ಸಿನಿಮಾದಲ್ಲಿ ಮಿಂಚುತ್ತಿರುವ ನಟಿ ವೈಷ್ಣವಿ ಚೈತನ್ಯಾ. ನೋಡಲು ಕಪ್ಪಿರುವೆ ಎಂದು ಬೇಸರ ಮಾಡಿಕೊಂಡಾಗ ಸ್ನೇಹಿತರು ಧೈರ್ಯ ಕೊಟ್ಟರಂತೆ.
ಆನಂದ್ ದೇವರಕೊಂಡ ಜೊತೆ ಬೇಬಿ ಸಿನಿಮಾದಲ್ಲಿ ನಟಿಸಿರುವ ವೈಷ್ಣವು ಚೈತನ್ಯಾ ಬಣ್ಣ ತಾರತಮ್ಯದ ಬಗ್ಗೆ ಮಾತನಾಡಿದ್ದಾರೆ. ಜನರು ಕಾಮೆಂಟ್ಸ್ಗಿಂತ ತಮ್ಮ ಮನಸ್ಸಿನಲ್ಲಿ ಏನಿತ್ತು ಎಂದು ರಿವೀಲ್ ಮಾಡಿದ್ದಾರೆ.
ವೈಯಕ್ತಿಕವಾಗಿ ನನಗೆ ಕಪ್ಪು ಹುಡುಗಿ ಪಾತ್ರ ಮಾಡುವುದಕ್ಕೆ ತುಂಬಾನೇ ಇಷ್ಟವಾಗುತ್ತದೆ. ಆ ರೀತಿ ಪಾತ್ರ ಯಾರೇ ಮಾಡಿದರೂ ಇಷ್ಟ ಪಡುವೆ.
ಏಕೆಂದರೆ ಡಾರ್ಕ್ ಸ್ಕಿನ್ ಹೊಂದಿರುವವರ ಮುಖದಲ್ಲಿ ಭಾವನೆಗಳನ್ನು ಸ್ಪಷ್ಟವಾಗಿ ತೋರಿಸಬಹುದು ಸಣ್ಣ ಎಮೋಷನ್ ಕೂಡ ಎದ್ದು ಕಾಣಿಸುತ್ತದೆ.
ನನ್ನ ಸ್ನೇಹಿತರ ಗುಂಪಿನಲ್ಲಿ ನಾನೊಬ್ಬಳೆ ನಾಯಕಿಯಾಗಿರುವುದು. ಆದರೂ ಸಹ ನನ್ನ ತ್ವಚೆ ಬಣ್ಣದ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುತ್ತೀನಿ.
ಸದಾ ನಾನು ಕಪ್ಪ ಬಣ್ಣ ಸ್ವಲ್ಪ ಫೇರ್ ಆಗಬೇಕು ಚೆನ್ನಾಗಿ ಕಾಣಿಸಬೇಕು ಅಂತ ನನ್ನ ಮನಸ್ಸು ಹೇಳುತ್ತದೆ. ನನ್ನನ್ನು ಇಷ್ಟ ಪಡುವ ಜನರಿದ್ದರೂ ಈ ಭಾವನೆ ಬರುತ್ತದೆ.
ಈ ವಿಚಾರ ಕೇಳಿದಾಗ ನನ್ನ ಸ್ನೇಹಿತೆ ಆಕೆ ಕೂಡ ನಟಿ ಆದರೂ ನನಗೆ ಸಲಹೆ ಕೊಟ್ಟಳು. ನೀನು ತುಂಬಾ ಬಿಳಿ ಕಲರ್ ಇದ್ದರೆ ನೀನು ಏನೇ ಮಾಡಿದರೂ ಮುಖದಲ್ಲಿ ಭಾವನೆಗಳನ್ನು ಸುಲಭವಾಗಿ ತೋರಸಲು ಆಗುತ್ತಿರಲಿಲ್ಲ.
ನಿನ್ನ ತ್ವಚೆ ಹೀಗೆ ಇರುವುದಕ್ಕೆ ನೀನು ಇಷ್ಟೊಂದು ಹೆಸರು ಮಾಡುತ್ತಿರುವುದು ಹಾಗೂ ಅದ್ಭುತವಾಗಿ ನಟಿಸುತ್ತಿರುವುದು. ಇರುವ ರೀತಿಯನ್ನು ಒಪ್ಪಿಕೊಳ್ಳಬೇಕು ಏಕೆಂದರೆ ಅದೇ ನಿನ್ನ ಪ್ಲಸ್ ಪಾಯಿಂಟ್ ಎಂದರು.