ಹಾವಿನ ರಕ್ತ ಕುಡೀತಾರಾ ಅನಿಲ್ ಕಪೂರ್ ? ವಯಸ್ಸೇ ಗೊತ್ತಾಗಲ್ಲ
- ವಯಸ್ಸಾದ್ರೂ ಅನಿಲ್ ಕಪೂರ್ ಇಷ್ಟು ಹ್ಯಾಂಡ್ಸಂ ಆಗಿರೋದು ಹೇಗೆ ?
- ಪ್ಲಾಸ್ಟಿಕ್ ಸರ್ಜನ್ ಜೊತೆಗೇ ಬದುಕುತ್ತಾರಾ ನಟ ?
ಬಾಲಿವುಡ್ ಟಾಪ್ ನಟನಿಗೆ 64 ವರ್ಷ. ಇಬ್ಬರು ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಟ್ಟು ಅನಿಲ್ ಕಪೂರ್ ಚಿಲ್ ಮಾಡುತ್ತಿದ್ದಾರೆ. ಆದರೆ 64 ವಯಸ್ಸಾದ್ರೂ ನಟ ಇಷ್ಟು ಹ್ಯಾಂಡ್ಸಂ ಆಗಿರೋದು ಹೇಗೆ ?
ಅರ್ಬಾಜ್ ಖಾನ್ ಅವರ ಟಾಕ್ ಶೋ ಪಿಂಚ್ ನಲ್ಲಿ ಅನಿಲ್ ಕಪೂರ್ ಇತ್ತೀಚಿನ ಅತಿಥಿಯಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಒಂದು ಭಾಗದಲ್ಲಿ, ಅರ್ಬಾಜ್ ಖಾನ್ ಹಿರಿಯ ನಟನ ಲುಕ್ ಬಗ್ಗೆ ಪ್ರತಿಕ್ರಿಯಿಸುವ ಟ್ರೋಲ್‌ಗಳ ತುಣುಕುಗಳನ್ನು ಅನಿಲ್ ಕಪೂರ್‌ಗೆ ತೋರಿಸಿದ್ದಾರೆ.
ಒಬ್ಬ ವ್ಯಕ್ತಿಯು ಅನಿಲ್ ಕಪೂರ್ ತನ್ನ ಪ್ಲಾಸ್ಟಿಕ್ ಸರ್ಜನ್ ಜೊತೆಗೇ ವಾಸಿಸುತ್ತಾನೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. ಇನ್ನೊಬ್ಬರು ಅವರು ಹಾವಿನ ರಕ್ತವನ್ನು ಕುಡಿಯುತ್ತಾರೆ ಎಂದು ಸನಿಸುತ್ತದೆ ಎಂದಿದ್ದಾರೆ.
ಈ ಟ್ರೋಲ್ ನೋಡಿದ ಅನಿಲ್ ಕಪೂರ್ ತಮಾಷೆಯಾಗಿ ಅರ್ಬಾಜ್ ಖಾನ್ ಅವರನ್ನು ಕಮೆಂಟ್‌ಗಳು ನಿಜವೇ ಅಥವಾ ಹಣ ಕೊಟ್ಟು ಮಾಡಿಸಿದ್ದೀರಾ ಎಂದು ತಮಾಷೆ ಮಾಡಿದ್ದಾರೆ.
ಇದು ನಿಜವೇ ಅಥವಾ ಇದನ್ನು ಹೇಳಲು ನೀವು ಅವರಿಗೆ ಹಣ ನೀಡಿದ್ದೀರಾ ಎಂದು ಅವರು ಪ್ರಶ್ನಿಸಿದ್ದಾರೆ. ಅರ್ಬಾಜ್ ಖಾನ್ ಕಾಮೆಂಟ್‌ಗಳು ನಿಜವಾದವು ಎಂದು ಅನಿಲ್ ಕಪೂರ್‌ಗೆ ಭರವಸೆ ನೀಡಿದ್ದಾರೆ.
ಅನಿಲ್ ಕಪೂರ್ ಒಬ್ಬರು ನಾನು ಪ್ಲಾಸ್ಟಿಕ್ ಸರ್ಜನ್ ಅನ್ನು ನನ್ನ ಬಳಿ ಇಟ್ಟುಕೊಂಡಿದ್ದೇನೆ ಎನ್ನುತ್ತಿದ್ದಾರಲ್ಲಾ ಎಂದು ಅಚ್ಚರಿ ಪಟ್ಟಿದ್ದಾರೆ.
ನಾನು ಇಂಥದ್ದು ತುಂಬಾ ಸ್ವೀಕರಿಸಿದ್ದೇನೆ. ಅದು ನಿಮ್ಮ ನೋಟಕ್ಕೆ ಸಹಾಯ ಮಾಡುತ್ತದೆ. ಎಲ್ಲರೂ ಏರಿಳಿತಗಳನ್ನು ಎದುರಿಸುತ್ತಾರೆ. ಆದರೆ ನಾನು ಅದೃಷ್ಟಶಾಲಿಯಾಗಿದ್ದೇನೆ ಎಂದಿದ್ದಾರೆ.
ಒಂದು ದಿನದಲ್ಲಿ 24 ಗಂಟೆಗಳಿರುತ್ತದೆ. ಒಂದು ದಿನದಲ್ಲಿ ಒಂದು ಗಂಟೆಯಾದರೂ ನೀವು ನಿಮ್ಮನ್ನು ನೋಡಿಕೊಳ್ಳಲು ಸಾಧ್ಯವಿಲ್ಲವೆಂದಾದರೆ, ಆಗ ಏನು ಪ್ರಯೋಜನ? ಎಂದು ಪ್ರಶ್ನಿಸಿದ್ದಾರೆ
ಅನಿಲ್ ಕಪೂರ್ 2021 ರಲ್ಲಿ ಬಿಡುವಿಲ್ಲದ ಶೆಡ್ಯೂಲ್ ಹೊಂದಿದ್ದರು. ಅನಿಲ್ ಕಪೂರ್ ಕೊನೆಯ ಬಾರಿಗೆ ನೆಟ್‌ಫ್ಲಿಕ್ಸ್ ಥ್ರಿಲ್ಲರ್ ಎಕೆ ವರ್ಸಸ್ ಎಕೆ, ಚಿತ್ರನಿರ್ಮಾಪಕ ಅನುರಾಗ್ ಕಶ್ಯಪ್ ಜೊತೆಯಲ್ಲಿ ನಟಿಸಿದ್ದರು.
ಕಳೆದ ವರ್ಷ, ಅವರು ದಿಶಾ ಪಟಾನಿ ಮತ್ತು ಆದಿತ್ಯ ರಾಯ್ ಕಪೂರ್ ಜೊತೆಯಾಗಿ ನಟಿಸಿದ ಮಲಂಗ್ ನಲ್ಲಿ ಕಾಣಿಸಿಕೊಂಡರು. ನಟನಿಗೆ ಮುಂದೆ ಬ್ಯುಸಿ ಶೆಡ್ಯೂಲ್ ಇದೆ. ಅವರು ಮುಂದೆ ಧರ್ಮ ಪ್ರೊಡಕ್ಷನ್ಸ್‌ನ ಜಗ್ ಜಗ್ ಜಿಯೊದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ನೀತು ಕಪೂರ್, ವರುಣ್ ಧವನ್ ಮತ್ತು ಕೈರಾ ಅಡ್ವಾಣಿ ನಟಿಸಿದ್ದಾರೆ.