ಬಾಲಿವುಡ್‌ನ ಬ್ಯುಸಿ ನಟ ಅಕ್ಷಯ್‌ ಕುಮಾರ್‌ ಕೈಯಲ್ಲಿರುವ ಸಿನಿಮಾಗಳೆಷ್ಟು?

First Published Apr 4, 2021, 12:56 PM IST

ಬಾಲಿವುಡ್ ಇಂಡಸ್ಟ್ರಿಯಲ್ಲಿ ಸಖತ್‌ ಬ್ಯುಸಿ ಇರುವ ಸ್ಟಾರ್‌ ಅಕ್ಷಯ್ ಕುಮಾರ್. ಇತ್ತೀಚೆಗೆ ಅವರು ಅಟ್ರಂಗಿ ರೇ ಮತ್ತು ಬಚ್ಚನ್ ಪಾಂಡೆ ಚಿತ್ರಗಳ ಶೂಟಿಂಗ್ ಪೂರ್ಣಗೊಳಿಸಿದ್ದಾರೆ. ಈಗ ಅವರು ತಮ್ಮ ಮುಂಬರುವ ಚಿತ್ರ ರಾಮ್‌ಸೇತು ಸಿನಿಮಾದ ಶೂಟಿಂಗ್‌ನಲ್ಲಿ ನಿರತರಾಗಿದ್ದರು. ಆದರೆ, ಕೋವಿಡ್ ಪಾಸಿಟಿವ್ ಬಂದ ಕಾರಣ ಹೋಮ್ ಐಸೋರೇಟ್ ಆಗಿದ್ದಾರೆ. ಈ ದಿನಗಳಲ್ಲಿ ಅಕ್ಷಯ್‌ ಅತಿ ಹೆಚ್ಚು ಬೇಡಿಕೆಯಲ್ಲಿರುವ ನಟ. ಪ್ರಸ್ತುತ ಅಕ್ಷಯ್‌ಕುಮಾರ್‌ ಸುಮಾರು 7 ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ.