ಕಸಿನ್ ಮದುವೆಯಲ್ಲಿ ಮಗಳು ಆರಾಧ್ಯ ಜೊತೆ ಐಶ್ವರ್ಯಾ ರೈ ಬಚ್ಚನ್!
ಬಚ್ಚನ್ ಕುಟುಂಬದ ಸೊಸೆ ಮತ್ತು ಬಾಲಿವುಡ್‌ನ ಪ್ರಸಿದ್ಧ ನಟಿಯಾದರೂ ಐಶ್ವರ್ಯಾ ರೈ ತನ್ನ ಸಂಬಂಧಿಕರು ಮತ್ತು ಸ್ನೇಹಿತರನ್ನು ಮರೆತಿಲ್ಲ. ಐಶ್ವರ್ಯಾ ಇತ್ತೀಚಿಗೆ ಕಸಿನ್ ಶ್ಲೋಕಾ ಶೆಟ್ಟಿಯವರ ವಿವಾಹದಲ್ಲಿ ಪತಿ ಅಭಿಷೇಕ್ ಬಚ್ಚನ್, ಮಗಳು ಆರಾಧ್ಯ ಬಚ್ಚನ್ ಮತ್ತು ತಾಯಿ ವೃಂದಾ ರೈ ಜೊತೆ ಹಾಜರಾಗಿದ್ದರು. ಮದುವೆ ಸಮಾರಂಭಕ್ಕೆ ಸಂಬಂಧಿಸಿದ ಹಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಈ ಫೋಟೋಗಳಲ್ಲಿ ಐಶ್ವರ್ಯಾ ರೈ ಹಾಗೇ ಮಗಳು ಆರಾಧ್ಯ ಕೂಡ ಏಂಜಲ್ ರೀತಿ ಕಾಣುತ್ತಿದ್ದಾಳೆ.
ಫೋಟೋಗಳಲ್ಲಿ, ಆರಾಧ್ಯ ಬಚ್ಚನ್ ಸಿಲ್ವರ್ ಕಲರ್ ಲೆಹೆಂಗಾ ಧರಿಸಿರುವುದು ಕಂಡುಬಂದಿದೆ. ಅವಳು ಲೆಹೆಂಗಾಕ್ಕೆ ಮ್ಯಾಚಿಂಗ್ ಜ್ಯುವೆಲ್ಲರಿ ಮಾಂಗ್ ಟಿಕಾ, ಬಳೆಗಳು ಮತ್ತು ಕಿವಿಯೋಲೆಗಳನ್ನು ಧರಿಸಿದ್ದಾಳೆ. ಕೂದಲು ಕಟ್ಟದೇ ಹಾಗೇ ಬಿಟ್ಟಿರುವ ಆರಾಧ್ಯ ತುಂಬಾ ಸುಂದರವಾಗಿ ಕಾಣುತ್ತಿದ್ದಾಳೆ.
ಐಶ್ವರ್ಯಾ ರೈ ತಮ್ಮ ಕಸಿನ್ ಶ್ಲೋಕಾರ ಮದುವೆಯ ಪ್ರತಿಯೊಂದೂ ಸಣ್ಣ ಪುಟ್ಟ ಆಚರಣೆಗಳಲ್ಲಿ ತುಂಬಾ ಖುಷಿಯಿಂದ ಭಾಗವಹಿಸಿದರು. ಅದೇ ಸಮಯದಲ್ಲಿ, ಆರಾಧ್ಯ ಕೂಡ ತಾಯಿ ಜೊತೆ ಇದ್ದಳು.
ವಿವಾಹ ಸಮಾರಂಭದಲ್ಲಿ ಮದು ಮಗಳು ಶ್ಲೋಕಾಗೆ ಸಿಂಧೂರ ಇಟ್ಟು, ದೃಷ್ಟಿ ಕೂಡ ತೆಗೆದರು ಐಶ್ವರ್ಯಾ. ಕೈಗೆ ಮೆಹಂದಿ ಹಚ್ಚಿಕೊಂಡ ರೈ ಕಸಿನ್ ಮದುವೆಯನ್ನು ಫುಲ್ ಎಂಜಾಯ್ ಮಾಡಿರುವುದು ಕಂಡು ಬಂದಿದೆ ಹಾಗೂ ತುಂಬಾ ಸಂತೋಷದಿಂದ ಕಾಣುತ್ತಿದ್ದರು.
ಮಂಗಳೂರು ಮೂಲದ ಐಶ್ವರ್ಯಾ ಫ್ಯಾಮಿಲಿಯ ಕೆಲವು ಸದಸ್ಯರು ಮುಂಬಯಿಯಲ್ಲಿಯೇ ಸೆಟಲ್ ಆಗಿದ್ದಾರೆ. ಅಪರೂಪಕ್ಕೊಮ್ಮೆ ಊರಿಗೆ ಬರುವ ಈ ಬಾಲಿವುಡ್ ನಟಿ, ಮಾಜಿ ಮಿಸಿ ವರ್ಲ್ಡ್ ನೆಚ್ಚಿನ ದೈವಕ್ಕೂ ಪೂಜಿಸಿ ತೆರಳುತ್ತಾರೆ.
ಆರಾಧ್ಯ ತನ್ನ ಚಿಕ್ಕಮ್ಮ ಶ್ಲೋಕ ಶೆಟ್ಟಿಗೆ ಜೊತೆ ತುಂಬಾ ಕ್ಲೋಸ್ ಆಗಿದ್ದಾಳೆ. ಇವರಿಬ್ಬರ ನಡುವೆ ಉತ್ತಮ ಬಾಂಡಿಗ್ ಇದೆ. ಆರಾಧ್ಯಳನ್ನು ನೋಡಿ ಪ್ರೀತಿಯಿಂದ ಶ್ಲೋಕಾ ಅಪ್ಪಿಕೊಂಡು ಮುತ್ತಿಟ್ಟರು.
ಮದುವೆಯಲ್ಲಿ, ಐಶ್ವರ್ಯ ರೈ ಸಾಂಪ್ರದಾಯಿಕ ಕಡುಗೆಂಪು ಬಣ್ಣದ ಡ್ರೆಸ್ ಧರಿಸಿದ್ದರು. ಬೆಳ್ಳಿಯ ಮಾಂಗ್ ಟಿಕಾ, ಬಿಂದಿ ಮತ್ತು ಕುತ್ತಿಗೆಗೆ ಹಾರವನ್ನು ಧರಿಸಿದ್ದ ರೈ ತುಂಬಾ ಸುಂದರವಾಗಿ ಕಾಣುತ್ತಿದ್ದರು.
ಕುಟುಂಬದೊಂದಿಗೆ ಕಸಿನ್ ಮದುವೆಗೆ ತಲುಪಿದ ಐಶ್ವರ್ಯ ರೈ,ಮಗಳು ಆರಾಧ್ಯಳನ್ನು ಒಂದು ಕ್ಷಣವೂ ಒಂಟಿಯಾಗಿ ಬಿಡಲಿಲ್ಲ ಹಾಗೂ ಅಮ್ಮ ಮಗಳು ತುಂಬಾ ಸಂತೋಷದಿಂದ ಮದುವೆಯಲ್ಲಿ ಪಾಲ್ಗೊಂಡರು.
ವಿವಾಹವು ಸಂಪೂರ್ಣವಾಗಿ ದಕ್ಷಿಣ ಭಾರತೀಯ ಶೈಲಿಯಲ್ಲಿ, ಸಾಂಪ್ರದಾಯಿಕವಾಗಿತ್ತು ಮತ್ತು ಮದುವೆಯ ಪ್ರತಿ ಶಾಸ್ತ್ರದಲ್ಲಿಯೂ ಐಶ್ ಕೂಡ ಭಾಗವಹಿಸಿದ್ದರು. ಅಷ್ಟೇ ಅಲ್ಲ, ಪತಿ ಅಭಿಷೇಕ್ ಬಚ್ಚನ್ ಮತ್ತು ಮಗಳೊಂದಿಗೆ ಸಂಗೀತ್ ಸೆರೆಮನಿಯಲ್ಲಿ ಐಶ್ವರ್ಯಾ ಭರ್ಜರಿಯಾಗಿ ಡ್ಯಾನ್ಸ್ ಮಾಡಿದರು.
ಇನ್ನೊಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಇತ್ತೀಚಿನ ಫೋಟೋದಲ್ಲಿ ಆರಾಧ್ಯ ತುಂಬಾ ಎತ್ತರವಾಗಿ ಬೆಳೆದಿರುವುದು ನೋಡಬಹುದು. ಆರಾಧ್ಯ ಸಹ ಡ್ಯಾನ್ಸ್ ಅನ್ನು ತುಂಬಾ ಇಷ್ಟಪಡುತ್ತಾಳೆ ಮತ್ತು ಶಾಲೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಲೇ ಇರುತ್ತಾಳೆ.
ಐಶ್ವರ್ಯಾ ರೈ ಪ್ರಸ್ತುತ ದಕ್ಷಿಣದ 500 ಕೋಟಿ ಬಜೆಟ್ ಚಿತ್ರ ಪೊನ್ನಿಯಿನ್ ಸೆಲ್ವನ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ನಿರ್ದೇಶಕ ಮಣಿರತ್ನಂ ಅವರ ಈ ಸಿನಿಮಾದಲ್ಲಿ ಐಶ್ವರ್ಯಾ ರೈ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ನಟಿಸಲಿದ್ದಾರೆ ಅದೇ ಸಮಯದಲ್ಲಿ, ನಟಿ ಪ್ರಸ್ತುತ ಯಾವುದೇ ಬಾಲಿವುಡ್ ಚಲನಚಿತ್ರ ಆಫರ್ ಹೊಂದಿಲ್ಲ.
ಐಶ್ವರ್ಯಾ ಪತಿ, ಛೋಟಾ ಅಭಿಷೇಕ್ ಬಚ್ಚನ್ ಕೊನೆಯದಾಗಿ ಬಿಗ್ ಬೂಲ್ ಚಿತ್ರದಲ್ಲಿ ಕಾಣಿಸಿಕೊಂಡರು. ಈ ಚಿತ್ರವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲಾಗಿದೆ. ಇದಲ್ಲದೇ, ಅವರು ಬಾಸ್ ಬಿಸ್ವಾಸ್ ಮತ್ತು ದಾಸ್ವಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.