ಸಾಯಿ ಪಲ್ಲವಿ ಮದುವೆ ಯಾವಾಗ?: ವಿವಾಹದ ಬಗ್ಗೆ ಮೊದಲ ಬಾರಿಗೆ ಮಾತನಾಡಿದ ಸಹಜ ಸುಂದರಿ!
ಇತ್ತೀಚೆಗಷ್ಟೇ ನಟಿ ಕೀರ್ತಿ ಸುರೇಶ್ ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಈಗ ಮತ್ತೋರ್ವ ನಟಿ ಸಾಯಿ ಪಲ್ಲವಿಯವರ ಸರದಿ. ಈ ಸಹಜ ಸುಂದರಿಗೆ ಮದುವೆ ವಿಷಯದಲ್ಲಿ ಒತ್ತಡ ಹಾಕುತ್ತಿದ್ದಾರೆ. ಅವರು ಯಾರು ಗೊತ್ತಾ?. ಇಲ್ಲಿದೆ ನೋಡಿ ಉತ್ತರ.
ಎಲ್ಲಾ ಯುವ ನಟ, ನಟಿಯರು ಮದುವೆಯಾಗುವ ಮೂಲಕ ಏಕಾಂತ ಜೀವನಕ್ಕೆ ವಿದಾಯ ಹೇಳುತ್ತಿದ್ದಾರೆ. ಇತ್ತೀಚೆಗೆ ನಟಿ ಕೀರ್ತಿ ಸುರೇಶ್ ತಮ್ಮ ಬಾಲ್ಯದ ಗೆಳೆಯನನ್ನು ಮದುವೆಯಾಗಿ ಗೃಹಿಣಿಯಾಗಿದ್ದಾರೆ. ಕೀರ್ತಿ ಅವರಂತೆಯೇ ಇರುವ ಇತರ ನಟಿಯರ ಮದುವೆ ಯಾವಾಗ ಎಂದು ಎಲ್ಲರೂ ಕಾಯುತ್ತಿದ್ದಾರೆ.
ಕೀರ್ತಿ ಸುರೇಶ್ ಮದುವೆಯ ಬಗ್ಗೆ ಹಲವು ವದಂತಿಗಳಿದ್ದವು. ಮನೆಯಲ್ಲಿ ಮದುವೆಯಾಗಲು ಒತ್ತಾಯಿಸುತ್ತಿದ್ದಾರೆ, ಸಂಗೀತ ನಿರ್ದೇಶಕ ಅನಿರುದ್ಧ್ ಅವರನ್ನು ಪ್ರೀತಿಸುತ್ತಿದ್ದಾರೆ, ಕ್ರಿಕೆಟಿಗನೊಂದಿಗೆ ಮದುವೆ ಎಂಬ ವದಂತಿಗಳಿದ್ದವು. ಇದರಲ್ಲಿ ಎಷ್ಟು ಸತ್ಯವೋ ಗೊತ್ತಿಲ್ಲ, ಆದರೆ ಕುಟುಂಬದ ಒತ್ತಡ ನಿಜ ಎಂದು ತೋರುತ್ತದೆ. ಅದಕ್ಕಾಗಿಯೇ ಬ್ಯುಸಿ ನಟಿಯಾಗಿದ್ದರೂ ಸರಿಯಾದ ವಯಸ್ಸಿನಲ್ಲಿ ಮದುವೆಯಾಗಿದ್ದಾರೆ.
ಅಲ್ಲು ಅರ್ಜುನ್ ಬಂಧನದ ಹಿಂದೆ ರಾಜಕೀಯ ದ್ವೇಷವಿದೆಯಾ?: ಖ್ಯಾತ ರಾಜಕಾರಣಿಯ ಟ್ವೀಟ್ ವೈರಲ್
ಕೀರ್ತಿ ಮದುವೆಯಿಂದ ಮತ್ತೊಬ್ಬ ನಟಿ ಮೇಲೆ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ಅವರು ಸಾಯಿ ಪಲ್ಲವಿ. ಕೀರ್ತಿ ಸುರೇಶ್ ರಂತೆ ಸಾಯಿ ಪಲ್ಲವಿ ಮೇಲೂ ಮದುವೆ ಒತ್ತಡ ಹೆಚ್ಚಾಗುತ್ತಿದೆಯಂತೆ. ಇದರಲ್ಲಿ ಎಷ್ಟು ಸತ್ಯವೋ ಗೊತ್ತಿಲ್ಲ, ಆದರೆ...
ಪಾತ್ರಗಳಿಗೆ ಮಹತ್ವವಿದ್ದರೆ ಮಾತ್ರ ಸಾಯಿ ಪಲ್ಲವಿ ನಟಿಸುತ್ತಾರೆ. ನಾಯಕ ಪ್ರಧಾನ ಚಿತ್ರಗಳಲ್ಲಿ ನಟಿಸಲು ಅವರಿಗೆ ಇಷ್ಟವಿಲ್ಲ ಎಂಬ ಮಾತಿದೆ. ಸ್ಟಾರ್ ನಟರಿಂದ ಆಫರ್ ಬಂದರೂ ಕಥೆ ಇಷ್ಟವಾಗದಿದ್ದರೆ ತಿರಸ್ಕರಿಸಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಇದುವರೆಗೆ ಅತಿರೇಕದ ದೃಶ್ಯಗಳಲ್ಲಿ ನಟಿಸದ ನಟಿ ಯಾರು ಎಂದರೆ ಸಾಯಿ ಪಲ್ಲವಿ ಹೆಸರೇ ಮೊದಲು ನೆನಪಿಗೆ ಬರುತ್ತದೆ.
ಉತ್ತಮ ಕಥೆಗಳನ್ನು ಆಯ್ಕೆ ಮಾಡಿಕೊಂಡು ಸಾಯಿ ಪಲ್ಲವಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದಾರೆ. ಬಾಲಿವುಡ್‌ನಲ್ಲಿ ರಾಮಾಯಣ ಚಿತ್ರದಲ್ಲಿ ಸೀತೆಯಾಗಿ ನಟಿಸುತ್ತಿದ್ದಾರೆ. ಸೀತೆ ಪಾತ್ರ ಮಾಡುತ್ತಿದ್ದಾರೆ, ಆದರೆ ಮದುವೆ ಯಾವಾಗ ಎಂದು ಎಲ್ಲರೂ ಕೇಳುತ್ತಿದ್ದಾರೆ. ಸಾಯಿ ಪಲ್ಲವಿಗೆ ಮದುವೆಯಾಗಲು ಒತ್ತಾಯಿಸುತ್ತಿದ್ದಾರಂತೆ. ಯಾರು ಒತ್ತಾಯಿಸುತ್ತಿದ್ದಾರೆ?. ಸಂದರ್ಶನವೊಂದರಲ್ಲಿ ಸಾಯಿ ಪಲ್ಲವಿ ತಮ್ಮ ಮದುವೆಯ ಬಗ್ಗೆ ಮಾತನಾಡಿದ್ದಾರೆ. ತಮ್ಮ ಮದುವೆಯನ್ನು ತಮ್ಮ ಹೆತ್ತವರೇ ನೋಡಿಕೊಳ್ಳುತ್ತಾರೆ ಎಂದಿದ್ದಾರೆ. ಕೊರೊನಾ ಸಮಯದಲ್ಲಿ ಮನೆಯಲ್ಲಿದ್ದಾಗ ಹೆತ್ತವರು ಮದುವೆಯಾಗಲು ತುಂಬಾ ಒತ್ತಾಯಿಸಿದ್ದರು ಎಂದು ಹೇಳಿದ್ದಾರೆ.
ರಾಮ್ ಚರಣ್ ಹೊಸ ಸಿನಿಮಾದಲ್ಲಿ ನಟಿಸ್ತಾರಂತೆ ಬಾಲಿವುಡ್‌ನ ಭಾಯಿಜಾನ್?: ಶ್ರೀದೇವಿ ಮಗಳು ನಾಯಕಿ!
ಸಾಯಿ ಪಲ್ಲವಿಯ ಎಲ್ಲಾ ಸೋದರಿಯರಿಗೂ ಮದುವೆಯಾಗಿದೆ. ಸಾಯಿ ಪಲ್ಲವಿಗೆ ಇನ್ನೂ ಮದುವೆಯಾಗಿಲ್ಲ. ಕೊರೊನಾ ಒಳ್ಳೆಯ ಸಮಯ ಎಂದು ಮದುವೆಯಾಗಲು ಒತ್ತಾಯಿಸಿದ್ದರಂತೆ. ಆಗ ತಾನು ಇನ್ನೂ ಬಯಸಿದ್ದನ್ನು ಸಾಧಿಸಿಲ್ಲ, ಈಗ ಹೇಗೆ ಮದುವೆಯಾಗಲಿ ಎಂದು ವಾದಿಸಿದರಂತೆ. ಕೊರೊನಾ ಮುಗಿಯುವವರೆಗೂ ಈ ಒತ್ತಡ ತಪ್ಪಲಿಲ್ಲವಂತೆ. ನಂತರ ಚಿತ್ರಗಳ ಚಿತ್ರೀಕರಣದಲ್ಲಿ ಬ್ಯೂಸಿಯಾಗಿದ್ದರಿಂದ ಮದುವೆಯ ಪ್ರಸ್ತಾಪ ಬರಲಿಲ್ಲವಂತೆ. ತನ್ನ ಗುರಿ ತಲುಪುವವರೆಗೂ ಮದುವೆಯಾಗುವುದಿಲ್ಲ, ಮದುವೆಯಾದರೆ ಹೆತ್ತವರು ನೋಡಿದ ಹುಡುಗನನ್ನೇ ಮದುವೆಯಾಗುತ್ತೇನೆ ಎಂದಿದ್ದಾರೆ. ಕೀರ್ತಿ ಸುರೇಶ್ ಮದುವೆಯಾದ ನಂತರ ಸಾಯಿ ಪಲ್ಲವಿ ಮೇಲೆ ಮತ್ತೆ ಮದುವೆ ಒತ್ತಡ ಹೆಚ್ಚಾಗಬಹುದು ಎಂದು ಅಭಿಮಾನಿಗಳು ಭಾವಿಸುತ್ತಿದ್ದಾರೆ.