ಬಟನ್ ಹಾಕದ ಪ್ರಿಯಾ ವಾರಿಯರ್, ಈಗ ಅರ್ಧ ಬ್ಲೌಸ್ ತೊಟ್ಟು ಪೋಸ್ ಕೊಟ್ಟಿದ್ದಾರೆ!
ದಕ್ಷಿಣ ಭಾರತ ಸಿನಿಮಾ ಕ್ಷೇತ್ರದಲ್ಲಿ ಕಣ್ಸನ್ನೆಯಿಂದಲೇ ಪ್ರಸಿದ್ಧಿಯಾಗಿರುವ ಪ್ರಿಯಾ ವಾರಿಯರ್ ಸಾಮಾಜಿಕ ಜಾಲತಾಣದಲ್ಲಿ ದಸರಾ ಹಬ್ಬದ ನಿಮಿತ್ತ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ನೋಡಲು ಮಹಾರಾಣಿಯಂತೆ ಕಂಡರೂ ಅರ್ಧ ಬ್ಲೌಸ್ ತೊಟ್ಟು ಪೋಸ್ ಕೊಟ್ಟಿದ್ದಾರೆ. ಈ ಫೋಟೋ ನೋಡಿದ ನೆಟ್ಟಿಗರು ಸೆಕ್ಸಿ ಮೋಡ್ ಆನ್ ಆಗಿದೆಯಾ ಎಂದು ಪ್ರಶ್ನೆ ಮಾಡಿದ್ದಾರೆ.
ಪ್ರಿಯಾ ತನ್ನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವಿಜಯದಶಮಿ ಹಬ್ಬದ ಶುಭಾಶಯಗಳು ಎಂದು ಪೋಸ್ಟ್ ಮಾಡಿಕೊಂಡಿದ್ದಾರೆ. ಆದರೆ, ನೆಟ್ಟಿಗರು ಇದ್ಯಾವರ ರೀತಿಯಲ್ಲಿ ವಿಶ್ ಮಾಡ್ತಿದ್ದೀರಿ ಎಂದು ಕಿವಿ ಹಿಂಡಿದ್ದಾರೆ.
ಪ್ರಿಯಾ ವಾರಿಯರ್ ತನ್ನ ಮೊದಲ ಸಿನಿಮಾದಲ್ಲಿಯೇ ಕಣ್ಸನ್ನೆ ಮತ್ತು ಲಿಪ್ಲಾಕ್ ಮಾಡಿ ಪ್ರಸಿದ್ಧಿ ಪಡೆದು ರಾತ್ರೋ ರಾತ್ರಿ ಸ್ಟಾರ್ ಪಟ್ಟವನ್ನು ಗಿಟ್ಟಿಸಿದ್ದಳು. ಇದಾದ ನಂತರ ಸಿನಿಮಾ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಫುಲ್ ಆಕ್ಟಿವ್ ಆಗಿದ್ದಾಳೆ.
ದಸರಾ ಹಬ್ಬದ ಅಂಗವಾಗಿ ಮಹಾರಾಣಿಯಂತೆ ಮಿಂಚುವ ಉಡುಪಿನಲ್ಲಿ ಫೋಟೋಗೆ ಪೋಸ್ ನೀಡಿದ್ದು, ಅದರಲ್ಲಿ ತನ್ನ ಮುಕ್ಕಾಲು ಭಾಗ ಎದೆಯನ್ನು ಪ್ರದರ್ಶನ ಮಾಡಿದ್ದಾಳೆ.
ಇತ್ತೀಚೆಗೆ ನದಿಯ ನೀರಲ್ಲಿ ಮಿಂದೆದ್ದು ಬ್ಲೌಸ್ ಬಟನ್ ಹಾಕದೇ ಪೋಸ್ ಕೊಟ್ಟಿದ್ದ ಪ್ರಿಯಾ ವಾರಿಯರ್ ಈಗ ಎದೆಯ ಅರ್ಧ ಭಾಗಕ್ಕೆ ಬ್ಲೌಸ್ ಹಾಕಿ ಪೋಸ್ ಕೊಟ್ಟಿದ್ದಾರೆ.
ದಿಬ್ಬಣದ ಉಡುಪನ್ನು ಧರಿಸಿರುವ ಪ್ರಿಯಾ ವಾರಿಯರ್ ತುಂಬಾ ಹಾಟ್ ಆಗಿ ಕಾಣಿಸಿದ್ದಾರೆ. ಇದರಿಂದ ಫೋಟೋಗಳನ್ನು ಜೂಮ್ ಮಾಡಿ ನೋಡಿ ಲೈಕ್ ಕೊಡಿ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ಕಣ್ಸನ್ನೆ ವೀಡಿಯೋ ಮೂಲಕ ಸ್ಟಾರ್ ಆಗಿರುವ ನಟಿ ಪ್ರಿಯಾ ವಾರಿಯರ್, ನಂತರ ನಟಿಸಿದ ಸಿನಿಮಾಗಳು ಹೇಳಿಕೊಳ್ಳುವಷ್ಟು ಸಕ್ಸಸ್ ಕಂಡಿಲ್ಲ. ಬಾಕ್ಸ್ ಆಫೀಸ್ನಲ್ಲಿ ಈವರೆಗೂ ಸದ್ದು ಮಾಡಿಲ್ಲ.
ಸದ್ಯ ಪ್ರಿಯಾ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದು ದೊಡ್ಡ ಬ್ರೇಕ್ಗಾಗಿ ಕಾಯ್ತಿದ್ದಾರೆ. ಯಾವುದಾದರೂ ಒಂದು ಸಿನಿಮಾ ಬ್ರೇಕ್ ನೀಡಿದಲ್ಲಿ ದಕ್ಷಿಣ ಭಾರತದಲ್ಲಿ ಗಟ್ಟಿಯಾಗಿ ನೆಲೆಯೂರಲಿದ್ದಾರೆ.
ಪ್ರಿಯಾ ವಾರಿಯರ್ ನೋಡಲು ಮಹಾರಾಣಿಯಂತೆ ಕಂಡರೂ, ಅರ್ಧ ಬ್ಲೌಸ್ ತೊಟ್ಟು ಪೋಸ್ ಕೊಟ್ಟಿರುವ ಫೋಟೋ ನೋಡಿದ ನೆಟ್ಟಿಗರು ಸೆಕ್ಸಿ ಮೋಡ್ ಆನ್ ಆಗಿದೆಯಾ ಎಂದು ಪ್ರಶ್ನೆ ಮಾಡಿದ್ದಾರೆ.
ಇನ್ನು ಕೆಲವರು ಇದು ನಿಮ್ಮ ಸಾಂಪ್ರದಾಯಿಕ ಉಡುಪಿನಲ್ಲಿಯೇ ಅತ್ಯಾಕರ್ಷಕ ಉಡುಗೆಯಾಗಿದೆ. ಅತ್ಯಂತ ಸುಂದರವಾದ ಮತ್ತು ಕಾಂತಿಯುವಾಗಿ ಕಾಣುತ್ತಿದ್ದೀರಿ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.