ಹೈದರಾಬಾದ್ ನಿಜಾಮರ ಲುಕ್‌ನಲ್ಲಿ ಕಂಗೊಳಿಸಿದ ನಯನತಾರಾ; ಕೆಂಪು ಸೀರೆ-ಜ್ಯುವೆಲ್ಲರಿಯ ವಿಶೇಷತೆ ಇಲ್ಲಿದೆ
ಅದ್ದೂರಿ ವಿವಾಹ ಸಮಾರಂಭದಲ್ಲಿ ನಯನತಾರಾ ಸೀರೆ ಮತ್ತು ಜ್ಯುವೆಲ್ಲರಿ ಎಲ್ಲರ ಗಮನ ಸೆಳೆಯುತ್ತಿದೆ. ಕೆಂಪು ಬಣ್ಣದ ಸೀರೆ ಮತ್ತು ವಿಭಿನ್ನ ಜ್ಯುವೆಲ್ಲರಿಯಲ್ಲಿ ನಟಿ ನಯನತಾರಾ ಕಂಗೊಳಿಸುತ್ತಿದ್ದರು.
ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ ಮತ್ತು ವಿಘ್ನೇಶ್ ಸಿವನ್ ಮದುವೆ ಅದ್ದೂರಿಯಾಗಿ ನೆರವೇರಿತು. ಜೂನ್ 9ರಂದು ಮಹಾಬಲಿಪುರಂನಲ್ಲಿ ನಡೆದ ಅದ್ದೂರಿ ಮದುವೆ ಸಮಾರಂಭದಲ್ಲಿ ಗಣ್ಯಾತಿಗಣ್ಯರು ಹಾಜರಿದ್ದು ನವಜೋಡಿಗೆ ಶುಭಹಾರೈಸಿದ್ದರು.
ಅದ್ದೂರಿ ವಿವಾಹ ಸಮಾರಂಭದಲ್ಲಿ ನಯನತಾರಾ ಸೀರೆ ಮತ್ತು ಜ್ಯುವೆಲ್ಲರಿ ಎಲ್ಲರ ಗಮನ ಸೆಳೆಯುತ್ತಿದೆ. ಕೆಂಪು ಬಣ್ಣದ ಸೀರೆ ಮತ್ತು ವಿಭಿನ್ನ ಜ್ಯುವೆಲ್ಲರಿಯಲ್ಲಿ ನಟಿ ನಯನತಾರಾ ಕಂಗೊಳಿಸುತ್ತಿದ್ದರು.
ನಯನತಾರಾ ಮದುವೆಯ ಉಡುಗೆಯನ್ನು ಸಂಪೂರ್ಣವಾಗಿ ಡಿಸೈನ್ ಮಾಡಿದ್ದು ಖ್ಯಾತ ಡಿಸೈನರ್ ಜೇಡ್‌ನ ಮೋನಿಕಾ ಶಾ ಮತ್ತು ಕರಿಷ್ಮಾ ಸ್ವಾಲಿ. ಮದುವೆ ಡ್ರೆಸ್ ಹೀಗೆ ಇರಬೇಕೆಂದು ನಯನತಾರಾ ಅವರೇ ಖುದ್ದು ಹೇಳಿ ಮಾಡಿಸಿದ ಡಿಸೈನ್ ಇದಾಗಿದೆ. ಲೈಟ್‌ವೈಟ್ ಕೆಂಪು ಬಣ್ಣದ ಸೀರೆಗೆ ಅದೇ ಬಣ್ಣದ ಬಾರ್ಡರ್ ಕೂಡ ಇತ್ತು. ಸೀರೆಯಲ್ಲಿ ಅನೇಕ ವಿಶೇಷ ಡಿಸೈನ್ ಮಾಡಿಸಲಾಗಿತ್ತು.
ಮದುವೆ ಸೀರೆಯ ಮೇಲೆ ನಯನತಾರಾ ಮತ್ತು ವಿಘ್ನೇಶ್ ಹೆಸರನ್ನು ಬರೆಸಲಾಗಿದೆ. ಇನ್ನು ವಿಘ್ನೇಶ್ ಶಿವನ್ ಧರಿಸಿದ್ದ ಬಟ್ಟೆ ಬಗ್ಗೆ ಹೇಳುವುದಾದರೆ ವಿಘ್ನೇಶ್ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ದಾರೆ. ಬಿಳಿ ಮತ್ತು ಗೋಲ್ಡ್ ಬಣ್ಣದ ಕುರ್ತ , ಪಂಚೆ ಮತ್ತು ಶಾಲ್ ಧರಿಸಿದ್ದಾರೆ. ವಿಘ್ನೇಶ್ ಬಟ್ಟೆಯನ್ನು ಸಹ ಜೇಡ್ ವಿನ್ಯಾಸಕರು ವಿಶೇಷವಾಗಿ ಡಿಸೈನ್ ಮಾಡಿದ ಡ್ರೆಸ್ ಆಗಿತ್ತು. ಶಾಲ್‌ನಲ್ಲಿ ಏಕ್ ತಾರ್ ಎಂಬ್ರಾಯಿಡರಿ ಮಾಡಲಾಗಿದೆ.
ನಯನತಾರಾ ಮದುವೆಗೆ ಹೈದರಾಬಾದ್ ಟಚ್ ನೀಡಲಾಗಿತ್ತು. ಡ್ರೆಸ್ ಜೊತೆಗೆ ನಯನತಾರಾ ಧರಿಸಿದ್ದ ಜ್ಯುವೆಲ್ಲರಿ ಕೂಡ ಆಕರ್ಷಕವಾಗಿತ್ತು. ಬಹು ಎಳೆಯ ನೆಕ್ಲೆಸ್, ಮಾಂಗ್ ಟಿಕಾ, ದೊಡ್ಡದಾದ ಇಯರ್ ಸ್ಟಡ್ ಮತ್ತು ಬಳೆ ಧರಿಸಿದ್ದರು.
ಪ್ರಮುಖವಾಗಿ ಆಕರ್ಷಕವಾಗಿದ್ದು ನಯನತಾರಾ ಧರಿಸಿದ್ದ ಬಹು ಎಳೆಯ ಜ್ಯುವೆಲ್ಲರಿ. ಇದು ಹೈದರಾಬಾದ್ ಸಾಂಪ್ರದಾಯಿಕ ಜ್ಯುವೆಲ್ಲರಿಯಾಗಿದ್ದು ರಾಜಾ ಮನೆತನದವರು ಧರಿಸುವ ಸಟ್ಲಡಾ ಹಾರ್ ಆಗಿದೆ. ಏಳು ಎಳೆಯ ಈ ಜ್ಯುವೆಲ್ಲರಿಯನ್ನು ಮುತ್ತು, ವಜ್ರ ಮತ್ತು ವಿವಿದ ದುಬಾರಿ ಸ್ಟೋನ್‌ಗಳನ್ನು ಬಳಸಿ ಮಾಡಲಾಗಿದೆ. ಇದು ಹೈಜರಾಬಾದ್ ನಿಜಾಮರು ಮತ್ತು ನವಾಬಿ ಪರಂಪರೆಯಾಗಿದ್ದು ಇಂದಿಗೂ ಕ್ಲಾಸಿಕ್ ಆಗಿ ಉಳಿದಿದೆ.
ನಟಿ ದೀಪಿಕಾ ಪಡುಕೋಣೆ ಸಹ ತನ್ನ ಮೆಹಂದಿ ಶಾಸ್ತ್ರದಲ್ಲಿ ಸಟ್ಲಡಾ ಹಾರವನ್ನು ಧರಿಸಿದ್ದರು. ನಯನತಾರಾ ಮದುವೆ ಫೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆಕರ್ಷಕವಾದ ನಯನತಾರಾ ಮದುವೆ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.