ಯುವ ನಟಿ ಅನಿಕಾ ಶ್ರದ್ಧಾಂಜಲಿ ಪೋಸ್ಟರ್ ವೈರಲ್; ಅಭಿಮಾನಿಗಳು ಶಾಕ್
ಯುವ ನಟಿ ಅನಿಕಾ ಶ್ರದ್ಧಾಂಜಲಿ ಪೋಸ್ಟ್ ವೈರಲ್ ಆಗಿದ್ದು ಪೋಸ್ಟರ್ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ.
ಸಿನಿಮಾ ಸ್ಟಾರ್‌ಗಳ ಬಗ್ಗೆ ಅನೇಕ ಸುದ್ದಿಗಳು ಹರಿದಾಡುತ್ತಿರುತ್ತವೆ. ಸಾಮಾಜಿಕ ಜಾಲತಾಣದಲ್ಲಿ ಅನೇಕ ಗಾಸಿಪ್ ಗಳು ಬಹುಬೇಕ ವೈರಲ್ ಆಗುತ್ತದೆ. ಕೆಲವೊಮ್ಮೆ ಅತಿರೇಕಕ್ಕೆ ಹೋಗಿದ್ದು ಇದೆ. ಇದೀಗ ಯುವ ನಟಿ ಅನಿಕಾ ಸುರೇಂದ್ರನ್ ಅವರ ಬಗ್ಗೆ ಪೋಸ್ಟರ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅನಿಕಾ ಬಗ್ಗೆ ವೈರಲ್ ಆಗಿರುವ ಪೋಸ್ಟ್ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಅನಿಕಾಗೆ ಶ್ರದ್ದಾಂಜಲಿ ಸಲ್ಲಿಸಿ ಮಾಡಿರುವ ಪೋಸ್ಟರ್ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನು ನೋಡಿದ ಅಭಿಮಾನಿಗಳು ಒಮ್ಮೆ ಶಾಕ್ ಆಗಿದ್ದಾರೆ. ಬಳಿಕ ಅಸಲಿ ವಿಚಾರ ಗೊತ್ತಾಗಿ ನಿಟ್ಟುಸಿರು ಬಿಟ್ಟಿದ್ದಾರೆ.
ಬಾಲ ಕಲಾವಿದೆಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಅನಿಕಾ ಸೌತ್ ಸಿನಿಮಾರಂಗದಲ್ಲಿ ಖ್ಯಾತಿಗಳಿಸಿದ್ದಾರೆ. ತಮಿಳು ಸ್ಟಾರ್ ಅಜಿತ್ ನಟನೆಯ ‘ಯೆನ್ನೈ ಅರಿಂಧಾಲ್’ ಮತ್ತು ‘ವಿಶ್ವಾಸಮ್’ ಸಿನಿಮಾ ಮೂಲಕ ಅನಿಕಾ ಹೆಚ್ಚು ಗುರುತಿಸಿಕೊಂಡರು.
ಬಾಲನಟಿಯಾಗಿ ಫೇಮಸ್ ಆಗಿದ್ದ ಅನಿಕಾ ಇದೀಗ ನಾಯಕಿಯಾಗಿ ಮಿಂಚುತ್ತಿದ್ದಾರೆ. ತನ್ನ ಮೊದಲ ಸಿನಿಮಾದಲ್ಲೇ ಅವರು ಲಿಪ್ ಲಾಕ್ ಮಾಡಿ ಗಮನ ಸೆಳೆದಿದ್ದಾರೆ.
ಹಾಟ್ ದೃಶ್ಯಗಳ ಜೊತೆಗೆ ಅನಿಕಾ ಅವರ ಶ್ರದ್ಧಾಂಜಲಿ ಪೋಸ್ಟ್ ಕೂಡ ವೈರಲ್ ಆಗಿರುವುದು ಅನೇಕರ ಅಚ್ಚರಿಗೆ ಕಾರಣವಾಗಿದೆ. ಅಷ್ಟಕ್ಕೂ ಇದು ಸಿನಿಮಾ ಒಂದರ ದೃಶ್ಯ. ಬುಟ್ಟ ಬೊಮ್ಮಾ ಸಿನಿಮಾ ಪೋಸ್ಟರ್ ಇದಾಗೆ. ಈ ವಿಷಯ ಕೇಳಿ ಅಭಿಮಾನಿಗಳು ನಿರಾಳರಾಗಿದ್ದಾರೆ.
ಅನಿಕಾ ಸದ್ಯ ಓ ಮೈ ಡಾರ್ಲಿಂಗ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗಾಗಿ ಅನಿಕಾ ಬೋಲ್ಡ್ ದೃಶ್ಯಗಳಲ್ಲಿ ಮಿಂಚಿದ್ದಾರೆ. ಲಿಪ್‌ಲಾಕ್ ಮಾಡಿ ಗಮನ ಸೆಳೆದಿದ್ದಾರೆ. ಈ ದೃಶ್ಯ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.
ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ನಟಿ ಅನಿಕಾ ಸಾಕಷ್ಟು ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿ ಅನಿಕಾ ಬ್ಯುಸಿಯಾಗಿದ್ದಾರೆ.