- Home
- Entertainment
- Cine World
- ವಿದೇಶದಲ್ಲಿ ಮಗನ 18ನೇ ಬರ್ತಡೇ ಆಚರಿಸಿದ ಮಹೇಶ್ ಬಾಬು; ವೋಟ್ ಹಾಕೋ ಮೊದಲೇ ಐಷಾರಾಮಿ ಶೋಕಿ ಎಂದು ಕಾಲೆಳೆದ ನೆಟ್ಟಿಗರು!
ವಿದೇಶದಲ್ಲಿ ಮಗನ 18ನೇ ಬರ್ತಡೇ ಆಚರಿಸಿದ ಮಹೇಶ್ ಬಾಬು; ವೋಟ್ ಹಾಕೋ ಮೊದಲೇ ಐಷಾರಾಮಿ ಶೋಕಿ ಎಂದು ಕಾಲೆಳೆದ ನೆಟ್ಟಿಗರು!
ನ್ಯೂ ಯಾರ್ಕ್‌ನಲ್ಲಿ 18ನೇ ಹುಟ್ಟುಹಬ್ಬ ಆಚರಿಸಿಕೊಂಡ ಗೌತಮ್. ತಂದೆ ಮಾಡಿಟ್ಟಿದ್ದನ್ನು ಗುಳುಮ್ ಮಾಡಬೇಡ ಎಂದ ನೆಟ್ಟಿಗರು.......

ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಪುತ್ರ ಗೌತಮ್ 18ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ವಿದೇಶದ ಪ್ರವಾಸ ಮಾಡುತ್ತಿರುವ ಇವರು ಅಲ್ಲೇ ಸೆಲೆಬ್ರೇಟ್ ಮಾಡಿದ್ದಾರೆ.
ನ್ಯೂ ಯಾರ್ಕ್‌ನಲ್ಲಿ ಗೌತಮ್ ತಮ್ಮ ಫ್ಯಾಮಿಲಿ ಮತ್ತು ಸ್ನೇಹಿತರ ಜೊತೆ 18ನೇ ವರ್ಷ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವ ಫೋಟೋ ವೈರಲ್ ಆಗುತ್ತಿದೆ.
'ಕಳೆದ ರಾತ್ರಿ ನಡೆದ ಆಚರಣೆ...18 ವರ್ಷಗಳ ಲವಿಂಗ್ ಆಂಡ್ ಲೀವಿಂಗ್ ಸೆಲೆಬ್ರೇಷನ್' ಎಂದು ತಾಯಿ ನಟಿ ನಮ್ರತಾ ಶಿರೋಡ್ಕರ್ ಬರೆದುಕೊಂಡಿದ್ದಾರೆ.
'ಹ್ಯಾಪಿ 18ನೇ ಬರ್ತಡೇ ಮಗನೆ. ಎಕ್ಸಪ್ಲೋರ್ ಮಾಡು ಹಾಗೂ ನಿಮ್ಮ ಸಮಯವನ್ನು ಎಂಜಾಯ್ ಮಾಡು. ಇಂದು ನಾನು ಹೆಮ್ಮೆಯ ತಂದೆ' ಎಂದು ಮಹೇಶ್ ಬಾಬು ಬರೆದುಕೊಂಡಿದ್ದಾರೆ.
ಗೌತಮ್ ಮಾತ್ರವಲ್ಲ ಮಹೇಶ್ ಬಾಬು ಪುತ್ರಿ ಸಿತಾರಾ ಕೂಡ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದು. 21 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ.
ಅಪ್ಪ ಚೆನ್ನಾಗಿ ದುಡಿದು ಇಟ್ಟಿದ್ದಾರೆ ಅದಿಕ್ಕೆ ವಿದೇಶದಲ್ಲಿ ಆಚರಿಸಿಕೊಳ್ಳುತ್ತಿರುವುದು. ವೋಟ್ ಹಾಕುವ ವಯಸ್ಸು ಬರುತ್ತಿದ್ದಂತೆ ಈ ಶೋಕಿ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.