ಯಾವುದೇ ರಸ್ತೆಗೂ ಸೈ, ಇಲ್ಲಿದೆ 9.99 ಲಕ್ಷ ರೂನಿಂದ ಆರಂಭಗೊಳ್ಳುವ 17 ಇಂಚು ವ್ಹೀಲ್ ಕಾರು!
ಭಾರತದ ರಸ್ತೆಗಳಿಗೆ ಎಸ್ಯುವಿ ಕಾರುಗಳು ಹೆಚ್ಚು ಸೂಕ್ತ. ಹೆದ್ದಾರಿ ಇರಲಿ, ಆಫ್ ರೋಡ್ ಇರಲಿ ಯಾವುದೇ ಆತಂಕವಿಲ್ಲದೆ ಸಾಗಬಹುದು. ಭಾರತದಲ್ಲಿ 17 ಇಂಚಿನ ವ್ಹೀಲ್ ಮೂಲಕ ಗರಿಷ್ಟ ಗ್ರೌಂಡ್ ಕ್ಲಿಯರೆನ್ಸ್ ನೀಡುವ ಟಾಪ್ 5 ಕಾರು ಲಿಸ್ಟ್ ಇಲ್ಲಿದೆ.
ಭಾರತದಲ್ಲಿ ಎಸ್ಯುವಿ ಕಾರುಗಳಿಗೆ ಹೆಚ್ಚಿನ ಬೇಡಿಕೆ ಇದೆ. ಪ್ರಮುಖವಾಗಿ ಇಲ್ಲಿನ ರಸ್ತೆ, ಪ್ರದೇಶ, ಪ್ರಯಾಣದ ವೇಳೆ ಕೊಂಡೊಯ್ಯುವ ಲಗೇಜ್ ಸೇರಿದಂತೆ ಹಲವು ಕಾರಣಗಳಿಂದ ಗ್ರೌಂಡ್ ಕ್ಲಿಯರೆನ್ಸ್ ಹೆಚ್ಚಿರುವ ವಾಹನಗಳಿಗೆ ಬೇಡಿಕೆ ಹೆಚ್ಚು. ಈ ಪೈಕಿ ಎಸ್ಯುವಿ ಕಾರುಗಳೇ ಮುಂಚೂಣಿಯಲ್ಲಿದೆ.
ಎಲ್ಲಾ ರಸ್ತೆಗೂ ಸೈ ಎನಿಸಿಕೊಂಡು ಆರಾಮಾದಾಯಕ ಪ್ರಯಾಣ ನೀಡಬಲ್ಲ ಹಲವು ಕಾರುಗಳು ಭಾರತದಲ್ಲಿ ಲಭ್ಯವಿದೆ. 17 ಇಂಚಿನ ವ್ಹೀಲ್ ಜೊತೆಗೆ ಕೈಗೆಟುಕುವ ದರದಲ್ಲಿ ಲಭ್ಯವಿರುವ ಕಾರುಗಳ ಪಟ್ಟಿ ಇಲ್ಲಿದೆ.
ಇತ್ತೀಚೆಗೆ ಭಾರಿ ಬೇಡಿಕೆ ಪಡೆದುಕೊಂಡಿರುವ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರ ಕಾರು 17 ಇಂಚಿನ್ ವ್ಹೀಲ್ ಹೊಂದಿದೆ. ಜೆಟಾ ವೇರಿಯೆಂಟ್ ಕಾರಿನ ಬೆಲೆ 13.91 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
ಭಾರತದಲ್ಲಿ ಅತೀ ಕಡಿಮೆ ಅವಧಿಯಲ್ಲಿ ಮಾರಾಟದಲ್ಲಿ ದಾಖಲೆ ಬರೆದ ಕಿಯಾ ಸೆಲ್ಟೋಸ್ HTX ವೇರಿಯೆಂಟ್ ಕಾರು 17 ಇಂಚಿನ ವ್ಹೀಲ್ ಹೊಂದಿದೆ. ೀ ಕಾರಿನ ಬೆಲೆ 15.17 ಲಕ್ಷ ರೂ(ಎಕ್ಸ್ ಶೋ ರೂಂ)
ಎಂಜಿ ಮೋಟಾರ್ಸ್ ಭಾರತದಲ್ಲಿ ಹೆಕ್ಟರ್ ಸೇರಿದಂತೆ ಇತರ ಕೆಲ ಮಾಡೆಲ್ ಕಾರು ಬಿಡುಗಡೆ ಮಾಡಿದೆ. ಈ ಪೈಕಿ ಎಸ್ಟರ್ ಶೈನ್ ವೇರಿಯೆಂಟ್ ಕಾರು 17 ಇಂಚಿನ ವ್ಹೀಲ್ ಹೊಂದಿದೆ. ಈ ಕಾರಿನ ಬೆಲೆ 11.68 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
ಕ್ರಾಸ್ ಬ್ಯಾಡ್ಜಿಂಗ್ ಮೂಲಕ ಟೊಯೋಟಾ ಬ್ರ್ಯಾಂಡ್ ಅರ್ಬನ್ ಕ್ರೂಸರ್ ಹೈರೈಡರ್ ವಿ ಕಾರು ಬಿಡುಗಡೆ ಮಾಡಿದೆ. 17 ಇಂಚಿನ ಅಲೋಯ್ ವ್ಹೀಲ್ ಹೊಂದಿರುವ ಈ ಕಾರಿನ ಬೆಲೆ 14.49 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
ಫ್ರೆಂಚ್ ಆಟೋಮೊಬೈಲ್ ಕಂಪನಿ ಸಿಟ್ರೋಯೆನ್ ಭಾರತದಲ್ಲಿ ಕೆಲ ಕಾರುಗಳನ್ನು ಬಿಡುಗಡೆ ಮಾಡಿದೆ. ಈ ಪೈಕಿ ಸಿಟ್ರೊಯೆನ್ ಸಿ3 ಕಾರು 17 ಇಂಚಿನ ವ್ಹೀಲ್ ಹೊಂದಿದೆ. ಈ ಕಾರಿನ ಬೆಲೆ 9.99 ಲಕ್ಷ ರೂಪಾಯಿ.
ಈ ಟಾಪ್ 5 ಕಾರುಗಳು ಭಾರತದಲ್ಲಿ ಬಹುಬೇಡಿಕೆಯ ಕಾರಾಗಿ ಹೊರಹೊಮ್ಮಿದೆ. ಇದನ್ನು ಹೊರತುಪಡಿಸಿ ಇನ್ನೂ ಕೆಲ ಕಾರುಗಳು 17 ಇಂಚಿನ ವ್ಹೀಲ್ ಹೊಂದಿದೆ.