ಮತ್ತೆ ಬರುತ್ತಿದೆ ಟಾಟಾ ಸುಮೋ, ಹೊಸ ಫೀಚರ್ಸ್ 28 ಕಿ.ಮಿ ಮೈಲೇಜ್, ಕೈಗೆಟುಕುವ ದರ!
ಟಾಟಾ ಸುಮೋ ಕಾರು ಭಾರತದಲ್ಲಿ ಭಾರಿ ಸಂಚಲನ ಸೃಷ್ಟಿಸಿದ ಕಾರು. ಈಗಲೂ ಹಲವು ಸಿನಿಮಾಗಳಲ್ಲಿ ಟಾಟಾ ಸುಮೋ ಸೀನ್ ಇಲ್ಲದೆ ಪೂರ್ಣಗೊಳ್ಳುವುದಿಲ್ಲ. ಇದೀಗ ಟಾಟಾ ತನ್ನ ಜಪ್ರಿಯ ಸುಮೋ ಕಾರನ್ನು ಮತ್ತೆ ಬಿಡುಗಡೆ ಮಾಡುತ್ತಿದೆ. ಹೊಸ ವಿನ್ಯಾಸ, ಹೊಸ ಎಂಜಿನ್. ಫೀಚರ್ಸ್, 28 ಕಿ.ಮೀ ಮೈಲೇಜ್ ಸೇರಿದಂತೆ ಹಲವು ವಿಶೇಷತೆಗಳು ಈ ಕಾರಿನಲ್ಲಿರಲಿದೆ.

ಟಾಟಾ ಸುಮೊ 2025
ಟಾಟಾ ಸುಮೊ 2025 : ದ್ವಿಚಕ್ರವಾಹನಗಳಂತೆ ಪೈಪೋಟಿ ಬಿದ್ದಿರುವ ಕಂಪನಿಗಳು ಹೊಸ ಹೊಸ ಕಾರುಗಳನ್ನು ರಸ್ತೆಗಿಳಿಸುತ್ತಿದೆ. ಹಲವಾರು ಕಂಪನಿಗಳಿಂದ ನೂರಾರು ಮಾಡೆಲ್‌ಗಳು, ಸಾವಿರಾರು ಕಾರುಗಳು ಮಾರುಕಟ್ಟೆಗೆ ಬರುತ್ತಿವೆ. ಆಟೋಮೊಬೈಲ್ ಕ್ಷೇತ್ರದಲ್ಲಿ ಈಗ ಪೈಪೋಟಿ ಹೆಚ್ಚಾಗಿದೆ... ಹೀಗಾಗಿ ಕಡಿಮೆ ಬೆಲೆಗೆ ಉತ್ತಮ ಫೀಚರ್‌ಗಳೊಂದಿಗೆ ವಾಹನಗಳು ಬರುತ್ತಿವೆ. ಹಾಗೆಯೇ ಹಿಂದೆ ಯಶಸ್ವಿಯಾಗಿದ್ದ ವಾಹನಗಳನ್ನು ಹೊಸ ಫೀಚರ್‌ಗಳೊಂದಿಗೆ ಮಾರುಕಟ್ಟೆಗೆ ತರಲಾಗುತ್ತಿದೆ. ಹೀಗೆ ಇದೀಗ ಆಟೋಮೊಬೈಲ್ ದೈತ್ಯ ಟಾಟಾ ಕೂಡ ಹೊಸ ಫೀಚರ್‌ಗಳೊಂದಿಗೆ ಹಳೆಯ ಮಾಡೆಲ್ ಬಿಡುಗಡೆ ಮಾಡಲು ಮುಂದಾಗಿದೆ.
ಕಡಿಮೆ ಬೆಲೆಗೆ ಅತ್ಯಾಧುನಿಕ ಫೀಚರ್‌ಗಳೊಂದಿಗೆ ಮತ್ತೊಮ್ಮೆ ಟಾಟಾ ಸುಮೊ ರಸ್ತೆಗಿಳಿಯಲಿದೆ. ಒಂದು ಕಾಲದಲ್ಲಿ ಆಟೋ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದ ಈ ವಾಹನ SUVಯ ಮೊದಲ ಆವೃತ್ತಿ ಎನ್ನಬಹುದು. ಈಗ ಮತ್ತೊಮ್ಮೆ ಮಾರುಕಟ್ಟೆಯನ್ನು ಅಲುಗಾಡಿಸಲು ಟಾಟಾ ಸುಮೊ ಸಿದ್ಧವಾಗಿದೆ. ಶೀಘ್ರದಲ್ಲೇ ಇದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಟಾಟಾ ಕಂಪನಿ ಸಿದ್ಧವಾಗಿದೆ.
ಹೊಸ ಟಾಟಾ ಸುಮೊ ಬಗ್ಗೆ ನಿರೀಕ್ಷೆಗಳು :
ಟಾಟಾ ಸುಮೊ ಭಾರತೀಯ ಮಾರುಕಟ್ಟೆಯಲ್ಲಿ SUV ಕಾರುಗಳಿಗೆ ಹೊಸ ಅರ್ಥವನ್ನು ನೀಡಿತು. ವೈಯಕ್ತಿಕ ಬಳಕೆಯಿಂದ ಆಸ್ಪತ್ರೆ, ಶಾಲಾ ವಾಹನಗಳವರೆಗೆ ಸುಮೊ ದೀರ್ಘಕಾಲ ರಸ್ತೆಗಳಲ್ಲಿ ರಾರಾಜಿಸಿತು. ಆದರೆ ಆಟೋಮೊಬೈಲ್ ಕ್ಷೇತ್ರದಲ್ಲಿನ ಕ್ರಾಂತಿಕಾರಿ ಬದಲಾವಣೆಗಳಿಂದಾಗಿ ಇದು ಹಿಂದುಳಿಯಿತು. ಆದರೆ ಈ ಟಾಟಾ ಸುಮೊ ಇನ್ನೂ ಅನೇಕರಿಗೆ ಸ್ಮರಣೀಯ ನೆನಪು ಕಟ್ಟಿಕೊಟ್ಟಿದೆ.
ಟಾಟಾ ಸುಮೊ ಕ್ರೇಜ್‌ಅನ್ನು ಗಮನದಲ್ಲಿಟ್ಟುಕೊಂಡು ಮತ್ತೊಮ್ಮೆ ಇವುಗಳನ್ನು ಮಾರುಕಟ್ಟೆಗೆ ತರಲು ಸಿದ್ಧರಾಗಿದ್ದಾರೆ. ಈಗಾಗಲೇ ಹೊಸ ಫೀಚರ್‌ಗಳೊಂದಿಗೆ ಹೊಸ ಮಾದರಿಗಳನ್ನು ಸಿದ್ಧಪಡಿಸಿದೆ ಟಾಟಾ. ಇತ್ತೀಚೆಗೆ ದೇಶದ ರಾಜಧಾನಿ ದೆಹಲಿಯಲ್ಲಿ ನಡೆದ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 ರಲ್ಲಿ ಇದನ್ನು ಪ್ರದರ್ಶಿಸಲಾಯಿತು.
ಟಾಟಾ ಸುಮೊ ಹೊಸ ಲುಕ್ ಅದ್ಭುತವಾಗಿದೆ. ಹಾಗೆಯೇ ಅದರಲ್ಲಿರುವ ಫೀಚರ್‌ಗಳು ಕೂಡ ಆಕರ್ಷಕವಾಗಿವೆ. ಹೀಗಾಗಿ ಇದು ಯಾವಾಗ ಮಾರುಕಟ್ಟೆಗೆ ಬರುತ್ತದೆ ಎಂದು ಕಾತುರದಿಂದ ಕಾಯುತ್ತಿದ್ದಾರೆ ಗ್ರಾಹಕರು. ಈ ವಾಹನವನ್ನು ನೋಡಿದರೆ ಹಿಂದಿನಂತೆ ಮತ್ತೆ ಆಟೋ ಕ್ಷೇತ್ರವನ್ನು ಅಲುಗಾಡಿಸುವಂತೆ ಕಾಣುತ್ತಿದೆ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಿದ್ದಾರೆ.
ಟಾಟಾ ಸುಮೊ ಹೊಸ ಫೀಚರ್ಸ್ :
ಟಾಟಾ ಸುಮೊ ಹಿಂದಿನಂತೆಯೇ ಬಾಕ್ಸಿ ಲುಕ್‌ನೊಂದಿಗೆ ಬರುತ್ತಿದೆ. ಆದರೆ ವಿನ್ಯಾಸ ಮಾತ್ರ ಆಕರ್ಷಕವಾಗಿದೆ... ಹಳೆಯ ಸುಮೊಗೆ ಆಧುನಿಕ ಸ್ಪರ್ಶ ನೀಡಿ ಹೊಸದಾಗಿ ವಿನ್ಯಾಸಗೊಳಿಸಲಾಗಿದೆ. ಮುಂಭಾಗದ ಲುಕ್ ರಾಯಲ್ ಆಗಿದೆ... LED ಹೆಡ್‌ಲೈಟ್‌ಗಳು, ಬಂಪರ್ ಸುಮೊ ಲುಕ್‌ಅನ್ನು ಇನ್ನಷ್ಟು ಅದ್ಭುತವಾಗಿಸಿವೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ ದೊಡ್ಡ ದೊಡ್ಡ SUVಗಳಂತೆ ಟ್ರೆಂಡಿ ಆಗಿ ಕಾಣುತ್ತಿದೆ.
ಇನ್ನು ಈ ಟಾಟಾ ಸುಮೊ ಲುಕ್ ಕೂಡ ಅದ್ಭುತವಾಗಿದೆ. ದೊಡ್ಡ ದೊಡ್ಡ ಬಾಗಿಲುಗಳು, ವಿಂಡೋ, ವೀಲ್ ಆರ್ಚ್ ಕಣ್ಣಿಗೆ ಹಬ್ಬವನ್ನುಂಟುಮಾಡಲಿವೆ. ಹಾಗೆಯೇ ಸುಮೊ ಟ್ರೇಡ್ ಮಾರ್ಕ್ ಹಿಂಭಾಗದ ಲುಕ್ ಹೊಂದಿದೆ. ಹೀಗೆ ಯಾವ ದಿಕ್ಕಿನಿಂದ ನೋಡಿದರೂ ಈ ಹೊಸ ಟಾಟಾ ಸುಮೊ ಲುಕ್ ಅದ್ಭುತವಾಗಿದೆ.
ಹೊಸ ಸುಮೊ ಹಿಂದಿನದಕ್ಕಿಂತ ದೊಡ್ಡದಾಗಿರುತ್ತದೆ ಎಂದು ಭಾವಿಸಲಾಗಿದೆ. ಆಟೋ ಕ್ಷೇತ್ರದಲ್ಲಿರುವ ಪ್ರಚಾರದ ಪ್ರಕಾರ ಇದರ ಉದ್ದ 4400mm, ಅಗಲ 1780mm, ಎತ್ತರ 1785mm, ವೀಲ್‌ಬೇಸ್ ಸುಮಾರು 2750mm ಇರುತ್ತದೆ ಎಂದು ತಿಳಿದುಬಂದಿದೆ. ಹಾಗೆಯೇ ಗ್ರೌಂಡ್ ಕ್ಲಿಯರೆನ್ಸ್ ಸುಮಾರು 200mm ಇರುತ್ತದೆ ಎಂದು... ಇದು ಭಾರತೀಯ ರಸ್ತೆಗಳಲ್ಲಿ ಪ್ರಯಾಣಿಸಲು ಸುಲಭವಾಗುತ್ತದೆ.
ಹೊಸ ಟಾಟಾ ಸುಮೊ ಒಳಭಾಗಕ್ಕೆ ಬಂದರೆ ಚಾಲಕ ಸೇರಿ ಎಂಟು ಸೀಟುಗಳೊಂದಿಗೆ ಬರುತ್ತಿದೆ. ಸೀಟುಗಳು ಹಿಂದಿನಂತೆ ಇಲ್ಲದೆ ಇನ್ನಷ್ಟು ಆರಾಮದಾಯಕವಾಗಿರುವಂತೆ ವಿನ್ಯಾಸಗೊಳಿಸಲಾಗಿದೆ. ಡ್ಯಾಶ್‌ಬೋರ್ಡ್ ಕೂಡ ಚಾಲಕನಿಗೆ ಉಪಯುಕ್ತವಾದ ಟಚ್ ಬಟನ್‌ಗಳೊಂದಿಗೆ ಬರುತ್ತದೆ ಎಂದು ಹೇಳಲಾಗುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನದ ಟಚ್ ಸ್ಕ್ರೀನ್ ಅನ್ನು ಇದರಲ್ಲಿ ಅಳವಡಿಸಲಾಗಿದೆ ಎಂದು ತಿಳಿದುಬಂದಿದೆ.
ಟಾಟಾ ಸುಮೊ ದೂರದ ಪ್ರಯಾಣಗಳಿಗೆ ಬಳಸುವ ವಾಹನ. ಆದ್ದರಿಂದ ಲಗೇಜ್ ಹೆಚ್ಚು ಹಿಡಿಯುವಂತೆ ಬೂಟ್ ಸ್ಪೇಸ್ ಇರುತ್ತದೆ. ಸುಮಾರು 300 ಲೀಟರ್ ಬೂಟ್ ಸ್ಪೇಸ್ ಇರುತ್ತದೆ ಎಂದು ಅಂದಾಜಿಸಲಾಗಿದೆ... ಸೀಟುಗಳನ್ನು ಮಡಿಸುವ ಮೂಲಕ ಇದನ್ನು 700 ಲೀಟರ್‌ಗಳಿಗೆ ಹೆಚ್ಚಿಸಬಹುದು. ಇನ್ನು ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಕಾರು ಸಂಪೂರ್ಣವಾಗಿ ತಂಪಾಗಿಸುವ AC ಹೊಂದಿದೆ ಈ ಹೊಸ ಟಾಟಾ ಸುಮೊ.
ಇನ್ನು ಈ ಟಾಟಾ ಸುಮೊ ಎಂಜಿನ್‌ನಲ್ಲಿಯೂ ಬದಲಾವಣೆಗಳನ್ನು ಮಾಡಲಾಗಿದೆ. ಹಳೆಯ ಎಂಜಿನ್‌ಅನ್ನು ಸಂಪೂರ್ಣವಾಗಿ ಬದಲಾಯಿಸಿ ಹೊಸ ತಂತ್ರಜ್ಞಾನದ ಎಂಜಿನ್‌ಅನ್ನು ವಿನ್ಯಾಸಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಎಂಜಿನ್ ಬಗ್ಗೆ ಚಿಂತಿಸಬೇಕಾಗಿಲ್ಲ ಎಂದು ಟಾಟಾ ಕಂಪನಿ ಹೇಳುತ್ತಿದೆ.
ಟಾಟಾ ಸುಮೊ 2025
ಮೈಲೇಜ್, ಬೆಲೆ :
ಹೊಸ ಟಾಟಾ ಸುಮೊ ಮೂರು ವೇರಿಯಂಟ್‌ಗಳಲ್ಲಿ ಲಭ್ಯವಾಗಲಿದೆ. ಡೀಸೆಲ್ ಆದರೆ ಲೀಟರ್‌ಗೆ 15-17 ಕಿ.ಮೀ, ಪೆಟ್ರೋಲ್ ಆದರೆ ಲೀಟರ್‌ಗೆ 13-15 ಕಿ.ಮೀ, CNG ಆದರೆ ಕೆಜಿಗೆ 25-28 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ ಎಂದು ಅಂದಾಜಿಸಲಾಗಿದೆ.
ಟಾಟಾ ಕಂಪನಿ ಇಲ್ಲಿಯವರೆಗೆ ಹೊಸ ಸುಮೊ ಬೆಲೆಯನ್ನು ಬಹಿರಂಗಪಡಿಸಿಲ್ಲ. ಆದರೆ ಆಟೋ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಪ್ರಚಾರದ ಪ್ರಕಾರ ಬೇಸಿಕ್ ಮಾಡೆಲ್ ಬೆಲೆ ರೂ.12 ರಿಂದ ರೂ.17 ಲಕ್ಷದೊಳಗೆ ಇರುವ ಸಾಧ್ಯತೆ ಇದೆ.