ಬರೋಬ್ಬರಿ 627 ಕಿ.ಮಿ ಮೈಲೇಜ್, ಕೈಗೆಟುಕುವ ದರದ ಟಾಟಾ ಹ್ಯಾರಿಯರ್ ಇವಿ ಬೆಲೆ ಘೋಷಣೆ
ಟಾಟಾ ಮೋಟಾರ್ಸ್ ಬ್ರ್ಯಾಂಡ್‌ನ ಹ್ಯಾರಿಯರ್ ಇವಿ ಈಗಾಗಲೇ ಬಿಡುಗಡೆಯಾಗಿದೆ. ಇದೀಗ ಇದರ ಬೆಲೆ ಘೋಷಣೆಯಾಗಿದೆ. ಕೈಗೆಟುಕುವ ದರದ ಈ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ ಬರೋಬ್ಬರಿ 627 ಕಿಲೋಮೀಟರ್ ಮೈಲೇಜ್ ನೀಡಲಿದೆ.

ಟಾಟಾ ಮೋಟಾರ್ಸ್ ಇತ್ತೀಚೆಗೆ ತಮ್ಮ ಹೊಸ ಎಲೆಕ್ಟ್ರಿಕ್ SUV, ಟಾಟಾ ಹ್ಯಾರಿಯರ್ EVಯನ್ನು ಬಿಡುಗಡೆ ಮಾಡಿತ್ತು. ಇದೀಗ ಟಾಟಾ ಹ್ಯಾರಿ ಇವಿ RWD ವೆರಿಯೆಂಟ್ ಕಾರಿನ ಬೆಲೆಗಳನ್ನು ಬಿಡುಗಡೆ ಮಾಡಲಾಗಿದೆ. ಒಂದು ಬಾರಿ ಚಾರ್ಜ್ ಮಾಡಿದರೆ ಬರೋಬ್ಬರಿ 627 ಕಿಲೋಮೀಟರ್ ಮೈಲೇಜ್ ರೇಂಜ್ ನೀಡಬಲ್ಲ ಈ ಕಾರಿನ ಆರಂಭಿಕ ಬೆಲೆ 21.49 ಲಕ್ಷ ರೂಪಾಯಿ ಮಾತ್ರ. ಇನ್ನು ಜುಲೈ 2, 2025 ರಿಂದ ಅಧಿಕೃತ ಬುಕಿಂಗ್‌ಗಳು ಆರಂಭವಾಗಲಿವೆ. ಕ್ವಾಡ್ ವೀಲ್ ಡ್ರೈವ್ (QWD) ರೂಪಾಂತರದ ಬೆಲೆಗಳನ್ನು ಜೂನ್ 27 ರಂದು ಘೋಷಿಸಲಾಗುತ್ತಿದೆ.
ಟಾಟಾ ಹ್ಯಾರಿಯರ್ ಇವಿ RWD ವೇರಿಯೆಂಟ್ ಬೆಲೆ
ಟಾಟಾ ಹ್ಯಾರಿಯರ್ ಇವಿ ಅಡ್ವೆಂಚರ್ 65 : ರೂಪಾಯಿ 21.49 ಲಕ್ಷ
ಟಾಟಾ ಹ್ಯಾರಿಯರ್ ಇವಿ ಅಡ್ವೆಂಚರ್ S 65:ರೂಪಾಯಿ 21.99 ಲಕ್ಷ
ಟಾಟಾ ಹ್ಯಾರಿಯರ್ ಇವಿ ಫೀಯರ್‌ಲೆಸ್ + 65:ರೂಪಾಯಿ 23.99 ಲಕ್ಷ
ಟಾಟಾ ಹ್ಯಾರಿಯರ್ ಇವಿ ಫೀಯರ್‌ಲೆಸ್ + 75:ರೂಪಾಯಿ 24.99 ಲಕ್ಷ
ಟಾಟಾ ಹ್ಯಾರಿಯರ್ ಇವಿ ಎಂಪವರ್ಡ್ 75 :ರೂಪಾಯಿ 27.49 ಲಕ್ಷ
ಹ್ಯಾರಿಯರ್ ಇವಿ ಕಾರು ಡೀಸೆಲ್ ರೂಪಾಂತರದಂತೆಯೇ DRL ಮತ್ತು ಹೆಡ್‌ಲ್ಯಾಂಪ್‌ಗಳಿವೆ. ಆದರೆ ಹೊಸ ಗ್ರಿಲ್ ಮತ್ತು ಬಂಪರ್ ಇದಕ್ಕೆ ವಿಶಿಷ್ಟ ನೋಟ ನೀಡುತ್ತದೆ. ಹೊರಭಾಗದಲ್ಲಿ ತೀಕ್ಷ್ಣವಾದ ಮಡಿಕೆಗಳು ಮತ್ತು ಸ್ವಚ್ಛವಾದ ರೇಖೆಗಳಿವೆ. LED DRL ಸ್ಟ್ರಿಪ್ ಇದನ್ನು ಇನ್ನಷ್ಟು ಆಕರ್ಷಕವಾಗಿಸುತ್ತದೆ. ಈ ವಿಭಾಗದಲ್ಲಿ ಮೊದಲ ಬಾರಿಗೆ 14.53 ಇಂಚಿನ QLED ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಾಲ್ಬಿ ಅಟ್ಮಾಸ್‌ನೊಂದಿಗೆ 10-ಸ್ಪೀಕರ್ JBL ಬ್ಲ್ಯಾಕ್ ಸೌಂಡ್ ಸಿಸ್ಟಮ್ ಇದೆ. ಫ್ರೀಕ್ವೆನ್ಸಿ ಡಿಪೆಂಡೆಂಟ್ ಡ್ಯಾಂಪಿಂಗ್ ತಂತ್ರಜ್ಞಾನದೊಂದಿಗೆ ಸಸ್ಪೆನ್ಷನ್ ಸೆಟಪ್ ಕೂಡ ಇದೆ. ಇ-ವ್ಯಾಲೆಟ್ ಆಟೋ ಪಾರ್ಕ್ ಅಸಿಸ್ಟ್, ಡಿಜಿಟಲ್ ಕೀ (ಡಿಜಿ ಆಕ್ಸೆಸ್), ಟಾಟಾ ಡ್ರೈವ್‌ಪೇ ಇಂಟರ್ಫೇಸ್ ಮುಂತಾದ ವೈಶಿಷ್ಟ್ಯಗಳಿವೆ.
ಎಲೆಕ್ಟ್ರಿಕ್ ಹ್ಯಾರಿಯರ್‌ನ ಬ್ಯಾಟರಿ ವಿಶೇಷಣಗಳು ರೂಪಾಂತರಗಳಿಗೆ ಅನುಗುಣವಾಗಿ ಬದಲಾಗುತ್ತವೆ. 65kWh ಮತ್ತು 75kWh ಬ್ಯಾಟರಿ ಪ್ಯಾಕ್‌ಗಳ ಆಯ್ಕೆ ಲಭ್ಯವಿದೆ. ಬೇಸ್ ರೂಪಾಂತರವು 65 kWh ಬ್ಯಾಟರಿ ಪ್ಯಾಕ್ ಮತ್ತು 238 PS ಎಲೆಕ್ಟ್ರಿಕ್ ಮೋಟಾರ್ ಹೊಂದಿದೆ. ಉನ್ನತ ರೂಪಾಂತರವು ಡ್ಯುಯಲ್-ಮೋಟಾರ್ ಸೆಟಪ್ ಹೊಂದಿದ್ದು, ಮುಂಭಾಗದ ಚಕ್ರದ ಮೋಟಾರ್ 158 PS ಶಕ್ತಿಯನ್ನು ನೀಡುತ್ತದೆ. ಒಟ್ಟಾರೆಯಾಗಿ 504 Nm ಟಾರ್ಕ್ ಉತ್ಪಾದಿಸುತ್ತದೆ. 6.3 ಸೆಕೆಂಡುಗಳಲ್ಲಿ 0-100 kmph ವೇಗವನ್ನು ತಲುಪಬಹುದು.
75kWh ಬ್ಯಾಟರಿ ಪ್ಯಾಕ್ ಒಂದೇ ಚಾರ್ಜ್‌ನಲ್ಲಿ 627 ಕಿ.ಮೀ. ವ್ಯಾಪ್ತಿಯನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ವಾಸ್ತವದಲ್ಲಿ, 480-505 ಕಿ.ಮೀ. ವ್ಯಾಪ್ತಿ ನಿರೀಕ್ಷಿಸಬಹುದು. 120 kW DC ಫಾಸ್ಟ್ ಚಾರ್ಜಿಂಗ್ ಬೆಂಬಲಿತವಾಗಿದ್ದು, 25 ನಿಮಿಷಗಳಲ್ಲಿ 20-80% ಚಾರ್ಜ್ ಆಗುತ್ತದೆ. 15 ನಿಮಿಷಗಳಲ್ಲಿ 250 ಕಿ.ಮೀ. ವ್ಯಾಪ್ತಿ ಪಡೆಯಬಹುದು.ಹ್ಯಾರಿಯರ್ EV ಬ್ಯಾಟರಿಗೆ ಜೀವಿತಾವಧಿ ವಾರಂಟಿ ನೀಡಲಾಗಿದೆ. ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್, ಮಹೀಂದ್ರ XUV9e, ಮತ್ತು BE.06 ನಂತಹ ಮಾದರಿಗಳೊಂದಿಗೆ ಸ್ಪರ್ಧಿಸುತ್ತದೆ.